Home News ದಾಖಲೆಯಿಲ್ಲದ ೨ ಲಕ್ಷ ೮೦ ಸಾವಿರ ರೂ ಹಣ ವಶ

ದಾಖಲೆಯಿಲ್ಲದ ೨ ಲಕ್ಷ ೮೦ ಸಾವಿರ ರೂ ಹಣ ವಶ

0

ವಾಹನ ತಪಾಸಣೆ ವೇಳೆ ದಾಖಲೆಯಿಲ್ಲದ ಸುಮಾರು ೨ ಲಕ್ಷ ೮೦ ಸಾವಿರ ರೂ ಹಣ ಚೆಕ್‌ಪೋಸ್ಟ್ ನಲ್ಲಿ ಚುನಾವಣಾಧಿಕಾರಿಗಳು ಗುರುವಾರ ವಶಪಡಿಸಿಕೊಂಡಿದ್ದಾರೆ.
ಚುನಾವಣೆ ನೀತಿಸಂಹಿತೆ ಹಿನ್ನಲೆಯಲ್ಲಿ ನಗರದ ಹೊರವಲಯದ ಹಂಡಿಗನಾಳ ಬಳಿಯಿರುವ ಚೆಕ್ ಪೋಸ್ಟ್ ಬಳಿ ಚುನಾವಣಾಧಿಕಾರಿಗಳು ಕಾರುಗಳ ತಪಾಸಣೆ ನಡೆಸುವ ವೇಳೆ ನಗರದ ಮುಜಾಮಿಲ್ ಎಂಬುವವರ ಕ್ವಾಲಿಸ್ ವಾಹನ (ಕೆಎ ೦೨ ಎಂಜೆ ೪೫೬)ದಲ್ಲಿ ದಾಖಲೆಯಿಲ್ಲದ ೨ ಲಕ್ಷ ರೂ ಹಣ ಪತ್ತೆಯಾದರೆ, ದೊಡ್ಡಮರಳಿ ಗ್ರಾಮದ ವೆಂಕಟೇಶ್ ಎಂಬುವವರ ಸ್ಯಾಂಟ್ರೋ ( ಕೆಎ ೦೩ ಎಂಎಚ್ ೩೪೮೧) ಕಾರಿನಲ್ಲಿ ಸುಮಾರು ೮೦ ಸಾವಿರ ಹಣ ಪತ್ತೆಯಾಗಿದೆ.
ಒಂದು ಕಾರಿನಲ್ಲಿದ್ದ ಹಣ ರೇಷ್ಮೆ ಮಾರಿ ತಂದಿರುವ ಹಣ ಎಂದು ಮತ್ತೊಂದು ಕಾರಿನಲ್ಲಿದ್ದ ಹಣ ದ್ರಾಕ್ಷಿ ಮಾರಿ ಬಂದಿರುವ ಹಣ ಎಂದು ಹೇಳಲಾಗುತ್ತಿದೆಯಾದರೂ ಸೂಕ್ತ ದಾಖಲೆಗಳಿಲ್ಲದ ಕಾರಣ ಹಣ ವಶಪಡಿಸಿಕೊಂಡು ಶಿಡ್ಲಘಟ್ಟ ಗ್ರಾಮಾಂತರ ಠಾಣೆಯಲ್ಲಿ ಪ್ರತ್ಯೇಕವಾಗಿ ಪ್ರಕರಣಗಳನ್ನು ದಾಖಲಿಸಲಾಗಿದೆ.

error: Content is protected !!