ನಗರದ ಸಾರ್ವಜನಿಕ ಗ್ರಂಥಾಲಯದ ಮುಂಭಾಗ ಪ್ರಜಾಪಿತ ಬ್ರಹ್ಮಕುಮಾರೀಸ್ ಈಶ್ವರಿಯ ವಿಶ್ವವಿದ್ಯಾಲಯದ ಆದ್ಯಾತ್ಮಿಕ ಸಂಸ್ಥೆಯಲ್ಲಿ ಶುಕ್ರವಾರ ನಡೆದ ರಕ್ಷಾಬಂಧನ ಹಾಗೂ ಶ್ರೀಕೃಷ್ಣ ಜನ್ಮಾಷ್ಟಮಿ ಕಾರ್ಯಕ್ರಮದಲ್ಲಿ ಆಶಾಕಿರಣ ಅಂಧಮಕ್ಕಳಿಗೆ ರಕ್ಷಾಬಂಧನವನ್ನು ಕಟ್ಟಿ ಪ್ರಜಾಪಿತ ಬ್ರಹ್ಮಕುಮಾರೀಸ್ ಈಶ್ವರಿಯ ವಿಶ್ವವಿದ್ಯಾಲಯದ ಶಾಖಾ ಸಂಚಾಲಕಿ ಬಿ.ಕೆ. ಜಯಕ್ಕ ಮಾತನಾಡಿದರು.
ಭಗವಂತನನ್ನು ಕಾಣಲು ಬಾಹ್ಯ ಕಣ್ಣಿನ ಅಗತ್ಯವಿಲ್ಲ, ಜ್ಞಾನ ನೇತ್ರ ಅಥವಾ ಸೂಕ್ಷ್ಮ ಕಣ್ಣಿರಬೇಕು ಎಂದು ಅವರು ತಿಳಿಸಿದರು.
ಅಣ್ಣನಿಗೆ ತಂಗಿ ರಕ್ಷೆ ನೀಡಲೆಂದು ರಕ್ಷಾಬಂಧನ ಕಟ್ಟುವುದು ವಾಡಿಕೆ. ಹಾಗೆಯೇ ಎಲ್ಲರನ್ನೂ ಕಾಪಾಡುವ ಭಗವಂತ ನ ರಕ್ಷಣೆಯೂ ನಮ್ಮೆಲ್ಲರ ಮೇಲಿರಲಿ ಎಂಬ ಭಾವದಿಂದ ನಾವು ರಕ್ಷಾಬಂಧನವನ್ನು ಆಚರಿಸುತ್ತೇವೆ ಎಂದು ಹೇಳಿ ಧ್ಯಾನದ ಮಹತ್ವವನ್ನು ಮಕ್ಕಳಿಗೆ ತಿಳಿಸಿದರು.
ಈ ಸಂದರ್ಭದಲ್ಲಿ ಪ್ರಜಾಪಿತ ಬ್ರಹ್ಮಕುಮಾರೀಸ್ ಈಶ್ವರಿಯ ವಿಶ್ವವಿದ್ಯಾಲಯದ ವತಿಯಿಂದ ಆಶಾಕಿರಣ ಅಂಧಮಕ್ಕಳಿಗೆ ರಕ್ಷಾಬಂಧನವನ್ನು ಕಟ್ಟಿ, ಸಿಹಿ ಹಾಗೂ ಊಟವನ್ನು ಆಯೋಜಿಸಲಾಗಿತ್ತು.
ಬಿ.ಕೆ.ರೂಪಕ್ಕ, ಎಂ.ಎ.ರಾಮಕೃಷ್ಣ ಹಾಜರಿದ್ದರು.