Home News ಬಯಲು ಬಹಿರ್ದೆಸೆ ಮುಕ್ತ ಗ್ರಾಮ ಪಂಚಾಯಿತಿ ಪ್ರಶಸ್ತಿಗೆ ಗದಗಕ್ಕೆ ತೆರಳಿದ ಪ್ರತಿನಿಧಿಗಳು

ಬಯಲು ಬಹಿರ್ದೆಸೆ ಮುಕ್ತ ಗ್ರಾಮ ಪಂಚಾಯಿತಿ ಪ್ರಶಸ್ತಿಗೆ ಗದಗಕ್ಕೆ ತೆರಳಿದ ಪ್ರತಿನಿಧಿಗಳು

0

ಬಯಲು ಬಹಿರ್ದೆಸೆ ಮುಕ್ತ ಗ್ರಾಮ ಪಂಚಾಯಿತಿ ಪ್ರಶಸ್ತಿಗೆ ತಾಲ್ಲೂಕಿನ ಹತ್ತು ಗ್ರಾಮ ಪಂಚಾಯಿತಿಗಳು ಅರ್ಹತೆ ಪಡೆದಿರುವುದು ಹೆಮೆಮಯ ಸಂಗತಿ. ಉಳಿದ ಗ್ರಾಮ ಪಂಚಾಯಿತಿಗಳೂ ಶೀಘ್ರವಾಗಿ ಈ ಅರ್ಹತೆಯನ್ನು ಸಂಪಾದಿಸುವಂತಾಗಲಿ ಎಂದು ತಾಲ್ಲೂಕು ಪಂಚಾಯಿತಿ ಉಪಾಧ್ಯಕ್ಷ ಎಚ್‌.ನರಸಿಂಹಯ್ಯ ತಿಳಿಸಿದರು.
ನಗರದ ತಾಲ್ಲೂಕು ಪಂಚಾಯಿತಿ ಬಳಿ ಬುಧವಾರ ಗದಗದಲ್ಲಿ ಗುರುವಾರ ನಡೆಯುವ ಪ್ರಶಸ್ತಿ ವಿತರಣಾ ಸಮಾಂಭಕ್ಕೆ ಹೊರಟ ಹತ್ತು ಗ್ರಾಮ ಪಂಚಾಯಿತಿ ಪ್ರತಿನಿಧಿಗಳನ್ನು ಅಭಿನಂದಿಸಿ ಅವರು ಮಾತನಾಡಿದರು.
ಬಯಲು ಶೌಚದಿಂದ ಅನಾರೋಗ್ಯದ ಸಮಸ್ಯೆಗಳು ಉಂಟಾಗುತ್ತವೆ. ಗ್ರಾಮದಲ್ಲಿ ಪ್ರತಿ ಕುಟುಂಬಕ್ಕೂ ಶೌಚಾಲಯವಿದ್ದರೆ ಕಾಯಿಲೆಗಳು ಬರುವುದಿಲ್ಲ. ಈ ಬಗ್ಗೆ ಗ್ರಾಮೀಣರಲ್ಲಿ ಅರಿವು ಮೂಡಿಸಬೇಕಾದ ಅಗತ್ಯವಿದೆ. ಕೆಲವೇ ದಿನಗಳಲ್ಲಿ ತಾಲ್ಲೂಕಿನ ಪ್ರತಿಯೊಂದು ಗ್ರಾಮ ಪಂಚಾಯಿತಿಗಳೂ ಬಯಲು ಬಹಿರ್ದೆಸೆ ಮುಕ್ತ ಗ್ರಾಮ ಪಂಚಾಯಿತಿಗಳಾಗುವ ಆಶಾಭಾವನೆಯಿದೆ ಎಂದು ಹೇಳಿದರು.
ದಿಬ್ಬೂರಹಳ್ಳಿ, ತಲಕಾಯಲಬೆಟ್ಟ, ಸಾದಲಿ, ಬಶೆಟ್ಟಹಳ್ಳಿ, ಈ ತಿಮ್ಮಸಂದ್ರ, ಕುಂದಲಗುರ್ಕಿ, ವೈ.ಹುಣಸೇನಹಳ್ಳಿ, ಕುಂಬಿಗಾನಹಳ್ಳಿ, ಅಬ್ಲೂಡು, ದಿಡ್ಡತೇಕಹಳ್ಳಿ ಗ್ರಾಮ ಪಂಚಾಯಿತಿಗಳ ಪಿಡಿಒಗಳು, ಅಧ್ಯಕ್ಷರು, ಉಪಾಧ್ಯಕ್ಷರು ಗದಗಕ್ಕೆ ತೆರಳಿದರು.
ತಾಲ್ಲೂಕಿ ಪಂಚಾಯಿತಿ ಇಒ ವೆಂಕಟೇಶ್‌, ಅಧಿಕಾರಿ ಶ್ರೀನಾಥ್‌ಗೌಡ, ಪ್ರಸಾದ್‌ ಹಾಜರಿದ್ದರು.