Home News ‘ಅಂಚೆ ಸಪ್ತಾಹ’ದ ಅಂಗವಾಗಿ ಸಾರ್ವಜನಿಕರಿಂದ ಹೊಸ ಅಂಚೆ ಖಾತೆಗಳನ್ನು ತೆರೆಸಿದ ಇಲಾಖೆ

‘ಅಂಚೆ ಸಪ್ತಾಹ’ದ ಅಂಗವಾಗಿ ಸಾರ್ವಜನಿಕರಿಂದ ಹೊಸ ಅಂಚೆ ಖಾತೆಗಳನ್ನು ತೆರೆಸಿದ ಇಲಾಖೆ

0

ಭಾರತೀಯ ಅಂಚೆ ದಿನದ ಅಂಗವಾಗಿ ‘ಅಂಚೆ ಸಪ್ತಾಹ’ವನ್ನು ಹಮ್ಮಿಕೊಂಡಿದ್ದೇವೆ. ಎಲ್ಲಾ ಸ್ಥರದವರಿಗೂ ಬ್ಯಾಂಕಿಂಗ್ ವ್ಯವಸ್ಥೆಯನ್ನೂ ಒದಗಿಸುತ್ತಿದ್ದು, ಸಾರ್ವಜನಿಕರ ನಡುವೆ ಬಂದು ಅಂಚೆ ಇಲಾಖೆಯ ಸೌಲಭ್ಯಗಳ ಬಗ್ಗೆ ಅರಿವು ಮೂಡಿಸುತ್ತಾ ಖಾತೆಗಳನ್ನು ಮಾಡಿಸುತ್ತಿದ್ದೇವೆ ಎಂದು ಉಪ ಅಂಚೆ ಪಾಲಕ ಸಿ.ವಿ.ವೆಂಕಟಾಚಲಪತಿ ತಿಳಿಸಿದರು.
ನಗರದ ಕೋಟೆ ವೃತ್ತದ ಬಳಿ ಅಂಚೆ ಇಲಾಖೆಯ ವತಿಯಿಂದ ಮಂಗಳವಾರ ಆಯೋಜಿಸಿದ್ದ ‘ಅಂಚೆ ಸಪ್ತಾಹ’ದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಅಂಚೆ ಇಲಾಖೆಯು ಹಣಕಾಸು ವ್ಯವಹಾರವನ್ನು ಎ.ಟಿ,ಎಂ ವರೆಗೂ ವಿಸ್ತರಿಸಿದೆ. ಕೇವಲ ೫೦ ರೂ ಕಟ್ಟುವ ಮೂಲಕ ಎಸ್ ಬಿ ಖಾತೆಯನ್ನು ತೆರೆಯಬಹುದು. ವಿಮೆ ಸೌಲಭ್ಯ ಸಹ ಇದೆ. ಈಗ ಇನ್ನೊಂದು ಹೆಜ್ಜೆ ಮುಂದೆ ಹೋಗಿ ಇಂಡಿಯನ್ ಪೋಸ್ಟ್ ಪೇಮೆಂಟ್ ಬ್ಯಾಂಕ್ ಕ್ಷೇತ್ರಕ್ಕೂ ಕಾಲಿಡಲಿದೆ. ಮುಂದಿನ ವರ್ಷದಿಂದ ಅಂಚೆಯಣ್ಣ ಮನೆ ಬಾಗಿಲಿಗೆ ಬಂದು ವಿವಿಧ ರೀತಿಯ ಹಣಕಾಸು ವ್ಯವಹಾರಗಳ ಸೇವೆ ನೀಡಲಿದ್ದಾರೆ.
ಆರಂಭದಲ್ಲಿ ಪತ್ರ ರವಾನಗಷ್ಟೆ ಸೀಮಿತವಾಗಿದ್ದ ಅಂಚೆ ಇಲಾಖೆ ಈಗ ಹಲವಾರಉ ಸೇವೆಗಳನ್ನು ನೀಡುತ್ತಾ ಬಂದಿದೆ. ಆರ್.ಡಿ, ಎಫ್.ಡಿ, ಎಸ್.ಬಿ, ಎನ್.ಎಸ್.ಸಿ, ಎಂ.ಐ.ಸಿ, ಕೆ.ವಿ.ಸಿ, ಪಿ.ಪಿ.ಎಫ್, ಮನಿ ಆರ್ಡರ್, ಪಿ.ಎಲ್.ಐ, ಗ್ರಾಮೀಣ ಅಂಚೆ ಜೀವವಿಮೆ, ಕೇಂದ್ರ ಸರ್ಕಾರದ ಸುಕನ್ಯಾ ಸಮೃದ್ಧಿ ಯೋಜನೆ, ಗ್ರಾಮೀಣ ಭಾಗಗಳಲ್ಲಿ ಅತ್ಯುತ್ತಮವಾಗಿ ಸೇವೆ ಸಲ್ಲಿಸುತ್ತಿದೆ ಇಲಾಖೆ ಎಂದು ಅವರು ವಿವರಿಸಿದರು.