Home News ಮಕ್ಕಳಲ್ಲಿರುವ ಪ್ರತಿಭೆಗಳನ್ನು ಹೊರಗೆಳೆಯಬೇಕು

ಮಕ್ಕಳಲ್ಲಿರುವ ಪ್ರತಿಭೆಗಳನ್ನು ಹೊರಗೆಳೆಯಬೇಕು

0

ಮಕ್ಕಳಲ್ಲಿರುವ ಪ್ರತಿಭೆಗಳನ್ನು ಹೊರಗೆಳೆಯುವಂತಹ ಪ್ರಯತ್ನಗಳಾಗಬೇಕು ಎಂದು ಸಿ.ಡಿ.ಪಿ.ಓ.ಲಕ್ಷ್ಮೀದೇವಮ್ಮ ಹೇಳಿದರು.
ನಗರದ ಉಲ್ಲೂರುಪೇಟೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಬಾಲಭವನ ಸೊಸೈಟಿ ಬೆಂಗಳೂರು, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆಯ ಸಹಯೋಗದಲ್ಲಿ 2015-16 ನೇ ಸಾಲಿನ 9 ರಿಂದ 16 ವರ್ಷದೊಳಗಿನ ಮಕ್ಕಳಿಗೆ ತಾಲ್ಲೂಕು ಮಟ್ಟದ ಕಲಾಶ್ರೀ ಶಿಬಿರವನ್ನು ಉದ್ಘಾಟನೆ ಮಾಡಿ ಅವರು ಮಾತನಾಡಿದರು.
ಪ್ರತಿಯೊಂದು ಮಗುವಿನಲ್ಲೂ ಒಂದೊಂದು ಪ್ರತಿಭೆಗಳು ಅಡಗಿರುತ್ತವೆ, ಅಂತಹ ಪ್ರತಿಭೆಗಳನ್ನು ಹೊರತೆಗೆಯಲು ಇರುವಂತಹ ಅವಕಾಶಗಳನ್ನು ಸದ್ಭಳಕೆ ಮಾಡಿಕೊಂಡು ಅವರಲ್ಲಿರುವ ಕಲಾಪ್ರಾಕಾರಗಳನ್ನು, ವೈಜ್ಞಾನಿಕವಾದ ಚಿಂತನೆಗಳನ್ನು ಹೊರಗೆಳೆಯುವಂತಹ ಪ್ರಯತ್ನವನ್ನು ಶಾಲಾ ಹಂತಗಳಲ್ಲೆ ಮಾಡಿದಾಗ ಅವರು, ರಾಷ್ಟ್ರೀಯ ಅಂತರಾಷ್ಟ್ರೀಯ ಮಟ್ಟಗಳಲ್ಲಿ ಗುರ್ತಿಸಿಕೊಳ್ಳಲು ಸಾಧ್ಯವಾಗುತ್ತದೆ, ಅನೇಕ ಮಕ್ಕಳಲ್ಲಿ ಪ್ರತಿಭೆಗಳಿದ್ದರೂ ಕೂಡಾ ಆರ್ಥಿಕವಾದ ಸಮಸ್ಯೆಗಳಿಂದಾಗಿ ಹೊರಪಡಿಸಲು ಸಾದ್ಯವಿಲ್ಲದ ಪರಿಸ್ಥಿತಿಯಲ್ಲಿದ್ದಾರೆ ಅಂತಹ ಮಕ್ಕಳನ್ನು ಗುರ್ತಿಸಬೇಕು, ಆಧುನಿಕತೆ ಬೆಳೆದಂತೆಲ್ಲಾ ಮಕ್ಕಳಲ್ಲಿ ಹೊಸ ಹೊಸ ವಿಚಾರಗಳನ್ನು ಕಲಿಯಬೇಕೆನ್ನುವಂತಹ ಆಸಕ್ತಿ ಕಡಿಮೆಯಾಗುತ್ತಿದ್ದು, ಪಾಶ್ಚಿಮಾತ್ಯ ಸಂಸ್ಕøತಿಯತ್ತ ಒಲವು ತೋರುತ್ತಿದ್ದಾರೆ, ಗ್ರಾಮೀಣ ಭಾಗದ ಕ್ರೀಡೆಗಳ ಬದಲಾಗಿ, ಕ್ರಿಕೆಟ್‍ನಂತಹ ಕ್ರೀಡೆಗಳ ಕಡೆಗೆ ಹೆಚ್ಚು ಆಕರ್ಷಿತರಾಗುತ್ತಿದ್ದಾರೆ, ಆದ್ದರಿಂದ ಪೋಷಕರೂ ಕೂಡಾ ಹೆಚ್ಚಿನ ರೀತಿಯಲ್ಲಿ ಸಹಕಾರ ನೀಡಿ, ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಶ್ರಮಿಸಬೇಕು ಎಂದರು.
ಶಿಕ್ಷಣ ಇಲಾಖೆಯ ಬೈರಾರೆಡ್ಡಿ, ಮುಖ್ಯಶಿಕ್ಷಕ ಕೃಷ್ಣಮೂರ್ತಿ, ಸಂದೀಪ್, ನಿರೀಕ್ಷಕಿ ಗಿರಿಜಾಂಬಿಕೆ, ಶಾಂತಾ ಜೀದಾಳೆ, ರಾಧಮ್ಮ, ಬಾಸ್ಕರ್, ಅರುಣ್, ಪ್ರಕಾಶ್, ಮುಂತಾದವರು ಹಾಜರಿದ್ದರು.

error: Content is protected !!