Home News ಪ್ಯಾರೆಗಾನ್‌ ಶಾಲೆ ಬಳಿಯ ಭುವನೇಶ್ವರಿ ವೃತ್ತದಲ್ಲಿ ಡಾ.ರಾಜ್‌ಕುಮಾರ್‌ ಅವರ ಹುಟ್ಟುಹಬ್ಬ ಆಚರಣೆ

ಪ್ಯಾರೆಗಾನ್‌ ಶಾಲೆ ಬಳಿಯ ಭುವನೇಶ್ವರಿ ವೃತ್ತದಲ್ಲಿ ಡಾ.ರಾಜ್‌ಕುಮಾರ್‌ ಅವರ ಹುಟ್ಟುಹಬ್ಬ ಆಚರಣೆ

0

ಡಾ. ರಾಜ್‌ಕುಮಾರ್ ಅವರು ಅಣ್ಣಾವ್ರು ಎಂದೇ ಎಲ್ಲರಿಗೂ ಪರಿಚಿತನಾಗಿ ಮನೆಯ ಹಿರಿಯ ಮಾರ್ಗದರ್ಶಕರಿದ್ದಂತೆ. ಅವರ ಸರಳ ಮತ್ತು ಸಜ್ಜನಿಕೆಯ ಸ್ವಭಾವ ಎಲ್ಲರಿಗೂ ಸ್ಫೂರ್ತಿ. ನೆಲ, ಭಾಷೆ, ಸಂಸ್ಕೃತಿ ಬಗ್ಗೆ ಅಪಾರ ಕಾಳಜಿ ಹಾಗೂ ಗೌರವವನ್ನು ಅವರು ಹೊಂದಿದ್ದರು. ಅವರ ಬದುಕು, ನಡೆ, ನುಡಿ, ಜೀವನ ಪ್ರತಿಯೊಬ್ಬ ಕನ್ನಡಿಗನಿಗೂ ಆದರ್ಶವಾಗಿದೆ ಎಂದು ಕೊರಿಯರ್‌ ರಾಜು ತಿಳಿಸಿದರು.
ನಗರದ ಪ್ಯಾರೆಗಾನ್‌ ಶಾಲೆ ಬಳಿಯ ಭುವನೇಶ್ವರಿ ವೃತ್ತದಲ್ಲಿ ಮಂಗಳವಾರ ಡಾ.ರಾಜ್‌ಕುಮಾರ್‌ ಅವರ ಹುಟ್ಟುಹಬ್ಬದ ಪ್ರಯುಕ್ತ ಕೇಕ್‌ ಕತ್ತರಿಸಿ ಅವರು ಮಾತನಾಡಿದರು.
ಈ ಸಂದರ್ಭದಲ್ಲಿ ಕೇಕ್‌ ಕತ್ತರಿಸಿ, ಮಜ್ಜಿಗೆ, ಪಾನಕ, ಹೆಸರುಬೇಳೆಯನ್ನು ಎಲ್ಲರಿಗೂ ಹಂಚಲಾಯಿತು. ಶ್ರೀಧರ್‌, ಸೋಮು, ಮಂಜು, ಚಂದ್ರ, ಟಿ.ಟಿ.ನರಸಿಂಹಪ್ಪ ಹಾಜರಿದ್ದರು.