Home News ನಲ್ಲೋಜನಹಳ್ಳಿ ಎಂ.ಪಿ.ಸಿ.ಎಸ್ ಅಧ್ಯಕ್ಷರಾಗಿ ಕೆ.ಭಾವಾರೆಡ್ಡಿ ಆಯ್ಕೆ

ನಲ್ಲೋಜನಹಳ್ಳಿ ಎಂ.ಪಿ.ಸಿ.ಎಸ್ ಅಧ್ಯಕ್ಷರಾಗಿ ಕೆ.ಭಾವಾರೆಡ್ಡಿ ಆಯ್ಕೆ

0

ತಾಲ್ಲೂಕಿನ ನಲ್ಲೋಜನಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷರಾಗಿ ಕೆ.ಭಾವಾರೆಡ್ಡಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ಎಂ.ವಿ.ವೆಂಕಟೇಶಮೂರ್ತಿ ತಿಳಿಸಿದ್ದಾರೆ.
ಹನ್ನೆರಡು ಮಂದಿ ನಿರ್ದೇಶಕರಿರುವ ನಲ್ಲೋಜನಹಳ್ಳಿ ಎಂ.ಪಿ.ಸಿ.ಎಸ್ ಆಡಳಿತ ಮಂಡಳಿಯ ಸಭೆಯನ್ನು ಈಚೆಗೆ ಕರೆದಿದ್ದು, ಸಣಘದ ಅಧ್ಯಕ್ಷ ಸ್ಥಾನಕ್ಕೆ ವಿರೋಧವಿಲ್ಲದ ಕಾರಣ ಏಕೈಕ ಅಭ್ಯರ್ಥಿಯಾದ ಕೆ.ಭಾವಾರೆಡ್ಡಿ ಅವರು ಐದು ವರ್ಷದ ಅವಧಿಗೆ ಅಧ್ಯಕ್ಷರನ್ನಾಗಿ ಘೋಷಿಸಲಾಯಿತು.
ನಿರ್ದೇಶಕರಾದ ಮುನಿಶಾಮಿರೆಡ್ಡಿ, ದ್ಯಾವಪ್ಪ, ಶ್ರೀನಿವಾಸ, ಎಸ್.ಮುನಿಕೃಷ್ಣಪ್ಪ, ಮುನಿಕೃಷ್ಣಪ್ಪ, ವೇಣು, ಎನ್.ನಾಗರಾಜ, ಆವುಲಪ್ಪ, ದ್ಯಾವಮ್ಮ, ರಾಧಮ್ಮ, ಗಂಗುಲಪ್ಪ ಹಾಜರಿದ್ದರು.