Home News ಮಕ್ಕಳಿಗೆ ದೊಣ್ಣೆ ವರಸೆ ಕಲಿಕಾ ಶಿಬಿರ

ಮಕ್ಕಳಿಗೆ ದೊಣ್ಣೆ ವರಸೆ ಕಲಿಕಾ ಶಿಬಿರ

0

ನಗರದ ವೇಣುಗೋಪಾಲಸ್ವಾಮಿ ದೇವಾಲಯದ ಸಭಾಂಗಣದಲ್ಲಿ ಭಾನುವಾರ ದಿವ್ಯಭಾರತ್‌ ಕರಾಟೆ ಅಸೋಸಿಯೇಶನ್‌ ವತಿಯಿಂದ ಕರಾಟೆ ವಿದ್ಯಾರ್ಥಿಗಳಿಗೆ ನಡೆದ ಒಂದು ದಿನದ ಶಿಬಿರದಲ್ಲಿ ಕರಾಟೆ ಶಿಕ್ಷಕ ಗೌರಿಬಿದನೂರಿನ ಚಂದ್ರಶೇಖರ್‌ ಮಾತನಾಡಿದರು.
ಕರಾಟೆ ಕಲಿಯುತ್ತಿರುವ ಮಕ್ಕಳಿಗೆ ವಿವಿಧ ಕಟ, ಬಂಕಾಯ್‌, ಕುಬುಡೂ, ದೊಣ್ಣೆ ವರಸೆ ಕಲಿಸುತ್ತಿರುವುದಾಗಿ ಅವರು ತಿಳಿಸಿದರು.
ಕರಾಟೆ ಕಲಿಯುವ ಮಕ್ಕಳಿಗೆ ಅವರ ಕಲಿಕೆಯನ್ನು ವಿಸ್ತಾರಗೊಳಿಸುವ ನಿಟ್ಟಿನಲ್ಲಿ ಅದಕ್ಕೆ ಸಂಬಂಧಿಸಿದ ಪ್ರಾವೀಣ್ಯತೆಗಳನ್ನು ಕಲಿಸಿ ಅಭ್ಯಸಿಸಲು ತಿಳಿಸಿಕೊಡಲಾಗಿದೆ ಎಂದರು.
ದಿವ್ಯಭಾರತ್‌ ಕರಾಟೆ ಅಸೋಸಿಯೇಶನ್‌ ಶಿಕ್ಷಕ ಅರುಣ್‌ಕುಮಾರ್‌ ಮಾತನಾಡಿ, ಕಲಿಕೆಯು ನಿರಂತರ. ಕರಾಟೆಯ ವಿವಿಧ ಮಜಲುಗಳನ್ನು ಮಕ್ಕಳಿಗೆ ತಿಳಿಸುತ್ತಾ ದೊಣ್ಣೆ ವರಸೆ ಮತ್ತು ನಾನ್‌ಚಾಕ್‌ ಕಲಿಸಲಾಯಿತು ಎಂದರು. 23 ಮಂದಿ ಮಕ್ಕಳು ಶಿಬಿರದಲ್ಲಿ ಭಾಗವಹಿಸಿದ್ದರು.
ಕ್ರೀಡಾಪಟು ಮುನಿರಾಜು, ಪುರುಷೋತ್ತಮ್‌, ನಾರಾಯಣಸ್ವಾಮಿ, ಕಲಾವಿದ ಮುನಿರಾಜು, ಮುರಳಿ ಹಾಜರಿದ್ದರು.

error: Content is protected !!