ಹರ್ಷ ನಿರ್ದೇಶನದ 2022 ರ ಕನ್ನಡ ಭಾಷೆಯ “ವೇದ – Vedha” ಆಕ್ಷನ್ ಚಲನಚಿತ್ರವಾಗಿದೆ. ಜೀ ಸ್ಟುಡಿಯೋಸ್ ಸಹಯೋಗದಲ್ಲಿ “Geetha Pictures” ಬ್ಯಾನರ್ ಅಡಿಯಲ್ಲಿ ಗೀತಾ ಶಿವರಾಜಕುಮಾರ್ ಅವರು ಚಲನಚಿತ್ರವನ್ನು ನಿರ್ಮಿಸಿದ್ದಾರೆ. ಚಿತ್ರದಲ್ಲಿ ಶಿವ ರಾಜ್ಕುಮಾರ್ ಮತ್ತು ಘನವಿ ಲಕ್ಷ್ಮಣ್ ಮುಖ್ಯ ಪಾತ್ರದಲ್ಲಿದ್ದಾರೆ ಮತ್ತು ಉಮಾಶ್ರೀ, ಅದಿತಿ ಸಾಗರ್, ಶ್ವೇತಾ ಚೆಂಗಪ್ಪ ಮತ್ತು ಕುರಿ ಪ್ರತಾಪ್ ಪೋಷಕ ಪಾತ್ರಗಳಲ್ಲಿ ನಟಿಸಿದ್ದಾರೆ.
ಈ ಚಿತ್ರವು ಶಿವ ರಾಜ್ಕುಮಾರ್ ಅವರ 125 ನೇ ಚಲನಚಿತ್ರ.