Home News ಟಿಪ್ಪುಜಯಂತಿ ಅಂಗವಾಗಿ ಪೊಲೀಸ್ ಪಥಸಂಚಲನ

ಟಿಪ್ಪುಜಯಂತಿ ಅಂಗವಾಗಿ ಪೊಲೀಸ್ ಪಥಸಂಚಲನ

0

ನಗರದ ಆರಕ್ಷಕ ವೃತ್ತ ಸೇರಿದಂತೆ ನಗರ, ಗ್ರಾಮಾಂತರ ಹಾಗು ದಿಬ್ಬೂರಹಳ್ಳಿ ಪೊಲೀಸ್ ಠಾಣೆಯ ಸಿಬ್ಬಂದಿಗಳಿಂದ ಸಾರ್ವಜನಿಕರ ರಕ್ಷಣೆ ಸೇರಿದಂತೆ ಟಿಪ್ಪುಜಯಂತಿಯಂದು ನಗರದಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ತಡೆಯುವ ಸಲುವಾಗಿ ಮಂಗಳವಾರ ಬೆಳಗ್ಗೆ ಪಥಸಂಚಲನ ಆಯೋಜಿಸಲಾಗಿತ್ತು.
ನಗರದ ನಾಗರೀಕರಲ್ಲಿ ಭಯಮುಕ್ತ ವಾತಾವರಣ ನಿರ್ಮಿಸುವ ನಿಟ್ಟಿನಲ್ಲಿ ನಡೆಸಿದ ಪಥಸಂಚಲನ ನಗರದ ಕೋರ್ಟ್ ಆವರಣದಿಂದ ಹೊರಟು ದಿಬ್ಬೂರಹಳ್ಳಿ ರಸ್ತೆ ಸೇರಿದಂತೆ ಪ್ರವಾಸಿಮಂದಿರ ರಸ್ತೆ ಹಾಗು ಅಶೋಕರಸ್ತೆಯಲ್ಲಿ ಸಂಚರಿಸಿ ನಾಗರೀಕರು ಯಾವುದೇ ಊಹಾಪೋಹ ಗಳು ಹಾಘು ವದಂತಿಗಳಿಗೆ ಕಿವಿಗೊಡಬಾರದು, ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ತಡೆಯಲು ಅಗತ್ಯ ಪೊಲೀಸ್ ಸಿಬ್ಬಂದಿ ಹಾಗು ಕೆಎಸ್‍ಆರ್‍ಪಿ ತುಕಡಿ ಲಭ್ಯವಿರುವುದನ್ನು ಪ್ರದರ್ಶಿಸಿದರು.
ಇದೇ ನ 10 ರಂದು ನಗರದಲ್ಲಿ ನಡೆಯಲಿರುವ ಟಿಪ್ಪುಜಯಂತಿ ಆಚರಣೆಯ ಸಮಯದಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ತಡೆಯಲು ಪೊಲೀಸ್ ಸಿಬ್ಬಂದಿ ಸೂಕ್ತ ಕ್ರಮ ಕೈಗೊಂಡಿದ್ದು ಹೆಚ್ಚಿನ ಭದ್ರತೆಗಾಗಿ ಹೆಚ್ಚುವರಿಯಾಗಿ ಎರಡು ಕೆಎಸ್‍ಆರ್‍ಪಿ ತುಕಡಿಗಳು ನಗರದಲ್ಲಿಯೇ ಇರುತ್ತದೆ ಎಂದು ಆರಕ್ಷಕ ವೃತ್ತ ನಿರೀಕ್ಷಕ ವೆಂಕಟೇಶ್ ತಿಳಿಸಿದ್ದಾರೆ.
ಪಥಸಂಚಲನದಲ್ಲಿ ನಗರಠಾಣೆ ಪಿಎಸ್ಸೈ ನವೀನ್, ಗ್ರಾಮಾಂತರ ಠಾಣೆಯ ಪಿಎಸ್ಸೈ ಪ್ರದೀಪ್‍ಪೂಜಾರಿ, ದಿಬ್ಬೂರಹಳ್ಳಿ ಠಾಣೆ ಪಿಎಸ್ಸೈ ವಿಜಯ್ ಹಾಗು ಸಿಬ್ಬಂದಿ ಪಾಲ್ಗೊಂಡಿದ್ದರು.