Home News ಧರಣಿ ಮಾಡಲು ತೆರಳಿದ ಪ್ರಾಥಮಿಕ ಶಾಲಾ ಪದವಿ ಶಿಕ್ಷಕರ ಸಂಘದ ಸದಸ್ಯರು

ಧರಣಿ ಮಾಡಲು ತೆರಳಿದ ಪ್ರಾಥಮಿಕ ಶಾಲಾ ಪದವಿ ಶಿಕ್ಷಕರ ಸಂಘದ ಸದಸ್ಯರು

0

ನಗರದ ಕೋಟೆ ವೃತ್ತದ ಬಳಿ ಮಂಗಳವಾರ ಪ್ರಾಥಮಿಕ ಶಾಲಾ ಪದವಿ ಶಿಕ್ಷಕರ ಸಂಘದ ವತಿಯಿಂದ ಭೋದನಾ ಬಹಿಷ್ಕಾರ, ಅನಿರ್ದಿಷ್ಟಾವದಿ ಧರಣಿ ಮುಷ್ಕರ ಮಾಡಲು ಬೆಂಗಳೂರಿನ ಪ್ರೀಡಂ ಪಾರ್ಕ್‌ಗೆ ಸಾಮೂಹಿಕವಾಗಿ ತೆರಳುವ ಸಂದರ್ಭದಲ್ಲಿ ಪ್ರಾಥಮಿಕ ಶಾಲಾ ಪದವಿ ಶಿಕ್ಷಕರ ಸಂಘದ ತಾಲ್ಲೂಕು ಅಧ್ಯಕ್ಷ ಮುಜಾಫೀರ್ ಮಾತನಾಡಿದರು.
ಸರ್ಕಾರದ ಮತ್ತು ಅಧಿಕಾರಿಗಳ ದ್ವಂದ್ವ ನೀತಿಯಿಂದಾಗಿ ಪ್ರಾಥಮಿಕ ಶಾಲಾ ಪದವೀಧರ ಶಿಕ್ಷಕರು ತ್ರಿಶಂಕು ಸ್ಥಿತಿಯಲ್ಲಿದ್ದು ಅನ್ಯಾಯವನ್ನ ಸರಿಪಡಿಸಲು ಆಗ್ರಹಿಸಿ ಅನಿರ್ದಿಷ್ಟವಾಗಿ ಭೋದನೆಯ ಬಹಿಷ್ಕಾರ ಧರಣಿ ಮುಷ್ಕರ ಮಾಡುತ್ತೇವೆ ಎಂದು ಅವರು ತಿಳಿಸಿದರು.
ನಮ್ಮ ಪದವಿ ಶಿಕ್ಷಕರಿಗೆ ಆದ ಅನ್ಯಾಯದ ಬಗ್ಗೆ ಮುಖ್ಯ ಮಂತ್ರಿಗಳು ಮತ್ತು ಶಿಕ್ಷಣ ಸಚಿವರೊಂದಿಗೆ ನಡೆದ ಮಾತುಕತೆಯಲ್ಲಿ ನಮಗಾದ ಅನ್ಯಾಯವನ್ನು ಪರಿಗಣಿಸಿ ಮುಖ್ಯಮಂತ್ರಿಗಳು ನಿಯಮ ತಿದ್ದುಪಡಿಗಾಗಿ ಟಿಪ್ಪಣಿ ಹಾಕಿ ಆದೇಶ ಮಾಡಿದ್ದಾರೆ, ಆದರೆ ಶಿಕ್ಷಣ ಇಲಾಖೆಯ ಐ.ಎ.ಎಸ್ ಅದಿಕಾರಿಗಳು ಈ ಬಗ್ಗೆ ಕ್ರಮ ತೆಗೆದುಕೊಳ್ಳದೆ ಬೇಡಿಕೆಗೆ ಸ್ವಂದಿಸದೆ ಕಾಲ ದೂಡುತ್ತಿದ್ದಾರೆ ಎಂದು ಆರೋಪಿಸಿದರು.
ಇಂದು ನಮಗೆ ನ್ಯಾಯಸಿಗದಿಂದಲ್ಲಿ ನಾಳೆಯಿದಲೇ ಅನಿರ್ದಿಷ್ಟವಾಗಿ ಭೋದನೆಯ ಬಹಿಷ್ಕಾರ ಧರಣಿ ಮುಷ್ಕರ ಮಾಡುತ್ತೇವೆ. ಈ ಧರಣೆಯಲ್ಲಿ ಪಾಲ್ಗೊಳ್ಳಲು ತಾಲ್ಲೂಕಿನಿಂದ 3 ಬಸ್ಸುಗಳಲ್ಲಿ 150 ಕ್ಕೂ ಹೆಚ್ಚು ಮಂದಿ ತೆರಳುತ್ತಿರುವುದಾಗಿ ಅವರು ಹೇಳಿದರು.
ತಾಲ್ಲೂಕು ನೌಕರರ ಸಂಘ ಅಧ್ಯಕ್ಷ ಕೆ.ಎನ್.ಸುಬ್ಬಾರೆಡ್ಡಿ, ತಾಲ್ಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅದ್ಯಕ್ಷ ಮುನಿರಾಜು, ಎನ್.ಪಿ.ಎಸ್ ಅಧ್ಯಕ್ಷ ಗಜೇಂದ್ರ, ಪಿಳ್ಳಣ್ಣ, ಮುನಿನಾರಾಯಣಪ್ಪ, ಪ್ರಸನ್ನ ಕುಮಾರ್, ಸುಮಾ ಅಮರೇಂದ್ರ. ಚಂದ್ರಶೇಖರ್.ವಿ, ಬಿ.ವಿ.ಮಂಜುನಾಥ್, ಸಿ.ಬಿ.ಪ್ರಕಾಶ್, ಹಾಜರಿದ್ದರು.

error: Content is protected !!