Home News ಆನೂರು ಪಂಚಾಯಿತಿ ವತಿಯಿಂದ ಸ್ವಚ್ಛತೆ ಕಾರ್ಯ

ಆನೂರು ಪಂಚಾಯಿತಿ ವತಿಯಿಂದ ಸ್ವಚ್ಛತೆ ಕಾರ್ಯ

0

ಐಕ್ಯತೆ, ಆರೋಗ್ಯ ಹಾಗೂ ಸ್ವಚ್ಛ ಪರಿಸರವನ್ನು ಉಂಟುಮಾಡುವ ಉದ್ದೇಶದಿಂದ ಆನೂರು ಗ್ರಾಮ ಪಂಚಾಯಿತಿ ವತಿಯಿಂದ ಎಲ್ಲಾ ಗ್ರಾಮಗಳಲ್ಲೂ ಗ್ರಾಮಸ್ಥರ ನೆರವಿನೊಂದಿಗೆ ಸ್ವಚ್ಛತೆ ಕಾರ್ಯವನ್ನು ಕೈಗೊಂಡಿದ್ದೇವೆ ಎಂದು ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಅರುಣಕುಮಾರಿ ತಿಳಿಸಿದರು.
ತಾಲ್ಲೂಕಿನ ಹಿತ್ತಲಹಳ್ಳಿಯಲ್ಲಿ ಗ್ರಾಮ ಪಂಚಾಯಿತಿಯ ವತಿಯಿಂದ ಸ್ವಚ್ಛತೆ ಕಾರ್ಯವನ್ನು ನಡೆಸಿ ಅವರು ಮಾತನಾಡಿದರು.
ಹಿತ್ತಲಹಳ್ಳಿ ಗ್ರಾಮದಲ್ಲಿ ಕಳೆದ ಮೂರು ತಿಂಗಳಿನಿಂದ ಸ್ವಚ್ಛತೆ ಆಂದೋಲನವನ್ನು ಹಮ್ಮಿಕೊಂಡಿದ್ದಾರೆ. ಗ್ರಾಮದ ಯುವಕರು ಪ್ರತೀ ವಾರ ಸ್ವಚ್ಛತೆಯನ್ನು ನಡೆಸುತ್ತಾರೆ. ಪಂಚಾಯಿತಿ ವತಿಯಿಂದ ಒಂದು ತಿಂಗಳ ಕಾಲ ನಡೆಸುತ್ತಿರುವ ಸ್ವಚ್ಛತಾ ಕಾರ್ಯಕ್ಕೆ ಹಿರಿಯರು ಕಿರಿಯರು ಬೇಧವಿಲ್ಲದೆ ಜೊತೆಗೂಡಿ ಶ್ರಮದಾನ ಮಾಡುತ್ತಿದ್ದಾರೆ. ಎಲ್ಲೆಡೆ ‘ನಮ್ಮ ಗ್ರಾಮವನ್ನು ಸ್ವಚ್ಛವಾಗಿರಿಸಬೇಕು’ ಎಂಬ ಮನೋಭಾವ ಮೂಡಬೇಕು. ಈ ತಿಂಗಳ 19ನೇ ತಾರೀಕು ಬೆಂಗಳೂರಿನಿಂದ ವೀಕ್ಷಣೆಗೆ ಒಂದು ತಂಡ ಬರುತ್ತಿದ್ದಾರೆ. ಹಾಗಾಗಿ ಹಳ್ಳಿಯನ್ನು ಮಾದರಿಯಾಗಿರಿಸಿ ಎಂದು ಹೇಳಿದರು.
ಹಿತ್ತಲಹಳ್ಳಿ ಎಚ್‌.ಜಿ.ಗಪಾಲಗೌಡ ಮಾತನಾಡಿ, ಈ ದಿನ ಸ್ವಚ್ಛತಾ ಕೆಲಸಕ್ಕೆ ಆನೂರು ಗ್ರಾಮ ಪಂಚಾಯಿತಿ ವತಿಯಿಂದ ಪಿಡಿಒ ಮತ್ತು ಸಿಬ್ಬಂದಿ ಜೊತೆಗೂಡಿದ್ದಾರೆ. ಗ್ರಾಮದ ಹಿರಿಯರೂ ಸಹ ಯುವಕರೊಂದಿಗೆ ಕೈಜೋಡಿಸಿದ್ದಾರೆ. ಗ್ರಾಮವನ್ನು ಸ್ವಚ್ಛತೆಗೆ ಸಂಬಂಧಿಸಿದಂತೆ ಮಾದರಿ ಮಾಡಬೇಕು ಎಂಬ ಉದ್ದೇಶ ನಮ್ಮದು. ಶಾಲಾ ಆವರಣ, ಚರಂಡಿ, ಗ್ರಾಮದ ರಸ್ತೆ, ಮನೆ ಅಂಗಳ, ಸರ್ಕಾರಿ ಸ್ಥಳಗಳು ಎಲ್ಲವನ್ನೂ ಶುಚಿಯಾಗಿರಿಸಬೇಕು. ಆರೋಗ್ಯದ ದೃಷ್ಟಿಯಿಂದ ಈ ಕಾರ್ಯಕ್ರಮ ಬಹಳ ಒಳ್ಳೆಯದು. ಎಲ್ಲರೂ ಒಗ್ಗಟ್ಟಾಗಿ ಸ್ವಯಂಪ್ರೇರಣೆಯಿಂದ ದುಡಿಯುವುದರಿಂದ ಬೇಧಭಾವ ತೊಡೆಯುತ್ತದೆ. 50 ವರ್ಷಗಳ ಹಿಂದೆ ವಾರದ ಕೆಲಸ ಎಂದು ಗ್ರಾಮದಲ್ಲಿ ಸ್ವಚ್ಛತೆ ನಡೆಸುತ್ತಿದ್ದೆವು. ಪ್ರತಿ ಮನೆಯಿಂದಲೂ ಒಬ್ಬೊಬ್ಬರು ಭಾಗವಹಿಸುತ್ತಿದ್ದೆವು. ಅದು ನಿಂತಿತ್ತು. ಈಗ ಅದನ್ನು ಪುನಃ ಪ್ರಾರಂಭಿಸಿದ್ದೇವೆ ಎಂದು ಹೇಳಿದರು.
ಎಚ್‌.ಎಂ.ಮುನಿರಾಜು, ಎಚ್‌.ಸುರೇಶ್‌, ಎಚ್‌.ಬಿ.ಎನ್‌.ರಾಮಾಂಜಿನಪ್ಪ, ಲೋಕೇಶ್‌, ವೆಂಕಟೇಶ್‌, ಮುನಿಕೃಷ್ಣ, ರವಿಕುಮಾರ್‌, ದೇವರಾಜ್‌, ಆಂಜನೇಯ, ಎಚ್‌.ಪಿ.ಮುನಿರಾಜು ಹಾಜರಿದ್ದರು.