ಜಲಗಾರರಿಗೆ ಬಾಕಿ ಇರುವ ಹದಿನೈದು ತಿಂಗಳ ವೇತನದಲ್ಲಿ ತಕ್ಷಣಕ್ಕೆ ನಾಲ್ಕು ತಿಂಗಳ ವೇತನ ಖಾತೆಗೆ ಹಾಕುವುದು ಹಾಗೂ ಮತ್ತೆರಡು ತಿಂಗಳ ವೇತನವನ್ನು ಶನಿವಾರದೊಳಗೆ ಪಾವತಿಸುತ್ತೇವೆ ಎಂದು ನಗರಸಭೆ ಪೌರಾಯುಕ್ತರು ನೀಡಿರುವ ಭರವಸೆಯ ಹಿನ್ನಲೆಯಲ್ಲಿ ಅನಿರ್ಧಿಷ್ಟ ಹೋರಾಟ ಕೈ ಬಿಡುತ್ತಿದ್ದೇವೆ ಎಂದು ಗ್ರಾಮ ಪಂಚಾಯಿತಿ ನೌಕರರ ಸಂಘದ ಗೌರವಾಧ್ಯಕ್ಷೆ ಮಧುಲತಾ ಹೇಳಿದರು.
ನಗರದ ನಗರಸಭೆ ಕಾರ್ಯಾಲಯದ ಮುಂಭಾಗದಲ್ಲಿ ಸಿಐಟಿಯು ನೇತೃತ್ವದಲ್ಲಿ ಜಲಗಾರರು ಹಮ್ಮಿಕೊಂಡಿದ್ದ ಅನಿರ್ಧಿಷ್ಠ ಹೋರಾಟದ ಹನ್ನೆರಡನೇ ದಿನವಾದ ಮಂಗಳವಾರ ಹೋರಾಟವನ್ನು ಕೈ ಬಿಟ್ಟ ನಂತರ ಅವರು ಮಾತನಾಡಿದರು.
ಜಲಗಾರರು ತಮ್ಮ ಹದಿನೈದು ತಿಂಗಳ ವೇತನ ಸೇರಿದಂತೆ ಸಮಾನ ಕೆಲಸ ಸಮಾನ ವೇತನಕ್ಕಾಗಿ ಆಗ್ರಹಿಸಿ ನವೆಂಬರ್ ೦೨ ರ ಶುಕ್ರವಾರದಿಂದ ಹಮ್ಮಿಕೊಂಡಿದ್ದ ಅನಿರ್ಧಿಷ್ಟ ಹೋರಾಟಕ್ಕೆ ವಿವಿಧ ಸಂಘಟನೆಗಳು ಸಹ ಬೆಂಬಲ ವ್ಯಕ್ತಪಡಿಸಿದ್ದವು. ಹೋರಾಟ ಅಂಗವಾಗಿ ಇಂದಿನಿಂದ ಉಪವಾಸ ಸತ್ಯಾಗ್ರಹ ಮಾಡಲು ಸಹ ನಿರ್ಧರಿಸಿದ್ದೆವು. ಆದರೆ ಸಿಐಟಿಯು ಜಿಲ್ಲಾ ಘಟಕದ ಕೆಲ ಹಿರಿಯರು ನಗರಸಭೆ ಪೌರಾಯುಕ್ತರೊಂದಿಗೆ ಮಾತುಕತೆ ನಡೆಸಿದಾಗ ತಕ್ಷಣಕ್ಕೆ ನಾಲ್ಕು ತಿಂಗಳ ವೇತನ ಅವರ ಖಾತೆಗೆ ಹಾಕುವುದೂ ಸೇರಿದಂತೆ ಶನಿವಾರದೊಳಗೆ ಮತ್ತೆರಡು ತಿಂಗಳ ವೇತನ ಪಾವತಿಸುವುದರ ಜೊತೆಗೆ ಇವರನ್ನು ಕೆಲಸದಲ್ಲಿ ಮುಂದುವರೆಸಲು ಕ್ರಮ ಜರುಗಿಸುವ ಭರವಸೆಯನ್ನು ನೀಡಿರುವ ಹಿನ್ನಲೆಯಲ್ಲಿ ಅನಿರ್ಧಿಷ್ಟ ಹೋರಾಟ ಕೈ ಬಿಡುತ್ತಿದ್ದೇವೆ ಎಂದರು.
ಬಿಸಿಯೂಟ ನೌಕರರ ಸಂಘದ ತಾಲ್ಲೂಕು ಅಧ್ಯಕ್ಷೆ ಮುನಿಲಕ್ಷ್ಮಮ್ಮ, ಜಲಗಾರರಾದ ಟಿ.ಎನ್.ರವಿ, ರಮೇಶ್, ರಾಜೇಶ್, ಆನಂದ್, ಮಂಜುನಾಥ್, ಮುರಳಿ.ಆರ್, ಬಾಬು, ನವಾಜ್ ಪಾಷಾ, ನವೀನ್‌ಕುಮಾರ್, ಕೆ.ಶ್ರೀನಿವಾಸ್, ನರಸಿಂಹಪ್ಪ ಪ್ರತಿಭಟನೆಯಲ್ಲಿ