Home News ಮಳ್ಳೂರಿನ ಸಾಯಿನಾಥ ಜ್ಞಾನ ಮಂದಿರದಲ್ಲಿ ಗುರುಪೂರ್ಣಿಮೆ

ಮಳ್ಳೂರಿನ ಸಾಯಿನಾಥ ಜ್ಞಾನ ಮಂದಿರದಲ್ಲಿ ಗುರುಪೂರ್ಣಿಮೆ

0

ಗುರುಪೂರ್ಣಿಮೆ ಅಂಗವಾಗಿ ತಾಲೂಕಿನ ಮಳ್ಳೂರು ಗ್ರಾಮದ ಬಳಿಯ ಶ್ರಿಸಾಯಿನಾಥ ಜ್ಞಾನ ಮಂದಿರದಲ್ಲಿ ಗುರುವಾರ ಗುರುಪೂರ್ಣಿಮೆಯ ವಿಶೇಷ ಪೂಜಾ, ಪುನಸ್ಕಾರ, ಹೋಮ ಹವನ ಹಾಗೂ ಗುರುವನ್ನು ಸ್ಮರಿಸುವ ಭಜನೆ ಕಾರ್ಯಕ್ರಮ ನಡೆಯಿತು.
ಪವಿತ್ರ ಆಚರಣೆ ಗುರುಪೂರ್ಣಿಮೆ ಅಂಗವಾಗಿ ಸಾಯಿಬಾಬಾ ಮೂರ್ತಿಯನ್ನು ವಿವಿದ ರೀತಿಯ ಒಂಭತ್ತು ರೀತಿಯ ಹೂಗಳಿಂದ ಅಲಂಕರಿಸಲಾಗಿತ್ತು.
ಬೆಳಿಗ್ಗೆ ಕಾಕಡ ಆರತಿ ಬೆಳಗಿ ಪೂಜೆ ಸಲ್ಲಿಸುವ ಮೂಲಕ ಗುರುಪೂರ್ಣಿಮೆಯನ್ನು ಆರಂಭಿಸಿ, ನಂತರ ಅಗ್ನಿಹೋತ್ರ ಹೋಮ, ಧನ್ವಂತ್ರಿ ಹಾಗೂ ಸಾಯಿ ಹೋಮ, ಪೂರ್ಣಾಹುತಿ, ಶ್ರೀಸತ್ಯನಾರಾಯಣಸ್ವಾಮಿ ಪೂಜೆ ನಡೆಸಿ, ಮಹಾಮಂಗಳಾರತಿ ಮಾಡಿ, ತೀರ್ಥ ಪ್ರಸಾದವನ್ನು ವಿನಿಯೋಗಿಸಲಾಯಿತು.
ಲೋಕ ಕಲ್ಯಾಣಾರ್ಥವಾಗಿ ಕಳೆದ ೧೩ ದಿನಗಳಿಂದಲೂ ತಾಲ್ಲೂಕಿನ ವಿವಿದೆಡೆ ಆಗಮಿಸಿ ನಿರಂತರವಾಗಿ ನಡೆಸುತ್ತಿದ್ದ ಶ್ರೀರಾಮಕೋಟಿ ಅಖಂಡ ಭಜನೆಯ ತಂಡದವರು ಗುರುವಿಗೆ ನಮಿಸಿ ಭಜನೆ ಮಾಡುವ ಮೂಲಕ ಸಮಾಪ್ತಿ ಹಾಡಿದರು.
ಸಂಜೆ ೫ ಗಂಟೆಗೆ ಪದ್ಮಶ್ರೀ ಘಂಟಸಾಲ ಗಾನಕಲಾ ವೃಂದದವರಿಂದ ಭಕ್ತಿಗೀತೆಗಳು ಹಾಗೂ ಭಾವಗೀತೆಗಳ ಗಾಯನ ಕಾರ್ಯಕ್ರಮ ಸಭಿಕರನ್ನು ಭಕ್ತಿಸಾಗರದಲ್ಲಿ ಮಿಂದೇಳುವಂತೆ ಮಾಡಿತು.
ಭಕ್ತರಿಂದ ದಾನವಾಗಿ ಬಂದಿದ್ದ ಅಕ್ಕಿ ಬೇಳೆ ದವಸ ದಾನ್ಯ ತರಕಾರಿಗಳಿಂದ ತ್ರಿವಿಧ ಅಡುಗೆ ತಯಾರಿಸಿ ಎಲ್ಲ ಭಕ್ತರಿಗೂ ಅನ್ನಸಂತರ್ಪಣೆಯನ್ನು ನೆರವೇರಿಸಲಾಯಿತು.
ದೇವಾಲಯದ ಸೇವಾ ಕರ್ತರಾದ ಎಂ.ನಾರಾಯಣಸ್ವಾಮಿ, ರೂಪಸಿ ರಮೇಶ್, ಮಳ್ಳೂರು ಗೋಪಾಲಪ್ಪ, ಡಿಶ್ ಮಂಜುನಾಥ್, ಪ್ರಮೀಳಮ್ಮ, ರತ್ನಮ್ಮ, ವೀಣಮ್ಮ, ಗೋಪಾಲಮ್ಮ, ಅರ್ಚಕ ಲಕ್ಷ್ಮೀಪತಿ ಹಾಜರಿದ್ದರು.