January 17, 2018

Breaking News

ಜೈವಿಕ ಇಂಧನದ ಕುರಿತಂತೆ ಗ್ರಾಮೀಣ ಕೃಷಿ ಕಾರ್ಯಾಗಾರ

ಸಸ್ಯ ಬೀಜಗಳಿಂದ ಪಡೆದ ಇಂಧನವನ್ನು ಜೈವಿಕ ಇಂಧನ ಎಂದು ಕರೆಯುವರು. ನಾವು ಬಳಸುವ ಪೆಟ್ರೋಲ್‌ ಡೀಸಲ್‌ ಇಂಧನಕ್ಕೆ ಪರ್ಯಾಯವಾಗಿ ಇತ್ತೀಚಿನ ದಿನಗಳಲ್ಲಿ ಜೈವಿಕ ಇಂಧನದ ಪ್ರಾಮುಖ್ಯತೆ ಹೆಚ್ಚುತ್ತಿದೆ ಎಂದು ರೇಷ್ಮೆ ಕೃಷಿ ಮಹಾವಿದ್ಯಾಲಯದ ಪ್ರಾಧ್ಯಾಪಕ ಪ್ರೊ. ಎಂ.ವಿಜಯೇಂದ್ರ ತಿಳಿಸಿದರು.

ತಾಲ್ಲೂಕಿನ ಶೀಗೆಹಳ್ಳಿ ಗ್ರಾಮದಲ್ಲಿ ಗುರುವಾರ ರಾತ್ರಿ ಚಿಂತಾಮಣಿಯ ರೇಷ್ಮೆ ಕೃಷಿ ಮಹಾವಿದ್ಯಾಲಯದ ವಿದ್ಯಾರ್ಥಿಗಳು ಜಿಕೆವಿವಿ ಕೃಷಿ ವಿವಿ ಸಹಯೋಗದೊಂದಿಗೆ ಜೈವಿಕ ಇಂಧನದ ಕುರಿತಂತೆ ನಡೆಸಿದ ಗ್ರಾಮೀಣ ಕೃಷಿ ಕಾರ್ಯಾಗಾರದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಹೊಂಗೆ, ಹಿಪ್ಪೆ ಮತ್ತು ಬೇವು ಬೀಜಗಳಿಂದ ಡೀಸಲ್‌ ತಯಾರಿಸಬಹುದಾಗಿದೆ. ಜೈವಿಕ ಇಂಧನವು ವ್ಯವಸಾಯಿಕ ಹಾಗೂ ಆಮ್ಲಜನಕದಂತ ಜೈವಿಕ ಪ್ರಕ್ರಿಯೆಯಿಂದಾಗಿ ಉತ್ಪಾದಿಸಲ್ಪಡುತ್ತದೆ. ಜೈವಿಕ ಇಂಧನವು ಪಳೆಯುಳಿಕೆ ಇಂಧನಗಳಾದ ಕಲ್ಲಿದ್ದಲು ಪೆಟ್ರೋಲಿಯಂ ಹಾಗೂ ಡೀಸೆಲ್ ಇವುಗಳ ಹಾಗೆಯೇ ವರ್ತಿಸುತ್ತದೆ. ಆದರೆ ಇವುಗಳ ಹಾಗೆ ಇಂಗಾಲದ ಡೈಆಕ್ಸೈಡನ್ನು ಉತ್ಪಾದಿಸುವುದಿಲ್ಲ. ಗ್ರಾಮಗಳಲ್ಲಿ ಖಾಲಿ ಸ್ಥಳಗಳಲ್ಲಿ ಹೊಂಗೆ, ಹಿಪ್ಪೆ ಮತ್ತು ಬೇವು ಗಿಡಗಳನ್ನು ನೆಟ್ಟು ಪೋಷಿಸುವ ಮೂಲಕ ಆದಾಯವನ್ನು ಸಹ ಹೊಂದಬಹುದಾಗಿದೆ ಎಂದು ವಿವರಿಸಿದರು.

ಈ ಸಂದರ್ಭದಲ್ಲಿ ರೇಷ್ಮೆ ಕೃಷಿ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ವತಿಯಿಂದ 13 ಮಂದಿ ಅಂತಿಮ ವರ್ಷದ ರೇಷ್ಮೆ ಕೃಷಿ ವಿದ್ಯಾರ್ಥಿಗಳು ಜೈವಿಕ ಇಂಧನದ ಮಹತ್ವವನ್ನು ತಿಳಿಸಿ ಉಚಿತವಾಗಿ ಹೊಂಗೆ, ಹಿಪ್ಪೆ ಮತ್ತು ಬೇವು ಗಿಡಗಳನ್ನು ಗ್ರಾಮಸ್ಥರಿಗೆ ವಿತರಿಸಿದರು.

ರೇಷ್ಮೆ ಕೃಷಿ ವಿಜ್ಞಾನಿಗಳಾದ ನಾರಾಯಣಸ್ವಾಮಿ, ಅಮರನಾಥ್‌, ಹರೀಶ್‌ಬಾಬು, ಜೈವಿಕ ಇಂಧನ ವಿಜ್ಞಾನಿ ವೆಂಕಟೇಶ್‌, ವಿಜ್ಞಾನಿಗಳಾದ ಸುಭಾಷ್‌ ರಘು, ಶರತ್‌, ಸಾಗರ್‌, ಸುಮ, ಸುಪ್ರಿಯ, ಸೋಮೇಶ್‌, ಸಂದೀಪ್‌, ಶ್ವೇತ, ಝಾಕಿಯಾ, ರವಿತೇಜ, ಮೋಹನ್‌ಕುಮಾರ್‌ ಹಾಜರಿದ್ದರು.

About The Author

News, activities, lifestyle, business, culture and amazing people. Sidlaghatta, everything about a small town with a huge presence.

Related posts

Leave a Reply

Your email address will not be published. Required fields are marked *

Time limit is exhausted. Please reload the CAPTCHA.