Home News ಪಿ.ಎಲ್.ಡಿ ಬ್ಯಾಂಕ್ ಚುನಾವಣೆ: ಗೆದ್ದ ಕಾಂಗ್ರೆಸ್

ಪಿ.ಎಲ್.ಡಿ ಬ್ಯಾಂಕ್ ಚುನಾವಣೆ: ಗೆದ್ದ ಕಾಂಗ್ರೆಸ್

0

ಪಟ್ಟಣದಲ್ಲಿ ಭಾನುವಾರ ತಾಲ್ಲೂಕಿನ ಪ್ರಾಥಮಿಕ ಸಹಕಾರ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ(ಪಿ.ಎಲ್.ಡಿ) ಬ್ಯಾಂಕಿನ ಆಡಳಿತ ಮಂಡಳಿಯ ನಿರ್ದೇಶಕರ ಸ್ಥಾನಗಳಿಗೆ ಚುನಾವಣೆ ನಡೆಯಿತು.
ಸುಮಾರು 5,520 ಮತದಾರರು ಚುನಾವಣೆಯಲ್ಲಿ ಮತ ಚಲಾಯಿಸುತ್ತಿದ್ದರೂ, ವಿಧಾನಸಭೆಯ ಚುನಾವಣೆ ರೀತಿಯಲ್ಲಿ ಜನರು ಸೇರಿದ್ದರು. ಮತಗಟ್ಟೆಗಳನ್ನು ಸರ್ಕಾರಿ ಪದವಿ ಪೂರ್ವ ಕಾಲೇಜು ಹಾಗೂ ಪ್ರಥಮ ದರ್ಜೆ ಕಾಲೇಜಿನಲ್ಲಿ 17 ಬೂತ್ಗಳನ್ನು ಮಾಡಲಾಗಿತ್ತು.
ಪಿ.ಎಲ್.ಡಿ ಬ್ಯಾಂಕಿನ ಚುನಾವಣೆಯು ಜೆ.ಡಿ.ಎಸ್ ಮತ್ತು ಕಾಂಗ್ರೆಸ್ ಪಕ್ಷಗಳಿಗೆ ಪ್ರತಿಷ್ಠೆಯ ಸಂಗತಿಯಾಗಿದ್ದು, ಗ್ರಾಮೀಣ ಹಾಗೂ ಪಟ್ಟಣ ಪ್ರದೇಶದಿಂದ ಮತದಾರರನ್ನು ಕರೆತರುವ, ಓಲೈಸುವ, ಊಟೋಪಚಾರಗಳನ್ನು ಮಾಡಿಸುವ ಚಟುವಟಿಕೆಗಳು ನಡೆದಿತ್ತು.
ಚುನಾವಣಾ ಫಲಿತಾಂಶ: ಕಾಂಗ್ರೆಸ್ ಬೆಂಬಲಿತ 8 ಅಭ್ಯರ್ಥಿಗಳು ಮತ್ತು ಜೆಡಿಎಸ್ ಬೆಂಬಲಿತ 4 ಅಭ್ಯರ್ಥಿಗಳು ಪಿ.ಎಲ್.ಡಿ ಬ್ಯಾಂಕಿನ ಚುನಾವಣೆಯಲ್ಲಿ ಜಯವನ್ನು ಸಾಧಿಸಿದ್ದಾರೆ.

 • ಶಿಡ್ಲಘಟ್ಟ ಟೌನ್ ಹಿಂದುಳಿದ ವರ್ಗ ಮೀಸಲು ಕ್ಷೇತ್ರ: ಸಿ.ಅಶ್ವತ್ಥನಾರಾಯಣ (ಜೆ.ಡಿ.ಎಸ್ ಬೆಂಬಲಿತ)
 • ಅಬ್ಲೂಡು ಸಾಮಾನ್ಯ ಕ್ಷೇತ್ರ: ಸಿ.ಎಂ.ಗೋಪಾಲ (ಕಾಂಗ್ರೆಸ್ ಬೆಂಬಲಿತ)
 • ಸಾಲಗಾರರಲ್ಲದ ಕ್ಷೇತ್ರ: ಎಚ್.ಶಂಕರ್ (ಕಾಂಗ್ರೆಸ್ ಬೆಂಬಲಿತ)
 • ವೈ.ಹುಣಸೇನಹಳ್ಳಿ ಮಹಿಳಾ ಮೀಸಲು ಸ್ಥಾನ: ಎಂ.ಎನ್.ರಮಾದೇವಿ (ಕಾಂಗ್ರೆಸ್ ಬೆಂಬಲಿತ)
 • ದಿಬ್ಬೂರಹಳ್ಳಿ ಸಾಮಾನ್ಯ ಕ್ಷೇತ್ರ: ಅಶ್ವತ್ಥನಾರಾಯಣರೆಡ್ಡಿ (ಕಾಂಗ್ರೆಸ್ ಬೆಂಬಲಿತ)
 • ಮೇಲೂರು ಸಾಮಾನ್ಯ ಕ್ಷೇತ್ರ: ಆರ್.ಬಿ.ಜಯದೇವ್ (ಜೆ.ಡಿ.ಎಸ್ ಬೆಂಬಲಿತ)
 • ದೊಡ್ಡತೇಕಹಳ್ಳಿ ಸಾಮಾನ್ಯ ಕ್ಷೇತ್ರ: ಎಲ್.ಎನ್.ಶಿವಾರೆಡ್ಡಿ (ಜೆ.ಡಿ.ಎಸ್ ಬೆಂಬಲಿತ)
 • ಜಂಗಮಕೋಟೆ ಸಾಮಾನ್ಯ ಕ್ಷೇತ್ರ: ಕೆ.ಎಂ.ಭೀಮೇಶ್ (ಕಾಂಗ್ರೆಸ್ ಬೆಂಬಲಿತ)
 • ಗಂಜಿಗುಂಟೆ ಸಾಮಾನ್ಯ ಕ್ಷೇತ್ರ: ಎಂ.ಪಿ.ರವಿ (ಕಾಂಗ್ರೆಸ್ ಬೆಂಬಲಿತ)
 • ಚೀಮಂಗಲ ಹಿಂದುಳಿದ ವರ್ಗ ಮೀಸಲು ಕ್ಷೇತ್ರ: ಸಿದ್ದಪ್ಪ (ಕಾಂಗ್ರೆಸ್ ಬೆಂಬಲಿತ)
 • ಆನೂರು ಪರಿಶಿಷ್ಠ ಜಾತಿ ಮತ್ತು ಪರಿಶಿಷ್ಠ ಪಂಗಡ ಮೀಸಲು ಕ್ಷೇತ್ರ: ಮುನಿಯಪ್ಪ (ಜೆ.ಡಿ.ಎಸ್ ಬೆಂಬಲಿತ)
 • ಸಾದಲಿ ಮಹಿಳಾ ಮೀಸಲು ಸ್ಥಾನ: ಭಾಗ್ಯಮ್ಮ (ಕಾಂಗ್ರೆಸ್ ಬೆಂಬಲಿತ)