ಭಾರತೀಯ ಜನತಾ ಪಕ್ಷದ ವತಿಯಿಂದ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಜನ್ಮದಿನವನ್ನು ಸಡಗರದಿಂದ ಆಚರಿಸಲಾಯಿತು. ಪಕ್ಷದ ಕಾರ್ಯಕರ್ತರು ನಗರದ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ರೋಗಿಗಳಿಗೆ ಹಣ್ಣು ಮತ್ತು ಬ್ರೆಡ್ ವಿತರಿಸಿದರು.
“ವಾಜಪೇಯಿ ಅವರು ಅಭಿವೃದ್ಧಿಯ ಹರಿಕಾರರಾಗಿದ್ದು, ತಮ್ಮ ಕೆಲಸಗಳ ಮೂಲಕ ಅವರು ದೇಶದ ಜನರ ಹೃದಯ ಗೆದ್ದಿದ್ದಾರೆ. ವಾಜಪೇಯಿ ಒಬ್ಬ ಅಜಾತಶತ್ರು, ದೇಶಕಂಡ ಹೆಮ್ಮಯ ನಾಯಕ. ಭ್ರಷ್ಟಚಾರ ನಿರ್ಮೂಲನೆ ಮಾಡಿದ ವ್ಯಕ್ತಿ. ಅವರ ಆಡಳಿತದ ಅವಧಿಯಲ್ಲಿ ದೇಶ ಸಾಕಷ್ಟು ಅಭಿವೃದ್ಧಿ ಕಂಡಿತ್ತು. ಈಗ ನರೇಂದ್ರ ಮೋದಿ ಅವರ ಹಾದಿಯಲ್ಲಿ ದೇಶವನ್ನು ಅಭಿವೃದ್ಧಿ ಪಥದತ್ತ ಕೊಂಡೊಯ್ಯುತ್ತಿದ್ದಾರೆ” ಎಂದು ಬಿಜೆಪಿ ನಗರ ಮಂಡಲ ಅಧ್ಯಕ್ಷ ರಾಘವೇಂದ್ರ ತಿಳಿಸಿದರು.
ಬಿಜೆಪಿ ಗ್ರಾಮೀಣ ಮಂಡಲ ಅಧ್ಯಕ್ಷ ಸುರೇಂದ್ರಗೌಡ ಮಾತನಾಡಿ, “ಆರ್‌ಎಸ್‌ಎಸ್ ಕಾರ್ಯಕರ್ತರಾಗಿ, ತುರ್ತು ಪರಿಸ್ಥಿತಿಯಲ್ಲಿ ಹೋರಾಟ ಮಾಡಿ, ಬಿಜೆಪಿಯನ್ನು ಅಧಿಕಾರಕ್ಕೆ ತಂದ ಅವರ ಬದುಕು, ಧ್ಯೇಯ, ತತ್ವಾದರ್ಶ, ವಾಗ್ಝರಿ, ದಿಟ್ಟ ನಿಲುವು ಇಂದಿನ ರಾಜಕಾರಣಿಗಳಿಗೆ ಮಾದರಿಯಾಗಿದೆ. ದೇಶ ಕಂಡ ಅಪ್ರತಿಮ ಪ್ರಧಾನಿ, ಅಜಾತಶತ್ರು, ಕವಿ ಹೃದಯಿ, ಮಾನವತಾವಾದಿ, ಮುತ್ಸದ್ಧಿ, ಅಸ್ಖಲಿತ ವಾಗ್ಮಿಯಾಗಿದ್ದ ವಾಜಪೇಯಿಯವರನ್ನು ವಿರೋಧ ಪಕ್ಷದವರೂ ಸಹ ಮೆಚ್ಚುತ್ತಿದ್ದರು” ಎಂದು ಹೇಳಿದರು.
ಮಂಜುಳಮ್ಮ, ಸುಜಾತಮ್ಮ, ದಾಮೋದರ್, ಬೈರಾರೆಡ್ಡಿ, ದೇವರಾಜ ಹಾಜರಿದ್ದರು.