Home News ಮಹಿಳೆಯರಿಂದ ಅಪ್ಪೇಗೌಡನಹಳ್ಳಿ ಗೇಟ್‌ನ ಬಯಲಾಂಜನೇಯಸ್ವಾಮಿ ದೇವಾಲಯ ಸ್ವಚ್ಛತೆ

ಮಹಿಳೆಯರಿಂದ ಅಪ್ಪೇಗೌಡನಹಳ್ಳಿ ಗೇಟ್‌ನ ಬಯಲಾಂಜನೇಯಸ್ವಾಮಿ ದೇವಾಲಯ ಸ್ವಚ್ಛತೆ

0

ತಾಲ್ಲೂಕಿನ ಅಪ್ಪೇಗೌಡನಹಳ್ಳಿ ಗೇಟ್‌ನ ಬಯಲಾಂಜನೇಯಸ್ವಾಮಿ ದೇವಾಲಯದ ಆವರಣದಲ್ಲಿ ಸ್ವಸಹಾಯ ಸಂಘದ ಸದಸ್ಯರೊಂದಿಗೆ ಸ್ವಚ್ಛತೆ ಕಾರ್ಯದಲ್ಲಿ ಭಾಗಿಯಾಗಿ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಸ್ಥೆಯ ಮೇಲ್ವಿಚಾರಕಿ ಜ್ಯೋತಿ ಮಾತನಾಡಿದರು.
‘ನಾವೇ ಮಾಲಿನ್ಯ ಹೋಗಲಾಡಿಸಿದರೆ ಮತ್ತೆ ನಮಗೆ ಮಾಲಿನ್ಯವಾಗಿಸಬಾರದೆಂಬ ಎಚ್ಚರಿಕೆ ಮೂಡುತ್ತದೆ’ ಎಂಬ ಉದ್ದೇಶದಿಂದ ನಮ್ಮ ಗ್ರಾಮದ ಶ್ರದ್ಧಾ ಕೇಂದ್ರವನ್ನು ಸಾಮೂಹಿಕವಾಗಿ ಸ್ವಚ್ಛಗೊಳಿಸುವ ಸಂಪ್ರದಾಯವನ್ನು ಪ್ರಾರಂಭಿಸಿದ್ದೇವೆ ಎಂದು ಅವರು ತಿಳಿಸಿದರು.
ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಭಾರತದ ಸ್ವಚ್ಛ ಧಾರ್ಮಿಕ ಕ್ಷೇತ್ರ ಎಂಬ ಪ್ರಶಸ್ತಿ ಬಂದಿದೆ. ನಾಡಿನ ಎಲ್ಲ ದೇಗುಲಗಳೂ ಸ್ಚಚ್ಛವಾಗಿರಬೇಕು ಎಂಬ ಸದುದ್ದೇಶದಿಂದ ವರ್ಷಕ್ಕೆ ಎರಡು ಬಾರಿ ಎಲ್ಲಾ ಗ್ರಾಮದ ಶ್ರದ್ಧಾಕೇಂದ್ರಗಳಾದ ದೇವಸ್ಥಾನಗಳನ್ನು ಸ್ವಚ್ಛತೆ ಕಾರ್ಯ ಮಾಡಲು ಧರ್ಮಸ್ಥಳದ ಧರ್ಮದರ್ಶಿ ಡಾ.ಡಿ.ವೀರೇಂದ್ರ ಹೆಗ್ಗಡೆಯವರು ಕರೆ ನೀಡಿದ್ದಾರೆ. ಅವರ ಆದರ್ಶ ಮತ್ತು ಸ್ಫೂರ್ತಿಯನ್ನು ಗಮನದಲ್ಲಿರಿಸಿ ಸ್ವಚ್ಛತೆಯನ್ನು ನಡೆಸಿದ್ದೇವೆ. ಸ್ವಚ್ಛ ಮಾಡಿದ ನಂತರ ಮಹಿಳೆಯರು ರಂಗೋಲಿಯನ್ನು ಹಾಕಿ ಇನ್ನಷ್ಟು ಸುಂದರಗೊಳಿಸುವರು ಎಂದು ಅವರು ಹೇಳಿದರು.
ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಸ್ಥೆಯ ಸೇವಾ ಪ್ರತಿನಿಧಿ ಲಕ್ಷ್ಮಮ್ಮ, ಸ್ವಸಹಾಯ ಸಂಘಗಳ ಒಕ್ಕೂಟದ ಅಧ್ಯಕ್ಷೆ ಸುಮ, ಸದಸ್ಯರಾದ ಜಾನಕಮ್ಮ, ಪಾರ್ವತಮ್ಮ, ಮಂಜುಳ, ಸುವರ್ಣಮ್ಮ, ಮುನಿಲಕ್ಷ್ಮಮ್ಮ, ದೇವಮ್ಮ, ಮುನಿರತ್ನಮ್ಮ, ನೀಲಮ್ಮ, ವೆಂಕಟಮ್ಮ ಹಾಜರಿದ್ದರು.

error: Content is protected !!