Home News ಅಪ್ಪೇಗೌಡನಹಳ್ಳಿಯಲ್ಲಿ ಆಮೆಯ ರಕ್ಷಣೆ

ಅಪ್ಪೇಗೌಡನಹಳ್ಳಿಯಲ್ಲಿ ಆಮೆಯ ರಕ್ಷಣೆ

0

ತಾಲ್ಲೂಕಿನ ಅಪ್ಪೇಗೌಡನಹಳ್ಳಿಯ ನಾಗೇಂದ್ರಬಾಬು ಅವರು ಬುಧವಾರ ತಮ್ಮ ತೋಟದಲ್ಲಿ ಕಂಡುಬಂದ ಆಮೆಯೊಂದನ್ನು ಸ್ನೇಹಿತರ ನೆರವಿನಿಂದ ಗ್ರಾಮದ ಕುಂಟೆಗೆ ಬಿಟ್ಟಿದ್ದಾರೆ.
‘ತೋಟದಲ್ಲಿ ಕೆಲಸ ಮಾಡುವಾಗ ಆಮೆಯು ಕಂಡು ಬಂದಿತು. ಅದು ಹೇಗೆ ಅಲ್ಲಿಗೆ ಬಂದಿತೋ ಗೊತ್ತಿಲ್ಲ. ಬಿಸಿನ ಝಳಕ್ಕೆ ನಾವೇ ಕಂಗಾಲಾಗುವಾಗ ಅದರ ಪರಿಸ್ಥಿತಿ ಹೇಗಿರಬೇಕು. ತಕ್ಷಣವೇ ಸ್ನೇಹಿತರಿಗೆ ತಿಳಿಸಿದೆ. ಅವರ ನೆರವಿನಿಂದ ಕುಂಟೆಯಲ್ಲಿ ಬಿಡಲು ಹೋದೆವು. ಆಗ ನಮ್ಮೂರಿನ ಗ್ರಾಮ ಪಂಚಾಯಿತಿ ಸದಸ್ಯ ಎ.ಎಂ.ತ್ಯಾಗರಾಜ್‌ ಈ ಆಮೆಯನ್ನು ನಮ್ಮ ಶಾಲೆಯ ಮಕ್ಕಳಿಗೆ ತೋರಿಸಿ ನಂತರ ಬಿಡೋಣ. ಮಕ್ಕಳು ಎಂದೂ ಆಮೆಯನ್ನು ನೋಡಿರುವುದಿಲ್ಲ ಎಂದರು. ಅದಕ್ಕಾಗಿ ನಮ್ಮೂರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಹೋದೆವು. ಅಲ್ಲಿ ಶಿಕ್ಷಕ ಚಾಂದ್‌ಪಾಷ ಮಕ್ಕಳಿಗೆ ಆಮೆಯ ಕುರಿತಂತೆ ವಿವರಿಸಿದರು. ನಂತರ ಕುಂಟೆಯಲ್ಲಿ ಅದನ್ನು ಬಿಟ್ಟೆವು’ ಎಂದು ನಾಗೇಂದ್ರಬಾಬು ತಿಳಿಸಿದರು.
‘ಈ ಆಮೆಯನ್ನು ಇಂಡಿಯನ್ ಫ್ಲಾಪ್‌ ಶೆಲ್‌ ಟರ್ಟಲ್‌ ಎಂದು ಇಂಗ್ಲೀಷಿನಲ್ಲಿ ಕರೆಯುತ್ತಾರೆ. ಸಿಹಿನೀರಿನಲ್ಲಿ ವಾಸಿಸುವ ಈ ಆಮೆ ದಕ್ಷಿಣ ಏಷ್ಯಾ ದೇಶಗಳಲ್ಲಿ ಕಂಡುಬರುತ್ತವೆ. ಚಿಪ್ಪಿನ ಆಕಾರ ಹೊಂದಿರುವ ಆಮೆಗಳು ಸರೀಸೃಪ ಜಾತಿಗೆ ಸೇರಿದವು. ಅನೇಕ ಆಮೆಗಳು ತಮ್ಮ ಜೀವನದ ಬಹುದೊಡ್ಡ ಭಾಗವನ್ನು ನೀರಿನಲ್ಲಿಯೇ ಕಳೆದರೂ ಎಲ್ಲ ಆಮೆಗಳು, ಕಡಲಾಮೆಗಳು ಗಾಳಿಯನ್ನು ಉಸಿರಾಡುತ್ತವೆ. ಮತ್ತು ತಮ್ಮ ಪುಪ್ಪುಸವನ್ನು ತುಂಬಿಕೊಳ್ಳಲು ನಿಯಮಿತ ಆವೃತ್ತಿಯಲ್ಲಿ ನೀರಿನಿಂದ ಮೇಲೆ ಬರಲೇ ಬೇಕು’ ಎಂದು ಶಿಕ್ಷಕ ಚಾಂದ್‌ ಪಾಷ ಶಾಲಾ ವಿದ್ಯಾರ್ಥಿಗಳಿಗೆ ಆಮೆಯ ಕುರಿತಂತೆ ವಿವರಿಸಿದರು.
ಗ್ರಾಮದ ಆದರ್ಶ್‌ಗೌಡ, ಅಮೂಲ್ಯ, ನರಸಿಂಹಮೂರ್ತಿ, ಪ್ರದೀಪ್‌, ಮುನಿರಾಜು, ಹೇಮಂತ್‌ ಈ ಸಂದರ್ಭದಲ್ಲಿ ಇದ್ದರು.