Home News ಗ್ರಾಮ ಪಂಚಾಯತಿಯ ಚುನಾವಣಾ ಫಲಿತಾಂಶ

ಗ್ರಾಮ ಪಂಚಾಯತಿಯ ಚುನಾವಣಾ ಫಲಿತಾಂಶ

0

ಬಾಕಿ ಉಳಿದುಕೊಂಡಿದ್ದ ಸ್ಥಳೀಯ ಸಂಸ್ಥೆ ಗ್ರಾಮ ಪಂಚಾಯತಿಯ ೩೧ ಸ್ಥಾನಗಳಿಗೆ ಭಾನುವಾರ ನಡೆದಿದ್ದ ಚುನಾವಣೆಯ ಮತ ಎಣಿಕೆ ಬುಧವಾರ ನಡೆಯಿತು.
ತಾಲ್ಲೂಕಿನ ಅಬ್ಲೂಡು, ಈ.ತಿಮ್ಮಸಂದ್ರ ಗ್ರಾಮ ಪಂಚಾಯತಿಯ ಎಲ್ಲ ಹಾಗೂ ತಲಕಾಯಲಬೆಟ್ಟದ ೧ ಸ್ಥಾನ ಸೇರಿ ಒಟ್ಟು ೩೩ ಸ್ಥಾನಗಳಿಗೆ ಚುನಾವಣೆ ನಿಗದಿಯಾಗಿದ್ದು ಈ ಪೈಕಿ ಅಬ್ಲೂಡು ಗ್ರಾಮದ ೨ ಸ್ಥಾನಗಳಿಗೆ ಅವಿರೋಧ ಆಯ್ಕೆ ಆಗಿತ್ತು. ಇನ್ನುಳಿದ ೩೧ ಸ್ಥಾನಗಳಿಗೆ ಮತದಾನ ನಡೆದಿತ್ತು.
ಕಳೆದ ಮೇ ತಿಂಗಳಲ್ಲಿ ತಾಲ್ಲೂಕಿನ ೨೪ ಗ್ರಾಮ ಪಂಚಾಯತಿಗಳಿಗೂ ಚುನಾವಣೆ ನಿಗದಿಯಾಗಿತ್ತಾದರೂ ಅಬ್ಲೂಡು ಹಾಗೂ ಈ.ತಿಮ್ಮಸಂದ್ರ ಗ್ರಾಮ ಪಂಚಾಯತಿಯಲ್ಲಿ ಶಾಶ್ವತ ನೀರಾವರಿ ಯೋಜನೆಗೆ ಆಗ್ರಹಿಸಿ ಚುನಾವಣೆಯನ್ನು ಬಹಿಷ್ಕರಿಸಿದ್ದ ಎಲ್ಲ ಗ್ರಾಮಸ್ಥರು ಚುನಾವಣೆಗೆ ಯಾರೊಬ್ಬರು ಸಹ ನಾಮಪತ್ರವನ್ನೆ ಸಲ್ಲಿಸಿರಲಿಲ್ಲ.
ಫಲಿತಾಂಶ: ಅಬ್ಲೂಡು ಪಂಚಾಯತಿಯಲ್ಲಿ 10 ಜೆಡಿಎಸ್ ಬೆಂಬಲಿತರು ವಿಜೇತರಾಗಿ, 6 ಕಾಂಗ್ರೆಸ್ ಬೆಂಬಲಿತರು ವಿಜೇತರಾಗಿದ್ದಾರೆ. ಈ.ತಿಮ್ಮಸಂದ್ರ ಗ್ರಾಮ ಪಂಚಾಯತಿಯಲ್ಲಿ 11 ಕಾಂಗ್ರೆಸ್ ಬೆಂಬಲಿತರು 5 ಜೆಡಿಎಸ್ ಬೆಂಬಲಿತರು ಜಯಶಾಲಿಗಳಾಗಿದ್ದಾರೆ. ತಲಕಾಯಲಬೆಟ್ಟದ ಒಂದು ಸ್ಥಾನ ಜೆಡಿಎಸ್ ಬೆಂಬಲಿತರ ಪಾಲಾಗಿದೆ.
ವಿಜೇತರ ವಿವರ:
ಅಬ್ಲೂಡು ಗ್ರಾಮ ಪಂಚಾಯತಿ:

  • ತಾತಹಳ್ಳಿ: ಕೃಷ್ಣಮ್ಮ(324), ಲಕ್ಷ್ಮೀದೇವಮ್ಮ(323)
  • ಅಬ್ಲೂಡು: ಎ.ಎನ್.ಮಂಜುನಾಥ(546)
  • ಚೀಮನಹಳ್ಳಿ: ಜ್ಯೋತಿ(275), ನಾರಾಯಣಮ್ಮ(237)
  • ಗುಡಿಹಳ್ಳಿ: ಚಿಕ್ಕವೆಂಕಟರೆಡ್ಡಿ(319), ಲಕ್ಷ್ಮಮ್ಮ(282)
  • ಕೆಂಪನಹಳ್ಳಿ: ಎಂ.ನೇತ್ರಾವತಿ(223)
  • ಕೋಟಹಳ್ಳಿ: ಕೆ.ಪಿ.ದೇವರಾಜು(217)
  • ಸಾದಹಳ್ಳಿ: ಎಲ್.ಚಂದ್ರಶೇಖರ್(119)
  • ಚಾಗೆ: ದ್ಯಾವಪ್ಪ(126)
  • ಶೆಟ್ಟಹಳ್ಳಿ: ದೇವರಾಜ(474), ಮಂಜುನಾಥ(458), ವೆಂಕಟಲಕ್ಷ್ಮಮ್ಮ(415)

ಈ.ತಿಮ್ಮಸಂದ್ರ ಗ್ರಾಮ ಪಂಚಾಯತಿ:

  • ಕೊಂಡರಾಜನಹಳ್ಳಿ: ಎನ್.ಮಂಜುಳ(249), ಜಯರಾಮರೆಡ್ಡಿ(268)
  • ಬೈರಗಾನಹಳ್ಳಿ: ಬಿ.ಆರ್.ಮಂಜುನಾಥ(172)
  • ಶೆಟ್ಟಿಕೆರೆ: ಮುನಿಲಕ್ಷ್ಮಪ್ಪ(343), ಪದ್ಮಾವತಿ(328)
  • ವರಸಂದ್ರ: ಮಂಜುಳ(180)
  • ಹಳೇಹಳ್ಳಿ: ವೆಂಕಟರಮಣಪ್ಪ(492), ಎಂ.ವಿ.ದೇವರಾಜು(520), ಎಂ.ಸಿ.ರೂಪ(547)
  • ತುರುಕಾಚೇನಹಳ್ಳಿ: ಈಶ್ವರಮ್ಮ(138)
  • ತಿಮ್ಮಸಂದ್ರ–1: ಶಿವಮ್ಮ(510), ಮೌಲಾಸಾಬ್(528), ಲಕ್ಷ್ಮೀದೇವಮ್ಮ(564), ಎಚ್.ಜೆ.ನಾಗಮಣಿ(574)
  • ತಿಮ್ಮಸಂದ್ರ–2: ಜಿ.ಗಂಗಾಧರ(291), ಎಸ್.ಎ.ವೆಂಕಟರಮಣಾರೆಡ್ಡಿ(318)

ತಲಕಾಯಲಬೆಟ್ಟ ಗ್ರಾಮ ಪಂಚಾಯತಿ:

  • ನರಸಮ್ಮ ಮತ್ತು ನಾಗರತ್ನಮ್ಮ 124 ಮತಗಳನ್ನು ಪಡೆದಿದ್ದು, ಲಾಟರಿಯಲ್ಲಿ ನರಸಮ್ಮ ಆಯ್ಕೆಯಾದರು.

error: Content is protected !!