Home News ಓದಿನ ನಡುವೆ ಕೃಷಿ ಪಾಠವನ್ನೂ ಮಕ್ಕಳಿಗೆ ಕಲಿಸಬೇಕು

ಓದಿನ ನಡುವೆ ಕೃಷಿ ಪಾಠವನ್ನೂ ಮಕ್ಕಳಿಗೆ ಕಲಿಸಬೇಕು

0

ಶಾಲೆಯ ಪಠ್ಯ, ಮಕ್ಕಳ ಓದಿನ ನಡುವೆ ಕೃಷಿ ಪಾಠವನ್ನೂ ಮಕ್ಕಳಿಗೆ ಕಲಿಸಬೇಕು. ಮಕ್ಕಳಿಗೆ ಅನ್ನದ ಪಾಠ, ಕೃಷಿ ಬದುಕಿನ ಬಗ್ಗೆಯೂ ತಿಳಿಸಿಕೊಡಬೇಕು. ಊಟದ ತಟ್ಟೆಯ ಪ್ರಥಮ ಪಾಠವನ್ನು ಕಲಿಸಲು ಹೊಲಕ್ಕೆ ಕರೆದೊಯ್ದು ಕೃಷಿಯ ಜಾಗೃತಿ ಬಿತ್ತುವ ಕೆಲಸ ಎಲ್ಲಾ ಶಾಲೆಗಳಲ್ಲೂ ನಡೆಯಲಿ ಎಂದು ರಾಜ್ಯ ಛಲವಾದಿ ಮಹಾಸಭಾ ಮುಖಂಡ ಡಾ. ವೆಂಕಟೇಶಮೂರ್ತಿ ತಿಳಿಸಿದರು.
ತಾಲ್ಲೂಕಿನ ತೊಟ್ಲಗಾನಹಳ್ಳಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಶನಿವಾರ ಶಾಲಾ ವಿದ್ಯಾರ್ಥಿಗಳಿಗೆ ರಾಜ್ಯ ಛಲವಾದಿ ಮಹಾಸಭಾ ತಾಲ್ಲೂಕು ಘಟಕದಿಂದ ನೋಟ್‌ ಪುಸ್ತಕಗಳು ಮತ್ತು ಲೇಖನ ಸಾಮಗ್ರಿಗಳನ್ನು ವಿತರಿಸಿ ಅವರು ಮಾತನಾಡಿದರು.
ಗ್ರಾಮೀಣ ಮಕ್ಕಳು ಅಪಾರ ಪ್ರತಿಭಾವಂತರು. ಅವರಿಗೆ ಅವಕಾಶ ಮತ್ತು ಪ್ರೋತ್ಸಾಹದ ಕೊರತೆಯನ್ನು ಸಮಾಜ ಕಲ್ಪಿಸಬೇಕು. ಗುಣಮಟ್ಟದ ಶಿಕ್ಷಣ ಸಿಕ್ಕಲ್ಲಿ ಗ್ರಾಮೀಣ ಮಕ್ಕಳು ಕೂಡ ಉನ್ನತ ಸಾಧನೆಗಳನ್ನು ಮಾಡಬಹುದು. ಶಿಕ್ಷಣದೊಂದಿಗೆ ವಿವಿಧ ಹವ್ಯಾಸಗಳು, ಚಟುವಟಿಕೆಗಳು, ಗ್ರಾಮೀಣ ಸೊಗಡನ್ನು ಕಲಿಸಬೇಕು. ಓದು, ಪಾಠ, ಪರೀಕ್ಷೆಗಳಲ್ಲಿ ಮಕ್ಕಳು ಕಳೆದುಹೋಗಬಾರದು ಎಂದು ಹೇಳಿದರು.
ರಾಜ್ಯ ಛಲವಾದಿ ಮಹಾಸಭಾ ತಾಲ್ಲೂಕು ಘಟಕದ ಅಧ್ಯಕ್ಷ ಆನಂದ್‌, ಕಾರ್ಯಾಧ್ಯಕ್ಷ ವೇಣು, ಟಿ.ಟಿ.ನರಸಿಂಹಪ್ಪ, ತ್ಯಾಗರಾಜ, ಗೋಪಾಲ, ಸುಬ್ರಮಣಿ, ಸಂತೋಷ, ನಾರಾಯಣಸ್ವಾಮಿ, ಅಂಬರೀಷ, ದೇವರಾಜ, ಕೃಷ್ಣಪ್ಪ, ಗೋವಿಂದರಾಜು, ಶಿಕ್ಷಕರಾದ ಕೃಷ್ಣಪ್ಪ, ರಮೇಶ್‌ಕುಮಾರ್‌ ಹಾಜರಿದ್ದರು.