Home News ನವೆಂಬರ್ ೨೩ ರಿಂದ ೨೫ ರವರೆಗೂ ಮಿಂಚಿನ ನೋಂದಣಿ

ನವೆಂಬರ್ ೨೩ ರಿಂದ ೨೫ ರವರೆಗೂ ಮಿಂಚಿನ ನೋಂದಣಿ

0

ತಾಲ್ಲೂಕು ಕಚೇರಿಯಲ್ಲಿ ಸೋಮವಾರ ನಡೆದ ಮತದಾರರ ಸೇರ್ಪಡೆ ಕಾರ್ಯ ನಡೆಸುತ್ತಿರುವ ಮತದಾರರ ಸಮೀಕ್ಷೆದಾರರು ಹಾಗೂ ಮತಗಟ್ಟೆ ಅಧಿಕಾರಿಗಳ ಸಭೆಯಲ್ಲಿ ರಾಜ್ಯ ಚುನಾವಣೆ ಹಾಗೂ ಇ ಆಡಳಿತದ ಅಪರ ಮುಖ್ಯ ಕಾರ್ಯದರ್ಶಿ ರಾಜೀವ್ ಚಾವ್ಲಾ ಮಾತನಾಡಿದರು.
ಮತದಾರರ ಪಟ್ಟಿಗೆ ೧೮ ವರ್ಷ ತುಂಬಿದ ಯುವ ಮತದಾರರನ್ನು ಸೇರಿಸುವ “ಮಿಂಚಿನ ನೋಂದಣಿ ಅಭಿಯಾನ” ವನ್ನು ನವೆಂಬರ್ ೨೩ ರಿಂದ ೨೫ ರವರೆಗೂ ಹಮ್ಮಿಕೊಳ್ಳಲಾಗುವುದು ಎಂದು ಅವರು ತಿಳಿಸಿದರು.
ಹದಿನೆಂಟು ವರ್ಷ ತುಂಬಿದವರು, ಹೊಸದಾಗಿ ಮದುವೆಯಾಗಿ ತಾಲ್ಲೂಕಿಗೆ ಬಂದಿರುವವರು, ವಲಸೆ ಬಂದಿರುವವರು, ಎಲ್ಲ ವರ್ಗದವರನ್ನೂ ಸಮೀಕ್ಷೆ ಮಾಡಿ ಅರ್ಹರನ್ನು ಮತದಾರರ ಪಟ್ಟಿಗೆ ಸೇರಿಸಿ. ಈ ಬಗ್ಗೆ ಉಸ್ತುವಾರಿ ಅಧಿಕಾರಿಗಳು ಸರಿಯಾಗಿ ಮಾರ್ಗದರ್ಶನ ಮಾಡಿ ಎಂದರು.
ಮತದಾರರ ನೋಂದಣಿ ಕಾರ್ಯಕ್ಕೆ ನಿಯೋಜನೆಗೊಂಡ ಅಧಿಕಾರಿಗಳು ಕೊಟ್ಟ ಮಾಹಿತಿ, ಹೊಸ ಮತದಾರರನ್ನು ಗುರ್ತಿಸುವ ಅವರಿಂದ ಸಂಗ್ರಹಿಸಿದ ವಯಸ್ಸು, ವಿಳಾಸದ ದಾಖಲೆಗಳ ಸಂಗ್ರಹವನ್ನು ಪರಿಶೀಲಿಸಿದರು.
ಮೊಬೈಲ್ ನಂಬರ್, ಆಧಾರ್ ಸಂಖ್ಯೆ, ವಿಳಾಸವನ್ನು, ವಯಸ್ಸನ್ನು ದೃಡೀಕರಿಸುವ ದಾಖಲೆಗಳನ್ನು ಸಂಗ್ರಹಿಸಿದ್ದನ್ನು ಗಮನಿಸಿ, ಉತ್ತಮವಾಗಿ ಮತದಾರರ ನೋಂಧಣಿ ಕಾರ್ಯ ನಡೆಸುತ್ತಿದ್ದೀರಿ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಉಪ ವಿಭಾಗಾಧಿಕಾರಿ ಶಿವಸ್ವಾಮಿ, ತಹಶೀಲ್ದಾರ್ ಎಸ್.ಅಜಿತ್ ಕುಮಾರ್, ನಗರಸಭೆ ಪೌರಾಯುಕ್ತ ಜಿ.ಎನ್.ಚಲಪತಿ ಹಾಜರಿದ್ದರು.

error: Content is protected !!