Home News ಚೌಡಸಂದ್ರ ಆಂಜನೇಯಸ್ವಾಮಿ ದೇವಾಲಯದಲ್ಲಿ ಬೆಣ್ಣೆ ಅಲಂಕಾರ

ಚೌಡಸಂದ್ರ ಆಂಜನೇಯಸ್ವಾಮಿ ದೇವಾಲಯದಲ್ಲಿ ಬೆಣ್ಣೆ ಅಲಂಕಾರ

0

ತಾಲ್ಲೂಕಿನ ಚೌಡಸಂದ್ರ ಗ್ರಾಮದ ಆಂಜನೇಯಸ್ವಾಮಿ ದೇವಾಲಯದಲ್ಲಿ ದೇವರಿಗೆ ಶನಿವಾರ ಯುಗಾದಿ ಹಬ್ಬದ ಪ್ರಯುಕ್ತ ವಿಶೇಷ ಬೆಣ್ಣೆ ಅಲಂಕಾರವನ್ನು ಮಾಡಲಾಗಿತ್ತು.
ಸುಮಾರು 28 ಕೆಜಿ ಬೆಣ್ಣೆ ಮತ್ತು ಚೆರ್ರಿ ಹಣ್ಣುಗಳನ್ನು ಬಳಸಿ ಆಂಜನೇಯಸ್ವಾಮಿಯನ್ನು ಅಲಂಕರಿಸಿದ್ದು, ಭಕ್ತರು ವರ್ಷದ ಮೊದಲ ದಿನವಾದ ಯುಗಾದಿಯ ದಿನದಂದು ಪೂಜೆಯಲ್ಲಿ ಪಾಲ್ಗೊಂಡರು. ವಿಶೇಷ ಪೂಜೆಯ ನಂತರ ಬೇವು ಬೆಲ್ಲ ಹಾಗೂ ಪ್ರಸಾದ ವಿನಿಯೋಗವನ್ನು ನಡೆಸಲಾಯಿತು.

error: Content is protected !!