Home News ಕೋರೆಗಾವ್ ವಿಜಯೋತ್ಸವ ಮತ್ತು ತಮಟೆ ಪ್ರೋತ್ಸಾಹ ಕಮಿಟಿಯ ಉದ್ಘಾಟನೆ

ಕೋರೆಗಾವ್ ವಿಜಯೋತ್ಸವ ಮತ್ತು ತಮಟೆ ಪ್ರೋತ್ಸಾಹ ಕಮಿಟಿಯ ಉದ್ಘಾಟನೆ

0

ಜೀವಿಕ (ಜೀತ ವಿಮುಕ್ತಿ ಕರ್ನಾಟಕ) ಸಂಘಟನೆಯಿಂದ ಜನವರಿ 1 ರ ಶುಕ್ರವಾರದಂದು ಬೆಳಿಗ್ಗೆ 11.30ಕ್ಕೆ ನಗರದ ವೇಣುಗೋಪಾಲಸ್ವಾಮಿ ದೇವಾಲಯದ ಆವರಣದಲ್ಲಿ ದಲಿತ ಯೋಧರ ಕೋರೆಗಾವ್ ವಿಜಯೋತ್ಸವ ಮತ್ತು ತಮಟೆ ಪ್ರೋತ್ಸಾಹ ಕಮಿಟಿಯ ಉದ್ಘಾಟನೆಯನ್ನು ಹಮ್ಮಿಕೊಳ್ಳಲಾಗಿದೆ. ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ವಕೀಲ ಮಹೇಶ್ ದಾಸ್, ಉಪನ್ಯಾಸಕ ಮೂರ್ತಿ, ಜೀವಿಕ ಸಂಘಟನೆಯ ರಾಜ್ಯ ಸಂಚಾಲಕ ಕಿರಣ್ ಕಮಲ್ ಪ್ರಸಾದ್ ಭಾಗವಹಿಸಲಿದ್ದಾರೆಂದು ಸಂಘಟಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.