Home News ಬಿ. ಎನ್. ರವಿಕುಮಾರ ಜೆಡಿಎಸ್ ಅಧಿಕೃತ ಅಭ್ಯರ್ಥಿಯಾಗಿ ನಾಮಪತ್ರ ಅಂಗೀಕಾರ

ಬಿ. ಎನ್. ರವಿಕುಮಾರ ಜೆಡಿಎಸ್ ಅಧಿಕೃತ ಅಭ್ಯರ್ಥಿಯಾಗಿ ನಾಮಪತ್ರ ಅಂಗೀಕಾರ

0

ಜಾತ್ಯಾತೀತ ಜನತಾದಳದ ಅಭ್ಯರ್ಥಿಯಾಗಿ ಬಿ. ಎನ್. ರವಿಕುಮಾರ ಅವರನ್ನು ನಾಮಪತ್ರ ಪರಿಶೀಲನೆಯ ನಂತರ ಅಧಿಕೃತವಾಗಿ ಚುನಾವಣಾ ಆಯೋಗ ಅಂಗೀಕರಿಸಿದ್ದಾರೆ. ಇಲ್ಲಿಗೆ ಇಷ್ಟು ದಿನ ನಡೆಯುತ್ತಿದ್ದ ಜೆಡಿಎಸ್ ಅಭ್ಯರ್ಥಿ ಆಯ್ಕೆಯ ಎಲ್ಲಾ ಗೊಂದಲಗಳಿಗೆ ತೆರೆ ಬಿದ್ದಂತಾಗಿದೆ. ಎಂ ರಾಜಣ್ಣ ರವರು ಜೆಡಿಎಸ್ ಅಭ್ಯರ್ಥಿಯಾಗಿ ಸಲ್ಲಿಸಿದ್ದ ನಾಮಪತ್ರ ಅನೂರ್ಜಿತಗೊಂಡಿದ್ದು, ಜೆಡಿಎಸ್ ನಿಂದ ಅಧಿಕೃತ ಅಭ್ಯರ್ಥಿಯಾರು ಆಗುತ್ತಾರೆ ಎನ್ನುವ ಕುರಿತು ಕಾರ್ಯಕರ್ತರಲ್ಲಿ ಗೊಂದಲ ಸೃಷ್ಟಿಯಾಗಿತ್ತು. ಈ ಗೊಂದಲಕ್ಕೆ ತೆರೆಬಿದ್ದಿದೆ.
ಮೇಲೂರು ಬಿ.ಎನ್.ರವಿಕುಮಾರ್ ಮಂಗಳವಾರ ನಾಮಪತ್ರ ಸಲ್ಲಿಸಲು ಅವಕಾಶವಿದ್ದ ಕಡೆಯ ನಿಮಿಷಗಳಲ್ಲಿ ಆಗಮಿಸಿ ಜೆಡಿಎಸ್‌ ವರಿಷ್ಠರ ಪತ್ರ ಹಾಗೂ ಪರಿಷ್ಕೃತ ಎ ಮತ್ತು ಬಿ ಫಾರಂ ನೊಂದಿಗೆ ನಾಮಪತ್ರ ಸಲ್ಲಿಸಿದ್ದರು.
ಪಕ್ಷದ ವರಿಷ್ಠರ ಪತ್ರ ಮತ್ತು ಪರಿಷ್ಕೃತ ಎ ಮತ್ತು ಬಿ ಫಾರಂ ಯಾರು ಕಡೆಯದಾಗಿ ಸಲ್ಲಿಸಿರುತ್ತಾರೋ ಅವರದ್ದೇ ನಾಮಪತ್ರ ಊರ್ಜಿತವಾಗುತ್ತದೆ ಎಂಬ ಆಧಾರದ ಮೇಲೆ ಮಧ್ಯಾಹ್ನ 2.15 ರಲ್ಲಿ ನಾಮಪತ್ರ ಸಲ್ಲಿಸಿದ್ದ ಎಂ.ರಾಜಣ್ಣ ಅವರ ನಾಮಪತ್ರ ಅನೂರ್ಜಿತಗೊಂಡು 2.45 ರಲ್ಲಿ ನಾಮಪತ್ರ ಸಲ್ಲಿಸಿದ್ದ ಮೇಲೂರು ಬಿ.ಎನ್.ರವಿಕುಮಾರ್ ಅವರ ನಾಮಪತ್ರ ಊರ್ಜಿತವಾಗಿದೆ.