Home News ಪ್ರತಿಭಾ ಪುರಸ್ಕಾರ ಮತ್ತು ಅಭಿನಂದನಾ ಕಾರ್ಯಕ್ರಮದ ಮುಖ್ಯ ಅತಿಥಿಗಳಾದ ರವಿ ಹೆಗಡೆ ಅವರ ಪರಿಚಯ

ಪ್ರತಿಭಾ ಪುರಸ್ಕಾರ ಮತ್ತು ಅಭಿನಂದನಾ ಕಾರ್ಯಕ್ರಮದ ಮುಖ್ಯ ಅತಿಥಿಗಳಾದ ರವಿ ಹೆಗಡೆ ಅವರ ಪರಿಚಯ

0

ರವಿ ಹೆಗಡೆ ಅವರು ಉದಯವಾಣಿ ಸಮೂಹ ಸಂಪಾದಕರು. ಅಪಾರ ಪತ್ರಿಕೋಧ್ಯಮದ ಜ್ಞಾನವುಳ್ಳ ಇವರು ರಾಜ್ಯ ಮತ್ತು ರಾಷ್ಟ್ರ ರಾಜಕಾರಣ, ತಂತ್ರಜ್ಞಾನ, ವ್ಯಾಪಾರ, ಆರ್ಥಿಕತೆ, ಸಂಸ್ಕೃತಿ ಮುಂತಾದ ವಿಷಗಳಲ್ಲಿ ಆಸಕ್ತಿಯುಳ್ಳವರು.
images112012 ರಲ್ಲಿ ನಡೆದ 21ನೇ ಏಷಿಯನ್ ಶೃಂಗಸಭೆ ಮತ್ತು ಇಂಡೋ ಈಸ್ಟ್ ಏಷಿಯನ್ ಶೃಂಗಸಭೆಯಲ್ಲಿ ಪ್ರಧಾನಿ ಡಾ ಮನಮೋಹನ್ ಸಿಂಗ್ ಅವರ ಮಾಧ್ಯಮ ನಿಯೋಗದ ಭಾಗವಾಗಿ ಕಾಂಬೋಡಿಯಾ ದೇಶಕ್ಕೆ ಭೇಟಿ ನೀಡಿದ್ದಾರೆ.
ತ್ರೀಡಿ ತಂತ್ರಜಾನದಲ್ಲಿ ದಕ್ಷಿಣ ಭಾರತದಲ್ಲೇ ಮೊಟ್ಟ ಮೊದಲ ಬಾರಿಗೆ ಚಲನಚಿತ್ರ ನಿಯಕಾಲಿಕ (ರೂಪತಾರ) ಹೊರತಂದ ಹೆಗ್ಗಳಿಕೆ ಇವರದ್ದು.
2011 ರಲ್ಲಿ ಉದಯವಾಣಿ ಸೇರುವ ಮುನ್ನ ಅವರು ‘ಸುವರ್ಣ ನ್ಯೂಸ್ 24 × 7’ ಟಿವಿ ಚಾನೆಲ್ ನ ಸಂಪಾದಕ ರಾಗಿದ್ದರು, ಕನ್ನಡ ಪ್ರಭಾ ಪತ್ರಿಕೆಯ ಕಾರ್ಯಕಾರಿ ಸಂಪಾದಕ ರಾಗಿದ್ದರು. ಅವರು ತನ್ನ ಪಾತ್ರ ಮತ್ತು ವಿಷಯವನ್ನು ಬಳಕೆಯ ನಿಯಮಗಳು ಪತ್ರಿಕೆ ಹೊಸ ಕಕ್ಷೆಯಲ್ಲಿ ನೀಡಲು ತಂತ್ರಜ್ಞಾನದಲ್ಲಿ ತನ್ನ ಜ್ಞಾನವನ್ನು . ಇವರು ನಿರಂತರವಾಗಿ ತಂತ್ರಜ್ಞಾನದಲ್ಲಿ ನೂತನ ಆವಿಷ್ಕಾರಗಳ ಬಗ್ಗೆ ಸ್ವತಃ ತಿಳಿದುಕೊಳ್ಳುತ್ತಾ, ತನ್ನ ಕಿರಿಯ ಸಹೋದ್ಯೋಗಿಗಳನ್ನೂ ಈ ನಿಟ್ಟಿನಲ್ಲಿ ಹೊಸತನಕ್ಕೆ ತೆರೆದುಕೊಳ್ಳಲು ಪ್ರೇರೇಪಿಸುವವರು. ಮ್ಯಾಜಿಕ್ ಕಲೆಯನ್ನೂ ಕರಗತ ಮಾಡಿಕೊಂಡಿದ್ದಾರೆ.
http://www.ravihegde.com/