Home News ಕಾನೂನುಗಳು ಜನರ ಅನುಕೂಲಕ್ಕಾಗಿ ಇವೆ

ಕಾನೂನುಗಳು ಜನರ ಅನುಕೂಲಕ್ಕಾಗಿ ಇವೆ

0

ಕಾನೂನು ಅರಿವಿನ ಕೊರತೆಯಿಂದಾಗಿ ಜನಸಾಮಾನ್ಯರಿಗೆ ಸರ್ಕಾರಿ ಸವಲತ್ತುಗಳನ್ನು ಸರಿಯಾಗಿ ಸದ್ಬಳಕೆ ಮಾಡಿಕೊಳ್ಳಲು ಆಗುತ್ತಿಲ್ಲ. ಕಾನೂನುಗಳು ಜನರ ಅನುಕೂಲಕ್ಕಾಗಿ ಇವೆ. ಅದನ್ನು ಅರಿತು ಮುನ್ನಡೆದರೆ ಏಳಿಗೆ ಸಾಧ್ಯ ಎಂದು ಜೆ.ಎಂ.ಎಫ್‌.ಸಿ ಮತ್ತು ಸಿವಿಲ್‌ ನ್ಯಾಯಾಧೀಶರಾದ ಟಿ.ಎಲ್‌.ಸಂದೀಶ್‌ ತಿಳಿಸಿದರು.
ನಗರದ ಅರಳೇಪೇಟೆಯ ಬಸವೇಶ್ವರಸ್ವಾಮಿ ದೇವಾಲಯದ ಆವರಣದಲ್ಲಿ ಶುಕ್ರವಾರ ಸಂಜೆ ನಡೆದ ಕಾನೂನು ಸಾಕ್ಷರತಾ ಕಾರ್ಯಕ್ರಮದ ಸಮಾರೋಪದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಕಾನೂನು ಅರಿವಿನ ಮೂಲಕ ಯಾವುದೇ ಸಮಸ್ಯೆಗೆ ಪರಿಹಾರ ಕಂಡು ಕೊಳ್ಳುವ ಪ್ರಯತ್ನವಾಗಬೇಕು. ಹಾಗಾ ದಾಗ ಮಾತ್ರ ಆರೋಗ್ಯವಂತ ಸಮಾಜದ ನಿರ್ಮಾಣ ಸಾಧ್ಯ. ಜನರಿಗೆ ಕಾನೂನು ಅರಿವು ಮುಖ್ಯ, ಕೆಲವು ಜನರು ಕ್ಷುಲ್ಲಕ ಕಾರಣಕ್ಕೆ ಪದೇ ಪದೇ ನ್ಯಾಯಾಲಯದ ಮೆಟ್ಟಿಲಿಗೆ ಬರುತ್ತಾರೆ. ಪ್ರಕರಣಗಳು ಒಂದು ನ್ಯಾಯಾಲಯದಲ್ಲಿ ಇತ್ಯರ್ಥವಾದರೆ ಮತ್ತೆ ಮತ್ತೆ ಮೇಲ್ಮನವಿ ಸಲ್ಲಿಸುವ ಮೂಲಕ ಮೇಲಿನ ಕೋರ್ಟುಗಳಿಗೆ ಹೋಗುತ್ತಾರೆ. ಸೌಹಾರ್ದಯುತವಾಗಿ ಕಡಿಮೆ ವೆಚ್ಚದಲ್ಲಿ ಬಗೆ ಹರಿಸಿಕೊಳ್ಳಬಹುದಾದ ವಿಷಯಗಳಿಗೆ ಹೆಚ್ಚುವರಿಯಾಗಿ ಹಣ ವ್ಯಯ ಮಾಡು ತ್ತಾರೆ. ಇದು ತಪ್ಪಬೇಕು. ವಾಸ್ತವ ನೆಲೆಗಟ್ಟಿನಲ್ಲಿ ಸಮಸ್ಯೆ ಪರಿಹಾರವಾಗಬೇಕಾದರೆ ಪ್ರತಿಯೊಬ್ಬರಿಗೂ ಕಾನೂನು ತಿಳುವಳಿಕೆ ಇದ್ದರೆ ಇಂತಹ ಬೆಳವಣಿಗೆಗೆ ತಡೆ ಹಾಕಬಹುದು. ಕಾನೂನು ತಿಳುವಳಿಕೆ ಮತ್ತು ಉಚಿತ ಕಾನೂನು ಸೇವೆ ಒದಗಿಸುವ ನಿಟ್ಟಿನಲ್ಲಿ ಜನತಾ ಕಾನೂನು ಸೇವಾ ಪ್ರಾಧಿ ಕಾರ ಕಾರ್ಯ ನಿರ್ವಹಿಸುತ್ತಿದೆ ಎಂದರು.
ಸೌಂಧರ್ಯ ಗ್ರಾಮೀಣ ಅಭಿವೃದ್ಧಿ ಸಂಸ್ಥೆ ಅಧ್ಯಕ್ಷೆ ಡಾ.ವಿಜಯ ವೆಂಕಟರಾಮ್‌, ಬಾಲ್ಯ ವಿವಾಹ ನಿಷೇಧ ಕಾಯ್ದೆ ಹಾಗೂ ಬಾಲ ಕಾರ್ಮಿಕ ನಿಷೇಧ ಕಾಯ್ದೆ ಕುರಿತು, ವಕೀಲ ಚಂದ್ರೇಗೌಡ, ಜನನ ಮತ್ತು ಮರಣ ನೋಂದಣಿ ಕಾಯ್ದೆ ಕುರಿತು ವಿವರಿಸಿದರು.
ಬಸವೇಶ್ವರ ಸೇವಾ ಟ್ರಸ್ಟ್‌ ಅಧ್ಯಕ್ಷ ಬಿ.ಸಿ.ನಂದೀಶ್‌, ತಾಲ್ಲೂಕು ವಕೀಲರ ಸಂಘದ ಅಧ್ಯಕ್ಷ ಎಂ.ಪಾಪಿರೆಡ್ಡಿ, ಕಾರ್ಯದರ್ಶಿ ಬೈರಾರೆಡ್ಡಿ, ಸರ್ಕಾರಿ ವಕೀಲೆ ಎಸ್‌.ಕುಮುದಿನಿ, ವಕೀಲರಾದ ಕೆ.ಮಂಜುನಾಥ್‌, ಬಿ.ಪಿ.ಭಾಸ್ಕರ್‌ ಮತ್ತಿತರರು ಹಾಜರಿದ್ದರು.