Home News ರಾಜಗೋಪುರ ಮತ್ತು ಕಲ್ಲಿನ ಕಾಂಪೌಂಡ್‌ ನಿರ್ಮಾಣ

ರಾಜಗೋಪುರ ಮತ್ತು ಕಲ್ಲಿನ ಕಾಂಪೌಂಡ್‌ ನಿರ್ಮಾಣ

0

ತಾಲ್ಲೂಕಿನ ಚೌಡಸಂದ್ರ ಗ್ರಾಮದಲ್ಲಿ ನಾಲ್ಕು ಕೋಟಿ ರೂಗಳ ವೆಚ್ಚದಲ್ಲಿ ನಿರ್ಮಿಸಿರುವ ಆಂಜನೇಯಸ್ವಾಮಿ ದೇವಾಲಯದ ಆವರಣದಲ್ಲಿ ಗುರುವಾರ ರಾಜಗೋಪುರ ಮತ್ತು ಕಲ್ಲಿನ ಕಾಂಪೌಂಡ್‌ ನಿರ್ಮಾಣಕ್ಕೆ ಗುದ್ದಲಿಪೂಜೆಯನ್ನು ನೆರವೇರಿಸಲಾಯಿತು.
ಸುಮಾರು 82 ಲಕ್ಷ ರೂಪಾಯಿಗಳ ವೆಚ್ಚದಲ್ಲಿ ರಾಜಗೋಪುರ ಮತ್ತು 42 ಲಕ್ಷ ರೂಪಾಯಿಗಳ ವೆಚ್ಚದಲ್ಲಿ ಕಲ್ಲಿನ ಕಾಂಪೌಂಡ್‌ ನಿರ್ಮಾಣ ಮಾಡಲು ಉದ್ದೇಶಿಸಿದ್ದು, ವಿಶೇಷ ಪೂಜೆಯೊಂದಿಗೆ ಅಡಿಪಾಯ ಪೂಜೆ ನಡೆಸಲಾಯಿತು.
ಚಿಕ್ಕಲ್‌ಸಂದ್ರ ಅಪ್ಪಯ್ಯಸ್ವಾಮಿ ಕುಟುಂಬ, ದೇವಾಲಯ ಕುಲಬಾಂಧವರು ಮತ್ತು ಗ್ರಾಮಸ್ಥರು ಈ ಸಂದರ್ಭದಲ್ಲಿ ಹಾಜರಿದ್ದರು.