ಬಿಜೆಪಿ ಯುವಮೋರ್ಚಾ ಪ್ರಧಾನ ಕಾರ್ಯದರ್ಶಿ ಬಿ.ವೈ.ವಿಜಯೇಂದ್ರ ಅಭಿಮಾನಿಗಳು ಹಾಗೂ ತಾಲ್ಲೂಕು ಬಿಜೆಪಿ ಪದಾಧಿಕಾರಿಗಳು ಬುಧವಾರ ನಗರದ ವಿವಿದೆಡೆ ಬಡವರಿಗೆ ಅಗತ್ಯವಾದ ಔಷಧಿಗಳನ್ನು ಹಾಘೂ ಪೌರ ಕಾರ್ಮಿಕರು ಮತ್ತು ನೀರು ವಿತರಣಾ ವಿಭಾಗದ ಕಾರ್ಮಿಕರಿಗೆ ಸೋಪು ಮತ್ತು ಮಾಸ್ಕ್ ಗಳನ್ನು ಉಚಿತವಾಗಿ ವಿತರಣೆ ಮಾಡಿದರು.
ಔಷಧಿ ವಿತರಣೆಯ ಉಸ್ತುವಾರಿ ಹಾಗು ಬಿಜೆಪಿ ಜಿಲ್ಲಾ ಮುಖಂಡ ಸಿ.ಪಿ.ಮಂಜುನಾಥಗೌಡ ಮಾತನಾಡಿ, ದೇಶಾಧ್ಯಂತ ಆವರಿಸಿರುವ ಕರೋನಾ ಮಹಾಮಾರಿಯನ್ನು ಹೊಡೆದೋಡಿಸಲು ಕೇಂದ್ರ ಹಾಗೂ ರಾಜ್ಯ ಸರ್ಕಾರ ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿದೆ. ಮುಖ್ಯಮಂತ್ರಿಗಳ ಸೂಚನೆಯ ಮೇರೆಗೆ ಪಕ್ಷದ ವತಿಯಿಂದ ಕಡು ಬಡವರನ್ನು ಗುರುತಿಸಿ ಅವರಿಗೆ ಅಗತ್ಯವಿರುವ ಔಷಧಿಗಳನ್ನು ಜಿಲ್ಲಾಧ್ಯಂತ ಪೂರೈಸುವ ಕೆಲಸವನ್ನು ಮಾಡುತ್ತಿದ್ದೇವೆ ಎಂದರು.
ಇದೇ ಸಂದರ್ಭದಲ್ಲಿ ನಗರಸಭೆಯ ಪೌರಕಾರ್ಮಿಕರಿಗೆ ಮಾಸ್ಕ್ ಹಾಗು ಸೋಪುಗಳನ್ನು ವಿತರಿಸಲಾಯಿತು.
ಬಿಜೆಪಿ ನಗರ ಮಂಡಲಾಧ್ಯಕ್ಷ ಎಸ್.ರಾಘವೇಂದ್ರ, ಗ್ರಾಮಾಂತರ ಮಂಡಲಾಧ್ಯಕ್ಷ ಸುರೇಂದ್ರಗೌಡ, ಮಾಜಿ ಅಧ್ಯಕ್ಷ ಬಿ.ಸಿ.ನಂದೀಶ್, ನಗರಸಭೆ ಸದಸ್ಯ ನಾರಾಯಣಸ್ವಾಮಿ, ಬಿಜೆಪಿ ಸದಸ್ಯರಾದ ನರೇಶ್, ರವಿಚಂದ್ರ, ರಜನೀಕಾಂತ್, ಬಾಬು, ನಟರಾಜ್, ಮಂಜುಳಮ್ಮ, ಕೃಷ್ಣಾರೆಡ್ಡಿ ಹಾಜರಿದ್ದರು.
- Advertisement -
- Advertisement -
- Advertisement -