ತಾಲ್ಲೂಕಿನ ಮೇಲೂರು ಗ್ರಾಮದ ಬಾರ್‌ವೊಂದರಲ್ಲಿ ಕುಡಿದು, ಬಿಲ್ ಕೇಳಿದ್ದಕ್ಕೆ ಕ್ಯಾಷಿಯರ್‌ನ್ನು ಅವಾಚ್ಯ ಶಬ್ಧಗಳಿಂದ ನಿಂಧಿಸಿ ಜಾತಿ ನಿಂದನೆ ಮಾಡಿ ಹಲ್ಲೆ ನಡೆಸಿದ ಘಟನೆ ಮಂಗಳವಾರ ರಾತ್ರಿ ನಡೆದಿದೆ.
ಮೇಲೂರು ಗ್ರಾಮದ ಬಾರ್‌ನಲ್ಲಿ ಕುಡಿದ ಅದೇ ಗ್ರಾಮದ ಅಂಬರೀಷ್, ರಕ್ಷಣಾ ವೇದಿಕೆಯ ಶ್ರೀಧರ್ ಹಾಗೂ ಚೌಡಸಂದ್ರದ ರಾಮಚಂದ್ರ ಎಂಬುವವರು ಬಿಲ್ ಕೇಳಿದ್ದಕ್ಕೆ ನನ್ನನ್ನು ಅವಾಚ್ಯ ಶಬ್ಧಗಳಿಂದ ನಿಂಧಿಸಿ ಜಾತಿ ನಿಂದನೆ ಮಾಡಿ ಹಲ್ಲೆ ನಡೆಸಿದರು ಎಂದು ಗ್ರಾಮಾಂತರ ಠಾಣೆಯಲ್ಲಿ ಬಾರ್ ಮಾಲೀಕ ಗಿರೀಶ್ ನಾಯಕ್ ದೂರು ದಾಖಲಿಸಿದ್ದಾರೆ.
ಗಾಯಾಳು ಗಿರೀಶ್ ನಾಯಕ್‌ನು ಗಾಯಗೊಂಡು ಆಸ್ಪತ್ರೆಗೆ ಬಂದು ದೂರು ನೀಡಿದರೂ ದೂರು ದಾಖಲಿಸಿಕೊಳ್ಳಲು ತಡ ಮಾಡಿದ್ದನ್ನು ವಿರೋಧಿಸಿ ಗಿರೀಶ್ ನಾಯಕ್‌ರ ಬೆಂಬಲಿಗರು ಆಸ್ಪತ್ರೆ ಆವರಣದಲ್ಲಿಯೆ ಪ್ರತಿಭಟನೆ ನಡೆಸಿದರು.
ನಂತರ ಸ್ಥಳಕ್ಕೆ ಬಂದ ಪೊಲೀಸರು ಕ್ರಮ ಜರುಗಿಸುವುದಾಗಿ ಭರವಸೆ ನೀಡಿದರೂ ಪ್ರತಿಭಟನೆ ಕೈ ಬಿಡಿದ ಪ್ರತಿಭಟನಾಕಾರರು ಆರೋಪಿಗಳಲ್ಲೊಬ್ಬರಾದ ಅಂಬರೀಷ್‌ನು ಪಾನಮತ್ತನಾಗಿ ಈ ಕೃತ್ಯ ಎಸಗಿದ್ದು ಕೂಡಲೆ ಆತನ ತಪಾಸಣೆ ನಡೆಸುವಂತೆ ಒತ್ತಾಯಿಸಿದರು.
ಕೊನೆಗೂ ಆರೋಪಿಯು ಮದ್ಯಪಾನ ಮಾಡಿರುವುದಾಗಿ ತಪಾಸಣೆ ಮೂಲಕ ಖಚಿತ ಪಡಿಸಿದ ಮೇಲಷ್ಟೆ ಪ್ರತಿಭಟನೆಯನ್ನು ಕೈ ಬಿಡಲಾಯಿತು.
ಇದಕ್ಕೆ ಪ್ರತಿಯಾಗಿ ಚೌಡಸಂದ್ರದ ರಾಮಚಂದ್ರಪ್ಪನು ಆಸ್ಪತ್ರೆ ಆವರಣದಲ್ಲಿ ಬಿಟ್ಟಿದ್ದ ತನ್ನ ಕಾರನ್ನು ಜಖಂಗೊಳಿಸಿದ್ದಾರೆ ಎಂದು ಗಿರೀಶ್ ಹಾಗೂ ಇತರರ ಮೇಲೆ ದೂರು ಸಹ ದಾಖಲಿಸಿದ್ದಾರೆ.