28.1 C
Sidlaghatta
Friday, April 26, 2024

ವಿಜಾಪುರ ಮಹಿಳಾ ವಿಶ್ವವಿದ್ಯಾಲಯ ‘ಕರ್ನಾಟಕ’ದ್ದಲ್ಲ?

- Advertisement -
- Advertisement -

ಮಹಿಳಾ ವಿಶ್ವವಿದ್ಯಾಲಯ ಪ್ರಾರಂಭ: 1916 ರಲ್ಲಿ ಭಾರತ ರತ್ನ ಮಹರ್ಷಿ ಧೋಂಡೋ ಕೇಶವ ಕಾರ್ವೆಯವರು ಅವಿಭಜಿತ ಮಹಾರಾಷ್ಟ್ರದಲ್ಲಿ (ಮಹರಾಷ್ಟ್ರ ಮತ್ತು ಗುಜರಾತ್ ಸೇರಿ) ಶ್ರೀಮತಿ ನಾತಿಬಾಯಿ ದಾಮೋದರ ಠಾಕರೆ [SNDT] ಮಹಿಳಾ ವಿಶ್ವವಿದ್ಯಾಲಯ ಸ್ಥಾಪಿಸಿದ್ದು ಅದು ಭಾರತದ ಮೊದಲ ಮಹಿಳಾ ವಿಶ್ವವಿದ್ಯಾಲಯವಷ್ಟೇ ಅಲ್ಲ ದಕ್ಷಿಣ ಏಷ್ಯಾದ ಮೊದಲ ಮಹಿಳಾ ವಿಶ್ವವಿದ್ಯಾಲಯ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದಿರುತ್ತದೆ.
ಮಹಿಳಾ ವಿಶ್ವವಿದ್ಯಾಲಯ ಸ್ಥಾಪನೆಯ ಉದ್ದೇಶ
ಪುರುಷ ಪ್ರಧಾನ ವ್ಯವಸ್ಥೆಯಲ್ಲಿ ಮಹಿಳೆಯರಿಗೆ ಸೂಕ್ತ ಸ್ಥಾನ-ಮಾನ ಕಲ್ಪಿಸುವುದು. ಅವರಿಗೆ ಉನ್ನತ ಶಿಕ್ಷಣ ದೊರಕುವಂತೆ ಮಾಡುವ ಮುಖಾಂತರ ಮಹಿಳಾ ಸಬಲೀಕರಣ ಜಾರಿಗೆ ತರುವುದು. ಮಹಿಳೆಯರಿಗೆ ಅವರದ್ದೇ ಆದ ಸಮಸ್ಯೆಗಳಿದ್ದು, ಅವುಗಳ ಪರಿಹಾರಕ್ಕೆ ಪ್ರಯತ್ನಿಸುವುದು. ಅವರಿಗೇ ಮೀಸಲಾದ ವಿಶ್ವವಿದ್ಯಾಲಯದ ಮುಖಾಂತರ ಅವರಿಗೆ ವಿಶೇಷವಾಗಿ ಒಗ್ಗುವ ಗೃಹವಿಜ್ಞಾನ, ಕಸೂತಿಕಲೆ, ಪಿಕ್ಟುರಿಯಲ್ ಸೈನ್ಸ್, ಚಿತ್ರಕಲೆ-ಅಡಿಗೆ-ಪ್ಯಾಶನ್ ಡಿಸೈನಿಂಗ್, ಆಹಾರ ಪದ್ಧತಿ, ಹಾಸ್ಪಿಟಾಲಿಟಿ ಮ್ಯಾನೆಜ್‍ಮೆಂಟ್, ಕಷ್ಟ ನಿರ್ವಹಣೆ, ಮಕ್ಕಳ ಪೋಷಣೆ, ಮಕ್ಕಳ ಶಿಕ್ಷಣ, ಕುಟುಂಬ ನಿರ್ವಹಣೆ, ಹೀಗೆ ಪೂರಕ ವಿಷಯಗಳನ್ನು ಸಾಮಾನ್ಯ ವಿಷಯದೊಂದಿಗೇ ಕಲಿಸುವುದು, ತರಬೇತಿ ನೀಡುವುದು ವರ್ತಮಾನ-ಇತಿಹಾಸ-ಪುರಾಣಗಳಲ್ಲಿನ ಸ್ತ್ರೀಯರ ಸಾಧನೆಗಳನ್ನು ಮುಂದಿಟ್ಟು ಅವರಲ್ಲಿ ಆತ್ಮವಿಶ್ವಾಸದ ಭರವಸೆಯನ್ನು ತುಂಬುವುದು. ಪಠ್ಯೇತರ ಚಟುವಟಿಕೆಗಳಲ್ಲಿ ಪುರುಷರೊಂದಿಗೆ ಸೇರಲು ಸಂಕೋಚಪಡುವ ವಿದ್ಯಾರ್ಥಿನಿಯರಿಗೆ ಮತ್ತು ಅವರೊಂದಿಗೆ ಕಳಿಸಲು ಹಿಂದೇಟು ಹಾಕುವ ಪಾಲಕರಿಗೆ ಭರವಸೆ ಮೂಡಿಸುವುದು ಕೂಡ ಇದರ ಉದ್ದೇಶಗಳಲ್ಲೊಂದಾಗಿತ್ತು. 1950-60 ರ ದಶಕದಲ್ಲಿ ಸ್ನಾತಕೋತ್ತರ ಪದವಿಯನ್ನು ನೀಡಿದ್ದು-ಗುಜರಾತ್ ಮಹಾರಾಷ್ಟ್ರದಿಂದ ಪ್ರತ್ಯೇಕವಾಗುವ ಮೊದಲಿನ ಗುಜರಾತ್ ಭಾಗದ ಮಹಿಳಾ ಕಾಲೇಜುಗಳಿಗೆ 1951 ರಲ್ಲಿ ಮಾನ್ಯತೆ ನೀಡಿದ್ದು, ಇದು ಈ SNDT ಯಡಿ ಗುಜರಾತ್‍ನಲ್ಲಿರುವ 91 ಮಹಿಳಾ ಕಾಲೇಜುಗಳೂ ಇವೆ. ಮಹಾರಾಷ್ಟ್ರದ ಎಲ್ಲ ಮಹಿಳಾ ಕಾಲೇಜುಗಳೂ ಇದರ ವ್ಯಾಪ್ತಿಯಲ್ಲಿದ್ದು ಅಲ್ಲಿನ 26 ಕಾಲೇಜುಗಳಲ್ಲಿ 70000 ವಿದ್ಯಾರ್ಥಿನಿಯರಿದ್ದು 38 ಸ್ನಾತಕೋತ್ತರ ವಿಭಾಗಗಳಿವೆ. ಅದು ಮಹಿಳೆಯರ ಸರ್ವಾಂಗೀಣ ಅಭ್ಯುದಯಕ್ಕೆ ಒತ್ತು ನೀಡುತ್ತಿದೆ. ಪುರುಷ ವ್ಯವಸ್ಥೆಯ ಸಹ-ಶಿಕ್ಷಣ ಪದ್ಧತಿಯ ಅವಲಂಬನೆಯಿಂದ ಮುಕ್ತವಾಗಿ, ವಿದ್ಯಾರ್ಥಿನಿಯರು ಮುಕ್ತವಾಗಿ-ಸ್ವತಂತ್ರವಾಗಿ ಏನನ್ನಾದರೂ ಸಾಧಿಸಬಹುದಾಗಿದೆ.
ಕರ್ನಾಟಕದಲ್ಲಿನ ಸ್ಥಿತಿಗತಿ
ಇದೇ ರೀತಿಯ ಘನ ಉದ್ದೇಶವನ್ನಿಟ್ಟುಕೊಂಡ ಕರ್ನಾಟಕದ ಘನ ಸರ್ಕಾರ 2003 ರ ಆಗಸ್ಟ್ ನಲ್ಲಿ ರಾಜ್ಯದಲ್ಲಿ ಮಹಿಳಾ ವಿಶ್ವವಿದ್ಯಾಲಯವನ್ನು ವಿಜಾಪುರದಲ್ಲಿ ಸ್ಥಾಪಿಸಿತು. ಅದೀಗ ದಶಕದ ಹೊಸ್ತಿಲಲ್ಲಿದೆ ನಿಜ. ಇಂಥ ವಿಶ್ವವಿದ್ಯಾಲಯಗಳ ಹುಟ್ಟು ವಿಶಿಷ್ಟ ಉದ್ದೇಶದಿಂದ ಕೂಡಿದ್ದಾಗಿರುತ್ತದೆ. ನಮ್ಮಲ್ಲಿ ಈಗ ಬೆಂಗಳೂರು, ಶಿವಮೊಗ್ಗ, ತುಮಕೂರು, ಬಳ್ಳಾರಿ, ಬೆಳಗಾವಿ ಮತ್ತು ದಾವಣಗೆರೆಗಳಲ್ಲಿ ಒಟ್ಟು ಹತ್ತು ಸಾಮಾನ್ಯ ವಿಶ್ವವಿದ್ಯಾಲಯಗಳಿವೆ.
ಕರ್ನಾಟಕದಲ್ಲಿ ವಿಶಿಷ್ಟ ಉದ್ದೇಶಗಳನ್ನು ಹೊಂದಿರುವ ಪ್ರಮುಖ ವಿಶ್ವವಿದ್ಯಾಲಯಗಳೆಂದರೆ:
1. ರಾಜೀವಗಾಂಧಿ ವೈದ್ಯಕೀಯ ವಿಶ್ವವಿದ್ಯಾಲಯ – ಬೆಂಗಳೂರು ಇದರ ವ್ಯಾಪ್ತಿಗೆ ಕರ್ನಾಟಕದ ಎಲ್ಲ ವೈದ್ಯಕೀಯ ಕಾಲೇಜುಗಳೂ ಬರುತ್ತವೆ.
2. ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ಬೆಳಗಾವಿ ಇದರ ವ್ಯಾಪ್ತಿಗೆ ರಾಜ್ಯದ ಎಲ್ಲ ಇಂಜಿನಿಯರಿಂಗ್ ಕಾಲೇಜುಗಳೂ ಬರುತ್ತವೆ.
3. ಪಶುವೈದ್ಯಕೀಯ ವಿಶ್ವವಿದ್ಯಾಲಯದ – ಬೀದರ್ ಇದರ ವ್ಯಾಪ್ತಿಗೆ ರಾಜ್ಯದ ಎಲ್ಲ ಪಶುವೈದ್ಯಕೀಯ ಕಾಲೇಜುಗಳೂ ಬರುತ್ತವೆ. ಕಾನೂನು ವಿಶ್ವವಿದ್ಯಾಲಯ – ಹುಬ್ಬಳ್ಳಿ ಇದರ ವ್ಯಾಪ್ತಿಗೆ ರಾಜ್ಯದ ಎಲ್ಲ ಕಾನೂನು ಕಾಲೇಜುಗಳೂ ಬರುತ್ತವೆ.
ಆದರೆ ಮಹಿಳಾ ವಿಶ್ವವಿದ್ಯಾಲಯ ಬಿಜಾಪುರ ಇದರ ವ್ಯಾಪ್ತಿಗೆ ಕೇವಲ ಉತ್ತರ ಕರ್ನಾಟಕದ 13 ಜಿಲ್ಲೆಗಳ ಮಹಿಳಾ ಕಾಲೇಜುಗಳು 42 ಕಾಲೇಜುಗಳು ಮಾತ್ರ ಸೇರಿವೆ. ದಕ್ಷಿಣ ಕರ್ನಾಟಕದ 18 ಜಿಲ್ಲೆಗಳಲ್ಲಿರುವ ಸುಮಾರು 90 ಕಾಲೇಜುಗಳು ಪ್ರತ್ಯೇಕವಾಗಿ ಉಳಿದಿದ್ದು – ಆಯಾ ಜಿಲ್ಲೆಗಳಿಗೆ ಸಂಬಂಧಪಟ್ಟ ಸಾಮಾನ್ಯ ವಿಶ್ವವಿದ್ಯಾಲಯಗಳಡಿಯಲ್ಲಿ ಉಳಿದ ಸಾಮಾನ್ಯ ಸಹ ಶಿಕ್ಷಣದ ಕಾಲೇಜುಗಳಂತೆ ಕಾರ್ಯನಿರ್ವಹಿಸುತ್ತಿವೆ. ಹೆಸರಿಗೆ ಮಾತ್ರ ಮಹಿಳಾ ಕಾಲೇಜುಗಳು ಮಹಿಳಾ ವಿಶ್ವವಿದ್ಯಾಲಯ ಬೇಡ. ಅದರ ಉದ್ದೇಶಗಳು ಇವುಗಳಿಗೆ ಬಹುಶಃ ಅಪಥ್ಯ!
ಹೀಗಾಗಿ ಸ್ತ್ರೀಯರಿಗೆ ಗುಣಾತ್ಮಕ, ಸ್ತ್ರೀಕೇಂದ್ರಿತ ಶಿಕ್ಷಣವನ್ನು ನಿಡುವ ಮಹದಾಸೆಯಿಂದ ಪ್ರಾದುರ್ಭವಿಸಿದ ವಿಶ್ವವಿದ್ಯಾಲಯದ ಮೂಲ ಉದ್ದೇಶಕ್ಕೆ ಈ ದಕ್ಷಿಣ ಕರ್ನಾಟಕದ ಜಿಲ್ಲೆಗಳಲ್ಲಿನ ಮಹಿಳಾ ಕಾಲೇಜುಗಳು ಹೊರಗುಳಿದು – ಅಲ್ಲಿನ ವಿದ್ಯಾರ್ಥಿನಿಯರಿಗೆ ಅವರದ್ದೇ ವಿಶ್ವವಿದ್ಯಾಲಯ ನೀಡುವ ಅನೇಕ ಅವಕಾಶಗಳಿಂದ ವಂಚಿತರಾಗಿದ್ದಾರೆ.
ಇಡಿಯ ಕರ್ನಾಟಕದ ಎಲ್ಲ ಮಹಿಳಾ ಕಾಲೇಜುಗಳನ್ನೂ ವಿಜಾಪುರದ ಮಹಿಳಾ ವಿಶ್ವವಿದ್ಯಾಲಯದ ವ್ಯಾಪ್ತಿಗೆ ತರಬೇಕೆಂಬ ಉದ್ದೇಶ ಇನ್ನೂ ಈಡೇರಿಲ್ಲ. ಈ ಕುರಿತು ಶಾಸನ ಸಭÉಯಲ್ಲಿ ಮತ್ತು ಎಂ.ಪಿ. ಪ್ರಕಾಶರವರೂ ಸೇರಿದಂತೆ ಕರ್ನಾಟಕದ ಜನ ಪ್ರತಿನಿಧಿಗಳು ಪ್ರಭಲವಾಗಿ ವಾದ ಮಂಡಿಸಿದ್ದರೂ ಪ್ರಯೋಜನವಾಗಲಿಲ್ಲ. ದಕ್ಷಿಣ ಕರ್ನಾಟಕದವರಿಗೆ ವಿಜಾಪುರ ತುಂಬಾ ದೂರದಲ್ಲಿದೆ ಎಂಬ ಸಬೂಬು ಹೇಳಿ – ಒಂದು ಮಹಿಳಾ ವಿಶ್ವವಿದ್ಯಾಲಯಕ್ಕೆ ಬಲಕೊಡುವ ಬದಲು ಅದನ್ನು ಪ್ರತ್ಯೇಕವಾಗಿಸಲಾಗಿದೆ. ಉತ್ತರ ಕರ್ನಾಟಕದ ಆರ್ಥಿಕ – ಶೈಕ್ಷಣಿಕ ಹಿಂದುಳಿದಿರುವಿಕೆಯ ಕುರಿತು ಡಾ. ನಂಜುಡಪ್ಪ ಸಮಿತಿ ಆಳವಾದ ಅಧ್ಯಯನ ನಡೆಸಿ – ಇಲ್ಲಿನ ಅಭಿವೃದ್ಧಿಗೆ ಉತ್ತರ ಮತ್ತು ದಕ್ಷಿಣ ಕರ್ನಾಟಕ ಪರಸ್ಪರ ವಿನಿಮಯ ಪದ್ಧತಿಗೆ ಬರಬೇಕೆಂಬುದನ್ನು ಒತ್ತಿ ಹೇಳಿದೆ. ಹಾಗಿದ್ದೂ ಈ ಮಹಿಳಾ ವಿಶ್ವವಿದ್ಯಾಲಯದ ವ್ಯಾಪ್ತಿಗೆ ದಕ್ಷಿಣ ಕರ್ನಾಟಕದ ಮಹಿಳಾ ಕಾಲೇಜುಗಳು ಸೇರದೆ – ಪರಸ್ಪರ ಹಂಚಿಕೊಳ್ಳಬಹುದಾಗಿದ್ದ ಶೈಕ್ಷಣಿಕ – ಸಾಂಸ್ಕøತಿಕ ಸಂಪತ್ತನ್ನು ಪ್ರತ್ಯೇಕವಾಗಿಡಲಾಗಿದೆ. ಹೀಗೆ ಉತ್ತರ ಕರ್ನಾಟಕದ ಮಹಿಳಾ ಕಾಲೇಜುಗಳಿಗೆ ಒಂದು ವಿಶ್ವವಿದ್ಯಾಲಯ – ದಕ್ಷಿಣ ಕರ್ನಾಟಕದ ಮಹಿಳಾ ಕಾಲೇಜುಗಳಿಗೆ ಹಲವು ವಿಶ್ವವಿದ್ಯಾಲಯವೆಂದು ಹೇಳುವ ಮುಖಾಂತರ ಕರ್ನಾಟಕದ ಅಖಂಡತೆಯ ಕುರಿತೇ ಅನುಮಾನ ಮೂಡಿಸಿದ್ದರಲ್ಲಿ ವಿದ್ಯಾರ್ಥಿನಿಯರ ತಪ್ಪೇನೂ ಇಲ್ಲ. ಅವರು ಯಾರೂ ಈ ಕುರಿತು ಅಪಸ್ವರ ಎತ್ತಲಿಲ್ಲ ಆದರೆ ರಾಜಕಾರಣದ ಕಾಣದ ಕೈಗಳು – ಪರಸ್ಪರ ದೂರುವುಳಿವಂತೆ ಮಾಡಿವೆ ಹೀಗೆ ಬೇರೆÀ ಇರಲು ಇಲ್ಲಿನವರು ನೀಡುವ ಕಾರಣ ವಿಜಾಪುರ ದೂರ ಎನ್ನುವುದು ಈ ದೂರ ಎಲ್ಲಿಂದ? ಯಾರಿಗೆ? ಎಂಬ ಪ್ರಶ್ನೆಗಳಿಗೆ ಉತ್ತರ ಬೇಕಿದೆ. ಇಂದಿನ ಸಾರಿಗೆ – ಸಂಪರ್ಕ ಮತ್ತು ಮೂಲಭೂತ ಸೌಕರ್ಯಗಳ ಲಭ್ಯತೆ ಜೊತೆಗೆ ಮಾಹಿತಿ ತಂತ್ರಜ್ಞಾನ – ಅಂತರ್ಜಾಲ ಸೌಲಭ್ಯಗಳೆಲ್ಲ ಲಭ್ಯವಿರುವಾಗ ದೂರ ಎನ್ನುವುದು ದೂರವಿರಿಸುವುದಕ್ಕೆ ನೆಪಮಾತ್ರ.
ದೂರದ ಯಾದಗಿರಿಯಿಂದ ಜನರು ಸರ್ಕಾರಿ ಅಥವಾ ಇನ್ನಿತರ ಕೆಲಸಗಳಿಗೆ ಬೆಂಗಳೂರಿಗೆ ಬರುತ್ತಾರೆ (ಸುಮಾರು 1200 ಕಿ.ಮಿ.) ಇಂಜಿನಿಯರಿಂಗ್ ಕಾಲೇಜುಗಳಿಗೆ ಬೆಳಗಾವಿ ನಡೆಯುತ್ತದೆ. ಪಶು ವೈದ್ಯಕೀಯ ಕಾಲೇಜುಗಳಿಗೆ ಬೀದರ್ ನಡೆಯುತ್ತದೆ. ಹಾಗೇ ವೈದ್ಯಕೀಯ ಕಾಲೇಜುಗಳಿಗೆ ಬೀದರಿಂದ ಬೆಂಗಳೂರು ದೂರವಲ್ಲ. ಕಾನೂನು ಕಾಲೇಜುಗಳಿಗೆ ಹುಬ್ಬಳ್ಳಿಯ ಕುರಿತು ತಕರಾರಿಲ್ಲ. ಆದರೆ ಅದೇ ಮಹಿಳಾ ಕಾಲೇಜುಗಳಿಗಾದರೆ ಬಿಜಾಪುರ ದೂರ ಬಹುಶಃ ಈ ದೂರ ಎನ್ನುವುದು ಕಿ.ಮಿ. ಅಂತರಕ್ಕಿಂತ ಹೆಚ್ಚಾಗಿ ಮಾನಸಿಕ ದೂರ ಎಂದು ಬದಿಗೆ ಸರಿಸಿದರೆ ಇಡೀ ಕರ್ನಾಟಕ ಒಂದೇ ಎಂಬ ಕಲ್ಪನೆಯನ್ನೂ ದೂರ ಸರಿಸಿದಂತಾಗುವುದಿಲ್ಲವೇ?
ಕರ್ನಾಟಕದಲ್ಲಿರುವ ಎಲ್ಲ ಜಿಲ್ಲೆಗಳ ಎಲ್ಲ ಮಹಿಳಾ ಕಾಲೇಜುಗಳೂ – ಮಹಿಳಾ ವಿಶ್ವವಿದ್ಯಾಲಯ – ಬಿಜಾಪುರ ಇದರ ವ್ಯಾಪ್ತಿಗೆ ಒಳಪಡಬೇಕಾದ್ದು ನ್ಯಾಯಯುತವಾದದ್ದು. ತನ್ಮೂಲಕ ಕರ್ನಾಟಕದ ಎಲ್ಲ ಮಹಿಳೆಯರ ಅಭಿವೃದ್ಧಿಯ ಕನಸನ್ನು ಸಾಕಾರಗೊಳಿಸಿಕೊಳ್ಳಲು ಸಾಧ್ಯ. ತಮ್ಮನ್ನು ತಾವು ಬಲಗೊಳಿಸಿಕೊಳ್ಳಲು ಅಗತ್ಯವಾದ ಅವಕಾಶವನ್ನು ಕಲ್ಪಿಸಿಕೊಟ್ಟಾಗ ಅದರ ಪ್ರಯೋಜನವನ್ನು ಗರಿಷ್ಠ ಮಟ್ಟದಲ್ಲಿ ಬಳಸಿಕೊಳ್ಳದೆ ಹೋದರೆ ತಪ್ಪು ಯಾರದ್ದಾಗುತ್ತದೆ? ಘನ ಉದ್ದೇಶದಿಂದ ಸ್ಥಾಪಿತವಾದ ಒಂದು ವಿಶ್ವವಿದ್ಯಾಲಯವನ್ನು ಒಂದು ಭಾಗಕ್ಕಷ್ಟೇ ಸೀಮಿತಗೊಳಿಸಿದರೆ – ಅಲ್ಲಿನವರ ಮನೋಭಾವ ದಕ್ಷಿಣ ಕರ್ನಾಟಕದ ಕುರಿತು ಏನಾಗಿ ಬೆಳೆಯಬಹುದು? ಪರಸ್ಪರ ಹೊಂದಿಕೊಂಡು – ಕೇವಲ ತಮ್ಮ ದೂರವನ್ನಷ್ಟೇ ದೊಡ್ಡದು ಮಾಡದೆ ದೊಡ್ಡ ಮನಸ್ಸು ಮಾಡಿದರೆ – ಅಖಂಡ ಕರ್ನಾಟಕದ ಪರಿಕಲ್ಪನೆಗೆ ಅರ್ಥ ಪ್ರಾಪ್ತವಾದೀತಲ್ಲವೇ? ಈ ದಿಶೆಯಲ್ಲಿ ಸಂಬಂಧಪಟ್ಟ ಮಹಿಳಾ ಕಾಲೇಜುಗಳಿಗೆ ಸರಕಾರ ತಿಳಿಹೇಳುವ ತುರ್ತು- ಅಗತ್ಯವೆನಿಸಿದರೆ ಕಾನೂನು ರೀತ್ಯಾ ಅವುಗಳನ್ನೆಲ್ಲ ಒಂದೇ ವಿಶ್ವವಿದ್ಯಾಲಯದ ವ್ಯಾಪ್ತಿಯೊಳಗಡೆ ತಂದರೆ – ವಿಶ್ವವಿದ್ಯಾಲಯದ ಸ್ಥಾಪನೆಯ ಉದ್ದೇಶ ನೆರವೇರಬಹುದು. ಮತ್ತು ವಿಶ್ವವಿದ್ಯಾಲಯ ಸದೃಢವಾಗಿ ಬೆಳೆಯಲು ಸಾಧ್ಯವಾಗಬಹುದು. ಯಾವುದಕ್ಕೂ ಸರಕಾರಕ್ಕೆ ಇಚ್ಛಾಶಕ್ತಿ ಪ್ರಾಪ್ತವಾಗಬೇಕು! ಮಹಾರಾಷ್ಟ್ರದ ಎಸ್.ಎನ್.ಡಿ.ಟಿ. ಯಂತೆ ವಿಜಾಪುರದ ಮಹಿಳಾ ವಿಶ್ವವಿದ್ಯಾಲಯವೂ ಯಾಕೆ ಬೆಳೆಯಬಾರದು? ಯಾಕೆ ಬೆಳೆಯಬಾರದು ಎಂಬುದಕ್ಕಿಂತ ಯಾಕೆ ಬೆಳೆಸಬಾರದು? ಯೋಚಿಸಲು ಇದು ಸಕಾಲ.
ರವೀಂದ್ರ ಭಟ್ ಕುಳಿಬೀಡು.

Subscribe to ನಮ್ಮ ಶಿಡ್ಲಘಟ್ಟ Newspaper

Launching Soon! Register for your Free Newspaper Copy Today.

- Advertisement -

Just Published

Latest news

- Advertisement -

Covid-19

Silk

Related news

- Advertisement -

LEAVE A REPLY

Please enter your comment!
Please enter your name here
This site is protected by reCAPTCHA and the Google Privacy Policy and Terms of Service apply.

The reCAPTCHA verification period has expired. Please reload the page.
Captcha verification failed!
CAPTCHA user score failed. Please contact us!
error: Content is protected !!