Home News ಅಂತರಾಷ್ಟ್ರೀಯ ಟೆಕ್ವಾಂಡೋ ಚಾಂಪಿಯನ್ ಶಿಫ್ ; ಶಿಡ್ಲಘಟ್ಟದ ಸರ್ಕಾರಿ ಕಾಲೇಜಿನ ವಿದ್ಯಾರ್ಥಿ ಧನಂಜಯ್‌ಗೆ ಚಿನ್ನದ ಪದಕ

ಅಂತರಾಷ್ಟ್ರೀಯ ಟೆಕ್ವಾಂಡೋ ಚಾಂಪಿಯನ್ ಶಿಫ್ ; ಶಿಡ್ಲಘಟ್ಟದ ಸರ್ಕಾರಿ ಕಾಲೇಜಿನ ವಿದ್ಯಾರ್ಥಿ ಧನಂಜಯ್‌ಗೆ ಚಿನ್ನದ ಪದಕ

0

ಭೂತಾನ್‌ ದೇಶದ ಪುಂಟ್‌ಶೋಲಿಂಗ್‌ ನಗರದಲ್ಲಿ ಭೂತಾನ್ ಒಲಂಪಿಕ್ ಕಮಿಟಿ ಹಾಗೂ ಭೂತಾನ್ ಟೆಕ್ವಾಂಡೋ ಫೆಡರೇಷನ್‌ನ ಆಶ್ರಯದಲ್ಲಿ ನಡೆದ ಎರಡನೇ ಅಂತಾರಾಷ್ಟ್ರೀಯ ಇಂಡೋ ಭೂತಾನ್‌ ಟೆಕ್ವಾಂಡೋ ಚಾಂಪಿಯನ್ ಶಿಫ್ ಕರಾಟೆಯಲ್ಲಿ ನಗರದ ಕರಾಟೆ ಪಟು ವಿ.ಧನಂಜಯ್ ೬೦ ಕೆಜಿ ವಿಭಾಗದಲ್ಲಿ ಚಿನ್ನದ ಪದಕ ಗೆದ್ದಿದ್ದಾನೆ.
ಕುಂಬಾರ ಪೇಟೆಯ ವೆಂಕಟೇಶ್‌ರ ಪುತ್ರನಾದ ಧನಂಜಯ್ ನಗರದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ದ್ವಿತೀಯ ಪಿಯುಸಿ ವಿದ್ಯಾರ್ಥಿ ಆಗಿದ್ದಾನೆ.
ಅಂತಾರಾಷ್ಟ್ರೀಯ ಚಾಂಪಿಯನ್ ಶಿಫ್ ಕರಾಟೆಯಲ್ಲಿ ಚಿನ್ನದ ಪದಕ ಗಳಿಸಿ ತಾಲ್ಲೂಕಿಗೆ ಕೀರ್ತಿ ತಂದಿರುವ ಧನಂಜಯ್‌ರನ್ನು ಲಯನ್ ಕ್ರೀಡಾ ಮತ್ತು ಸಾಂಸ್ಕೃತಿಕ ಸಂಘದ ಗೌರವಾಧ್ಯಕ್ಷ ಮುನಿರಾಜು, ಪುರುಷೋತ್ತಮ್, ಲಕ್ಷ್ಮೀಪತಿ, ಶೇಖರ್, ಹರೀಶ್, ಜಗನ್, ಚಲಪತಿ, ಮಂಜು ಅಭಿನಂದಿಸಿದ್ದಾರೆ.

error: Content is protected !!