Home News ಗೌಡನಕೆರೆಯಲ್ಲಿ ನಿಷೇಧಿತ ಕ್ಯಾಟ್ ಫಿಶ್ ಸಾಕಾಣಿಕೆ

ಗೌಡನಕೆರೆಯಲ್ಲಿ ನಿಷೇಧಿತ ಕ್ಯಾಟ್ ಫಿಶ್ ಸಾಕಾಣಿಕೆ

0

ನಗರಕ್ಕೆ ಹೊಂದಿಕೊಂಡಂತಿರುವ ಗೌಡನಕೆರೆಯಲ್ಲಿ ನಿಷೇಧಿತ ಕ್ಯಾಟ್ ಫಿಶ್ ಸಾಕಾಣಿಕೆ ಮಾಡುತ್ತಿದ್ದು ಕೂಡಲೇ ತೆರವು ಗೊಳಿಸುವಂತೆ ಬೂದಾಳ ಗ್ರಾಮಸ್ಥರು ಒತ್ತಾಯಿಸಿದ್ದಾರೆ.
ತಾಲೂಕಿನ ಆನೂರು ಗ್ರಾಮದ ನರಸಿಂಹಮೂರ್ತಿ ಎಂಬುವವರು ಮೀನುಗಳ ಸಾಕಾಣಿಕೆ ಮಾರಾಟಕ್ಕೆ ಮೀನುಗಾರಿಕೆ ಇಲಾಖೆ ಅನುಮತಿ ಪಡೆದಿದ್ದು ಹರಾಜು ಮೂಲಕ ಮಾರಾಟ ಮಾಡಲು ಮುಂದಾದಾಗ ಕಾವಲುಗಾರರ ಹಾಗು ಬೂದಾಳ ಗ್ರಾಮಸ್ಥರ ನಡುವೆ ಕೆಲಕಾಲ ಮಾತಿನ ಚಕಮಕಿ ನಡೆದಿದೆ.
ಕೆರೆಯಲ್ಲಿ ನಿಷೇಧಿತ ಕ್ಯಾಟ್‍ಫಿಷ್ ಮೀನನ್ನು ಸಾಕಾಣಿಕೆ ಮಾಡುತ್ತಿದ್ದು ಇದರಿಂದ ಕೆರೆಯ ನೀರು ಕಲುಷಿತಗೊಂಡಿದೆ. ಧನಕರುಗಳು ಹಾಗೂ ನಮ್ಮ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿರುವ ಈ ಕ್ಯಾಟ್‍ಫಿಷ್ ಮೀನುಗಳ ಹರಾಜನ್ನು ರದ್ದುಪಡಿಸುವಂತೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ.
ಕೆರೆಯಲ್ಲಿ ಕೊರೆದ ಕೊಳವೆ ಬಾವಿಗಳಿಂದಲೆ ನಮ್ಮೂರಿಗೆ ಕುಡಿಯುವ ನೀರು ಪೂರೈಕೆ ಆಗುತ್ತಿದೆ. ಹಾಗಾಗಿ ಕೂಡಲೆ ಈ ಕೆರೆಯಲ್ಲಿನ ಕ್ಯಾಟ್‍ಫಿಷ್‍ಗಳನ್ನು ತೆರೆವುಗೊಳಿಸಬೇಕು. ಹರಾಜನ್ನು ರದ್ದುಪಡಿಸಬೇಕು ಎಂದು ಆಗ್ರಹಿಸಿದ್ದಾರೆ.
ಈ ವೇಳೆ ಮೀನುಗಳಿಗೆ ಕಾವಲು ಇದ್ದವರು ಹಾಗೂ ಗ್ರಾಮಸ್ಥರ ನಡುವೆ ಕೆಲ ಕಾಲ ಮಾತಿನ ಚಕಮುಕಿ ನಡೆದು ನಾವು ಇಲ್ಲಿ ಬರಿ ಕಾವಲು ಇದ್ದೇವೆ. ಮಾಲೀಕರನ್ನು ಹಾಗೂ ಅಧಿಕಾರಿಗಳನ್ನು ಕೇಳಿ ನಮ್ಮದೇನು ಇಲ್ಲ ಎಂದರು.
ಹಾಗಾಗಿ ಬೂದಾಳ ಗ್ರಾಮಸ್ಥರು ಮಂಗಳವಾರ ಈ ಬಗ್ಗೆ ಜಿಲ್ಲಾಧಿಕಾರಿಗಳು ಸೇರಿದಂತೆ ಸಂಬಂಧಿಸಿದ ಎಲ್ಲ ಅಧಿಕಾರಿಗಳಿಗೂ ದೂರು ನೀಡಿ ಕೆರೆಯಲ್ಲಿ ನಿಷೇಧಿತ ಕ್ಯಾಟ್‍ಫಿಷ್‍ಗಳನ್ನು ತೆರೆವುಗೊಳಿಸುವವರೆಗೂ ನಮ್ಮ ಹೋರಾಟವನ್ನು ನಿಲ್ಲಿಸುವುದಿಲ್ಲ ಎಂದು ಎಚ್ಚರಿಸಿದ್ದಾರೆ.