Home News ಪಕ್ಷೇತರ ಅಭ್ಯರ್ಥಿ ಎಂ ರಾಜಣ್ಣನವರ ಬದಲಾದ ಚುನಾವಣಾ ಚಿಹ್ನೆ

ಪಕ್ಷೇತರ ಅಭ್ಯರ್ಥಿ ಎಂ ರಾಜಣ್ಣನವರ ಬದಲಾದ ಚುನಾವಣಾ ಚಿಹ್ನೆ

0

ಟಿಕೆಟ್ ಸಿಗದೇ ಅಂತಿಮ ಕ್ಷಣಗಳಲ್ಲಿ ಪಕ್ಷೇತರರಾಗಿ ಚುನಾವಣಾ ಕಣದಲ್ಲಿ ಉಳಿದಿರುವ ಎಂ.ರಾಜಣ್ಣರಿಗೆ ಒಂದರ ಹಿಂದೊಂದು ಆಘಾತಗಳು ಕಾಡುತ್ತಿವೆ.
ಶಿಡ್ಲಘಟ್ಟ ವಿದಾನಸಭೆ ಕ್ಷೇತ್ರದಿಂದ ಜೆಡಿಎಸ್ ಅಭ್ಯರ್ಥಿಯಾಗಿ ಸ್ಪರ್ಧಿಸಲು ಬಾರೀ ಹೆಣಗಾಟ ನಡೆಸಿದರಾದರೂ ಅಂತಮ ಕ್ಷಣದಲ್ಲಿ ಟಿಕೆಟ್ ಕೈತಪ್ಪಿತ್ತು. ಆದರೆ ಶನಿವಾರ ಬೆಳಗ್ಗೆ ಚಿಹ್ನೆ ಬದಲಾವಣೆಯ ಮತ್ತೊಂದು ಆಘಾತ ಎದುರಾಗಿದೆ.
ನಾಮಪತ್ರ ವಾಪಸ್ಸು ಪಡೆಯುವ ಕೊನೆಯ ದಿನವಾದ ಏ 27 ರ ಶುಕ್ರವಾರ ಸಂಜೆ ರಾಜಣ್ಣರಿಗೆ ಚುನಾವಣಾಧಿಕಾರಿಗಳು ಉದಯಿಸುತ್ತಿರುವ ಸೂರ್ಯನ ಚಿಹ್ನೆ ಹಾಗು ಮತ್ತೊಬ್ಬ ಪಕ್ಷೇತರ ಅಭ್ಯರ್ಥಿ ಬೈರೇಗೌಡರಿಗೆ ಕಾರು ಚಿಹ್ನೆ ನೀಡಿತ್ತು. ಆದರೆ ಕೇಂದ್ರ ಹಾಗು ರಾಜ್ಯ ಚುನಾವಣಾ ಆಯೋಗದ ಅಧಿಕಾರಿಗಳು ಶುಕ್ರವಾರ ಸಂಜೆ ಏರ್ಪಡಿಸಲಾಗಿದ್ದ ವಿಡಿಯೋ ಕಾನ್ಫರೆನ್ಸ್‌ನಲ್ಲಿ ದೇಶದ ಬೇರಾವುದೇ ರಾಜ್ಯದ ಪ್ರಾದೇಶಿಕ ಪಕ್ಷಗಳ ಚಿಹ್ನೆಗಳು ಪಕ್ಷೇತರ ಅಭ್ಯರ್ಥಿಗಳಿಗೆ ನೀಡಬಾರದು ಎಂಬ ಸೂಚನೆಯ ಮೇರೆಗೆ ಪುದುಚೇರಿಯ ದ್ರಾವಿಡ ಮುನ್ನೇತ್ರ ಕಜಗಮ್ ಪಕ್ಷದ ಚಿಹ್ನೆಯಾಗಿರುವ ಉದಯಿಸುತ್ತಿರುವ ಸೂರ್ಯ ಹಾಗು ತೆಲಂಗಾಣ ರಾಷ್ಟ್ರ ಸಮಿತಿ ಪಕ್ಷದ ಚಿಹ್ನೆಯಾಗಿರುವ ಕಾರು ಚಿಹ್ನೆಯನ್ನು ಬದಲಾಯಿಸಿ ಇದೀಗ ಪಕ್ಷೇತರ ಅಭ್ಯರ್ಥಿಗಳಾದ ಎಂ.ರಾಜಣ್ಣ ರಿಗೆ ಆಟೋ ಹಾಗು ಬೈರೇಗೌಡರಿಗೆ ಗ್ಯಾಸ್ ಸಿಲಿಂಡರ್ ಚಿಹ್ನೆ ಯನ್ನು ಚುನಾವಣಾಧಿಕಾರಿಗಳು ನೀಡಿದ್ದಾರೆ.

error: Content is protected !!