Home News ಚೀಮಂಗಲ ಸರ್ಕಾರಿ ಪ್ರೌಢಶಾಲೆಯಲ್ಲಿ ಭಾರತರತ್ನ ಸಿ.ಎನ್‌.ಆರ್‌. ರಾವ್‌ ಅವರ ಜನ್ಮದಿನಾಚರಣೆ

ಚೀಮಂಗಲ ಸರ್ಕಾರಿ ಪ್ರೌಢಶಾಲೆಯಲ್ಲಿ ಭಾರತರತ್ನ ಸಿ.ಎನ್‌.ಆರ್‌. ರಾವ್‌ ಅವರ ಜನ್ಮದಿನಾಚರಣೆ

0

ತಾಲ್ಲೂಕಿನ ಚೀಮಂಗಲ ಸರ್ಕಾರಿ ಪ್ರೌಢಶಾಲೆಯಲ್ಲಿ ಸೋಮವಾರ ಭಾರತರತ್ನ ಸಿ.ಎನ್‌.ಆರ್‌. ರಾವ್‌ ಅವರ 80ನೇ ವರ್ಷದ ಹುಟ್ಟುಹಬ್ಬವನ್ನು ಆಚರಿಸಲಾಯಿತು.
ಶಾಲಾ ಮಟ್ಟದಲ್ಲಿ ವಿಜ್ಞಾನ ಸಂಘದ ವತಿಯಿಂದ ಲಿಖಿತ ಹಾಗೂ ಮೌಖಿಕ ಕ್ವಿಜ್‌ ಮತ್ತು ಸಿ.ಎನ್‌.ಆರ್‌. ರಾವ್‌ ಅವರ ಕುರಿತಂತೆ ಪ್ರಬಂಧ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು. ವಿಜ್ಞಾನಕ್ಕೆ ಸಂಬಂಧಿಸಿದಂತೆ ವಿವಿಧ ವಿಷಯಗಳನ್ನು ನೀಡಿ ವಿದ್ಯಾರ್ಥಿಗಳಿಂದ ಭಾಷಣವನ್ನು ಏರ್ಪಡಿಸಿದ್ದರು.
ಮುಖ್ಯಶಿಕ್ಷಕ ಶಿವಶಂಕರ್‌, ಶಿಕ್ಷಕರಾದ ದೊಡ್ಡನಾಯಕ್‌, ವಿಟ್ಟಲ್‌, ನವೀನ್‌ಕುಮಾರ್‌, ಶ್ರೀನಿವಾಸ್‌, ಸವಿತಾ, ಭವ್ಯಾ, ಸೌಭಾಗ್ಯ ಈ ಸಂದರ್ಭದಲ್ಲಿ ಹಾಜರಿದ್ದರು.

error: Content is protected !!