Home News ಮಾಚಿದೇವರ ಯುವಕರ ಸಂಘದಿಂದ ದಿನಚರಿ ಬಿಡುಗಡೆ

ಮಾಚಿದೇವರ ಯುವಕರ ಸಂಘದಿಂದ ದಿನಚರಿ ಬಿಡುಗಡೆ

0

ಪ್ರತಿವರ್ಷವೂ ಮಡಿವಾಳ ಮಾಚಿದೇವರ ಯುವಕರ ಸಂಘದಿಂದ ದಿನಚರಿಯನ್ನು ಹೊರತರುತ್ತಿದ್ದು, ಅದನ್ನು ಸಮುದಾಯದ ಪ್ರತಿ ಮನೆಗೂ ತಲುಪಿಸುತ್ತಾ ಶೈಕ್ಷಣಿಕ ಹಾಗೂ ಸಾಮಾಜಿಕ ಕೆಲಸ ಮಾಡಲು ಸಂಘಟನೆ ಮಾಡುತ್ತಿರುವುದಾಗಿ ರಾಜ್ಯ ಮಡಿವಾಳ ಸಂಘದ ಉಪಾಧ್ಯಕ್ಷ ಆರ್‌.ವಿ.ರಾಜಣ್ಣ ತಿಳಿಸಿದರು.
ನಗರದ ಟಿ.ಬಿ.ರಸ್ತೆಯಲ್ಲಿರುವ ಮಡಿವಾಳ ಮಾಚಿದೇವರ ಸಂಘದ ಕಚೇರಿಯಲ್ಲಿ ಭಾನುವಾರ ಸಂಜೆ ಮಡಿವಾಳ ಮಾಚಿದೇವರ ಯುವಕರ ಸಂಘದಿಂದ ಹೊಸ ವರ್ಷದ ಕ್ಯಾಲೆಂಡರನ್ನು ಬಿಡುಗಡೆ ಮಾಡಿ ಅವರು ಮಾತನಾಡಿದರು.
ಸಮುದಾಯದಲ್ಲಿ ಬಹಳ ಮಂದಿ ಶೈಕ್ಷಣಿಕವಾಗಿ ಮತ್ತು ಆರ್ಥಿಕವಾಗಿ ಹಿಂದುಳಿದಿದ್ದಾರೆ. ಅವರಿಗೆ ಸರ್ಕಾರದ ನೆರವನ್ನು ತಲುಪಿಸುವುದು ಮತ್ತು ಅವರಿಗೆ ಸಹಾಯ ಮಾಡಲು ಸಂಘದಿಂದ ಶ್ರಮಿಸಲಾಗುತ್ತಿದೆ. ಅಂಘವು ಸಮುದಾಯದ ಪ್ರತಿ ಮನೆಯನ್ನು ತಲುಪಲು ಕ್ಯಾಲೆಂಡರ್‌ ನೆರವಾಗಲಿದೆ ಎಂದರು.
ಮಡಿವಾಳ ಮಾಚಿದೇವರ ಸಂಘದ ತಾಲ್ಲೂಕು ಪ್ರಧಾನ ಕಾರ್ಯದರ್ಶಿ ಎಸ್‌.ಎಂ.ಮುನಿರಾಜು, ಡಿ.ವಿ.ಕೃಷ್ಣಪ್ಪ, ದೇವರಾಜ್‌, ಎಚ್‌.ಕೆ.ಶ್ರೀನಿವಾಸ್‌, ಎನ್‌.ರಾಜು, ರಾಮಚಂದ್ರಪ್ಪ, ಎಚ್‌.ಸಿ.ರಮೇಶ್‌, ಚಂದ್ರಪ್ಪ, ಆಂಜಿನಪ್ಪ, ಎನ್‌.ಹರೀಶ್‌, ಕೆ.ಎಂ.ಮುನಿರಾಜು, ವೆಂಕಟೇಶ್‌ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.