ಗ್ರಾಮೀಣ ಪ್ರದೇಶಗಳ ಅಭಿವೃದ್ಧಿಯ ದೃಷ್ಟಿಯಿಂದ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕೋಟ್ಯಾಂತರ ರೂಪಾಯಿಗಳ ಹಣವನ್ನು ಗ್ರಾಮ ಪಂಚಾಯ್ತಿಗಳ ಮೂಲಕ ಬಿಡುಗಡೆ ಮಾಡುತ್ತಿದ್ದರೂ ಕೂಡಾ ಈ ಹಣವನ್ನು ದುರುಪಯೋಗ ಮಾಡಿಕೊಳ್ಳಲಾಗಿದೆ ಎಂದು ನಾಗರೀಕರು ಆರೋಪಿಸಿದ್ದಾರೆ.
ತಾಲ್ಲೂಕಿನ ಕುಂಬಿಗಾನಹಳ್ಳಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಬಿ.ತಿಮ್ಮಸಂದ್ರ (ಟಿ.ಬುಸನಹಳ್ಳಿ) ಗ್ರಾಮದಲ್ಲಿ ರೋಟರಿ ಸಂಸ್ಥೆಯಿಂದ ನಿರ್ಮಾಣ ಮಾಡಿಕೊಟ್ಟಿರುವ ಶೌಚಾಲಯಗಳಿಗೆ ಗ್ರಾಮ ಪಂಚಾಯ್ತಿಯಿಂದ ಸ್ವಚ್ಛ ಭಾರತ್ ಮಿಷನ್‍ನ ಅಡಿಯಲ್ಲಿ 22 ಮಂದಿ ಪಲಾನುಭವಿಗಳಿಗೆ ತಲಾ 10 ಸಾವಿರ ರೂಪಾಯಿಗಳಂತೆ ಬ್ಯಾಂಕ್ ಖಾತೆಗಳಿಗೆ ಜಮಾ ಮಾಡಿದ್ದರೂ ಕೂಡಾ ಸ್ಥಳೀಯ ಗ್ರಾಮ ಪಂಚಾಯ್ತಿ ಸದಸ್ಯ ವಿನಯನಂದಬಾಬು, ಫಲಾನುಭವಿಗಳನ್ನು ಬ್ಯಾಂಕಿಗೆಕರೆದುಕೊಂಡು ಹೋಗಿ ಅವರ ಖಾತೆಯಲ್ಲಿರುವ ಹಣವನ್ನು ಸಂಪೂರ್ಣವಾಗಿ ಡ್ರಾ ಮಾಡಿಸಿಕೊಂಡಿದ್ದಾರೆ ಎಂದು ಸ್ಥಳೀಯ ನಾಗರೀಕರು ಆರೋಪ ಮಾಡಿದ್ದಾರೆ.
ಕಳೆದ 2014-15 ನೇ ಸಾಲಿನಲ್ಲಿ ರೋಟರಿ ಸಂಸ್ಥೆಯಿಂದ ಸಿಮೆಂಟ್ ಕಾಂಕ್ರೀಟ್‍ನಲ್ಲಿ ಗೋಡೆಗಳನ್ನು ತಂದು ನಿಲ್ಲಿಸಲಾಗಿದ್ದು, ಈ ಶೌಚಾಲಯಗಳಿಗೆ ಗ್ರಾಮ ಪಂಚಾಯ್ತಿಯಿಂದ ಫಲಾನುಭವಿಗಳ ಬ್ಯಾಂಕ್‍ಖಾತೆಗೆ ಸ್ವಚ್ಚ ಭಾರತ ಮಿಷನ್‍ನಯೋಜನೆಯಡಿಯಲ್ಲಿಗ್ರಾಮ ಪಂಚಾಯ್ತಿಯ ನಡಾವಳಿ ಪುಸ್ತಕದಲ್ಲಿ ಚರ್ಚೆಗೆತಾರದೆ ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳ ಮೌಖಿಕ ಆದೇಶದ ಮೇರೆಗೆ ತಲಾ 10000 ದಂತೆ ಜಮಾ ಮಾಡಿದ್ದಾರೆ, ಆದರೆ ಯಾವೊಬ್ಬ ಫಲಾನುಭವಿಗಳಿಗೆ ಹಣವನ್ನು ತಲುಪಿಸಿಲ್ಲ, ಶೌಚಾಲಯಗಳಿಗೆ ಪಾಯ ಹಾಕುವಾಗ 1 ಸಾವಿರ ರೂಪಾಯಿಗಳನ್ನು ಫಲಾನುಭವಿಗಳಿಂದ ತೆಗೆದುಕೊಂಡಿದ್ದಾರೆ, ಗ್ರಾಮದಲ್ಲಿ ಒಂದು ಚರಂಡಿಯನ್ನೂ ಮಾಡಿಲ್ಲ, ರಸ್ತೆಗಳಿಗೆ ಕಾಂಕ್ರೀಟ್ ಹಾಕಿಲ್ಲ, 2013-14 ನೇ ಸಾಲಿನಲ್ಲಿ ನಿರ್ಮಾಣ ಮಾಡಲಾಗಿರುವ ಮೇಲ್ಮಟ್ಟದ ನೀರಿನ ಟ್ಯಾಂಕಿಗೆ ಇದುವರೆಗೂ ಪೈಪ್‍ಲೈನ್ ಅಳವಡಿಸಿಲ್ಲ, ಈ ಟ್ಯಾಂಕ್ ಶಿಥಿಲಾವಸ್ಥೆಗೆ ತಲುಪಿದೆ, ಇರುವ ಒಂದು ನೀರಿನ ಟ್ಯಾಂಕಿನ ಸುತ್ತಲೂ ಗಿಡಗಂಟಿಗಳು ಬೆಳೆದು ನಿಂತಿದ್ದು, ಸ್ವಚ್ಛಗೊಳಿಸಿಲ್ಲ, ಮನೆಗಳ ಪಕ್ಕದಲ್ಲೆ ನಿಂತಿರುವ ನೀರಿನಿಂದ ಉತ್ಪತ್ತಿಯಾಗುತ್ತಿರುವ ಸೊಳ್ಳೆಗಳಿಂದಾಗಿ ದಿನನಿತ್ಯ ಆಸ್ಪತ್ರೆಗಳಿಗೆ ಅಲೆದಾಡುವಂತಾಗಿದೆ ಇಷ್ಟೆಲ್ಲಾ ಪರಿಸ್ಥಿತಿಗಳಿದ್ದರೂ ಕೂಡಾ ಯಾವುದೇ ಅಧಿಕಾರಿಗಳಾಗಲಿ, ಸ್ಥಳೀಯ ಸದಸ್ಯರಾಗಲಿ ಗಮನಹರಿಸಿಲ್ಲವೆಂದು ಎಂದು ಗ್ರಾಮಸ್ಥರಾದ ರಾಮಕೃಷ್ಣಪ್ಪ, ಅಶೋಕ್, ಮುಂತಾದವರು ಆರೋಪಿಸಿದ್ದಾರೆ.
ನಮ್ಮ ಮನೆಯ ಹತ್ತಿರ ರೋಟರಿಯವರು ಶೌಚಾಲಯ ಕಟಿಸಿದ್ದಾರೆ, ಅದಕ್ಕೆ ನಮ್ಮ ಬ್ಯಾಂಕ್‍ಖಾತೆಗೆ 10 ಸಾವಿರ ಬಂದಿತ್ತು, ಆದರೆ ನಮಗೆ ಒಂದು ರೂಪಾಯಿ ಕೂಡಾ ಕೊಟ್ಟಿಲ್ಲ, ಎಲ್ಲಾ ಸದಸ್ಯ ಬಾಬು ಅವರೇ ತೆಗೆದುಕೊಂಡಿದ್ದಾರೆ.
| ಚಂದ್ರಮ್ಮ, ಬಿ.ತಿಮ್ಮಸಂದ್ರಗ್ರಾಮದ ನಿವಾಸಿ.
ರೋಟರಿ ಸಂಸ್ಥೆಯಿಂದ ಬಿ.ತಿಮ್ಮಸಂದ್ರಗ್ರಾಮದಲ್ಲಿನ ಪ್ರತಿಯೊಂದು ಮನೆಗೂ ಸ್ವಚ್ಚತೆಯದೃಷ್ಟಿಯಿಂದ ಶೌಚಾಲಯಗಳನ್ನು ನಿರ್ಮಾಣ ಮಾಡಿಕೊಟ್ಟಿದ್ದಾರೆ, ಆದರೆ ದಾಖಲಾತಿಗಳು ಸರಿಯಾಗಿದ್ದ 22 ಕುಟುಂಬಗಳಿಗೆ ತಲಾ 10 ಸಾವಿರ ರೂಪಾಯಿಗಳಂತೆ ಜಿಲ್ಲಾ ಪಂಚಾಯ್ತಿ ಮುಖ್ಯಕಾರ್ಯನಿರ್ವಾಹಕ ಅಧಿಕಾರಿಗಳ ಆದೇಶದ ಮೇರೆಗೆ ಸ್ವಚ್ಚ ಭಾರತ್ ಮಿಷನ್‍ನ ಯೋಜನೆಯಡಿಯಲ್ಲಿ ಅವರ ಬ್ಯಾಂಕ್ ಖಾತೆಗಳಿಗೆ ಜಮಾ ಮಾಡಿದ್ದೇವೆ, ಆದರೆ ಪಂಚಾಯ್ತಿಯಲ್ಲಿ ನಡಾವಳಿ ಪುಸ್ತಕದಲ್ಲಿ ನಮೂದಾಗಿಲ್ಲ, ಪುನಃ ಸದಸ್ಯರು ಹಣವನ್ನು ವಾಪಸ್ಸುತೆಗೆದುಕೊಂಡಿರುವ ಬಗ್ಗೆ ಮಾಹಿತಿಯಿಲ್ಲ.
| ನಯಾನಾ ಪಂಚಾಯ್ತಿ ಅಭಿವೃದ್ದಿ ಅಧಿಕಾರಿ. ಕುಂಬಿಗಾನಹಳ್ಳಿ ಗ್ರಾ.ಪಂ.
ನಾನು ಸದಸ್ಯನಾದ ಮೇಲೆ ರೋಟರಿ ಸಂಸ್ಥೆಯವರನ್ನು ಕರೆದುಕೊಂಡು ಬಂದು ಪ್ರತಿಯೊಂದು ಮನೆಗಳಿಗೆ ಶೌಚಾಲಯಗಳನ್ನು ಕಟ್ಟಿಸಿಕೊಟ್ಟಿದ್ದೇವೆ, ಸಿ.ಇ.ಓ. ಆದೇಶದಂತೆ ಸ್ವಚ್ಛ ಭಾರತ ಮಿಷನ್‍ನ ಅಡಿಯಲ್ಲಿ 10 ಸಾವಿರ ರೂಪಾಯಿಗಳ ಹಣವನ್ನು ಅವರ ಖಾತೆಗಳಿಗೆ ಜಮಾ ಮಾಡಿಸಿ, ಅದೇ ಹಣವನ್ನುಗ್ರಾಮದಲ್ಲಿ ಡ್ರೈನ್‍ಗಳನ್ನು ಮಾಡಲು ತೊಡಗಿಸಲಾಗುತ್ತಿದೆ, ಈ ಬಗ್ಗೆ ಪಂಚಾಯ್ತಿಯಲ್ಲಿ ರೇಜುಲೇಷನ್ ಮಾಡಲಾಗಿದೆ.
| ವಿನಯನಂದಬಾಬು, ಸ್ಥಳೀಯ ಗ್ರಾ.ಪಂ.ಸದಸ್ಯ