Home News ಬಿಜೆಪಿ ಮುಖಂಡರಿಂದ ಸಂಭ್ರಮಾಚಣೆ

ಬಿಜೆಪಿ ಮುಖಂಡರಿಂದ ಸಂಭ್ರಮಾಚಣೆ

0

ಪಂಚ ರಾಜ್ಯಗಳ ಚುನಾವಣೆಯಲ್ಲಿ ಬಿಜೆಪಿ ಪಕ್ಷ ಅತಿ ಹೆಚ್ಚು ಸ್ಥಾನಗಳನ್ನು ಪಡೆದಿರುವುದು ಮುಂದಿನ ಚುನಾವಣೆಗಳ ದಿಕ್ಸೂಚಿಯಾಗಿದೆ ಎಂದು ಬಿಜೆಪಿ ತಾಲ್ಲೂಕು ಅಧ್ಯಕ್ಷ ಬಿ.ಸಿ.ನಂದೀಶ್ ತಿಳಿಸಿದರು.
ನಗರದ ಕೋಟೆ ವೃತ್ತದಲ್ಲಿ ಪಂಚ ರಾಜ್ಯಗಳ ಚುನಾವಣೆಯಲ್ಲಿ ಬಿಜೆಪಿ ಪಕ್ಷ ಅತಿ ಹೆಚ್ಚು ಸ್ಥಾನಗಳು ಬಂದಿದ್ದು, ತಾಲ್ಲೂಕಿನ ಬಿಜೆಪಿ ಮುಖಂಡರು ಶನಿವಾರ ವಿಜಯೋತ್ಸವ ನಡೆಸಿ ನಂತರ ಸಿಹಿ ಹಂಚಿ ಮಾತನಾಡಿದರು.
ನೋಟ್ ಬ್ಯಾನ್ ಆಗಿರುವುದು ಯಾವುದೇ ರೀತಿ ತೊಂದರೆ ಇಲ್ಲ, ನೋಟ್ ಬ್ಯಾನ್ ಆದ ಕಾರಣ ಕಪ್ಪುಹಣಕ್ಕೆ ಮತ್ತು ನಕಲಿ ನೋಟಿಗೆ ಕಡಿವಾಣ ಬಿದ್ದು, ಬಿಜೆಪಿ ಪಕ್ಷ ಅತಿ ಹೆಚ್ಚು ಸ್ಥಾನಗಳು ಬರುವುದಕ್ಕೆ ಕಾರಣವಾಗಿದೆ. ಪಂಚ ರಾಜ್ಯಗಳ ಚುನಾವಣೆಯಲ್ಲಿ ನಾಲ್ಕು ರಾಜ್ಯಗಳಲ್ಲಿ ಬಿಜೆಪಿ ಸರ್ಕಾರ ನಡೆಸುವುದು ಖಚಿತವಾಗಿದ್ದು, ಮುಂದಿನ ವಿಧಾನ ಸಭಾ ಚುನಾವಣೆಯಲ್ಲಿ ಬಿಜೆಪಿ ಪಕ್ಷವು ನಮ್ಮ ರಾಜ್ಯದಲ್ಲೂ ಅಧಿಕಾರಕ್ಕೆ ಬರಲಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುರೇಂದ್ರ ಗೌಡ, ಜಿಲ್ಲಾ ಉಪಾಧ್ಯಕ್ಷ ರಮೇಶ್ ಬಾಯರಿ, ಡಾ.ಸತ್ಯನಾರಾಯಣರಾವ್, ಮಂಜುಳಮ್ಮ, ಶ್ರೀರಾಮರೆಡ್ಡಿ, ಸುರೇಶ್, ಕೃಷ್ಣಾರೆಡ್ಡಿ, ದೊಣ್ಣಹಳ್ಳಿ ರಾಮಣ್ಣ, ಮಧುಸುಧನ್, ರತ್ನಮ್ಮ, ಅಶ್ವಕ್ ಅಲಿ, ಸುಜಾತಮ್ಮ, ಶ್ರೀನಿವಾಸ್‌ ಮತ್ತಿತರರು ಹಾಜರಿದ್ದರು.

error: Content is protected !!