Home News ರಾಜ್ಯ ಮತ್ತು ರಾಷ್ಟ್ರಮಟ್ಟವನ್ನು ಪ್ರತಿನಿಧಿಸಿರುವ ಕ್ರೀಡಾಪಟುಗಳಿಗೆ ಪ್ರೋತ್ಸಾಹಿಸುವ ಕಾರ್ಯಕ್ರಮ

ರಾಜ್ಯ ಮತ್ತು ರಾಷ್ಟ್ರಮಟ್ಟವನ್ನು ಪ್ರತಿನಿಧಿಸಿರುವ ಕ್ರೀಡಾಪಟುಗಳಿಗೆ ಪ್ರೋತ್ಸಾಹಿಸುವ ಕಾರ್ಯಕ್ರಮ

0

ನಗರದ ನೆಹರೂ ಕ್ರೀಡಾಂಗಣದಲ್ಲಿ ಲಯನ್‌ ಯುವ ಕ್ರೀಡಾ ಮತ್ತು ಸಾಂಸ್ಕೃತಿಕ ಸಂಘದ ವತಿಯಿಂದ ನಡೆಯುತ್ತಿರುವ ಉಚಿತ ಬೇಸಿಗೆ ಕ್ರೀಡಾ ಶಿಬಿರದಲ್ಲಿ ಭಾನುವಾರ ಬೆಳಿಗ್ಗೆ ರಾಷ್ಟ್ರಮಟ್ಟ ಹಾಗೂ ರಾಜ್ಯಮಟ್ಟವನ್ನು ಪ್ರತಿನಿಧಿಸಿರುವ ಕ್ರಿಡಾಪಟುಗಳನ್ನು ಗೌರವಿಸಿ ಅವರು ಮಾತನಾಡಿದರು.
ರಾಷ್ಟ್ರಮಟ್ಟವನ್ನು ಪ್ರತಿನಿಧಿಸಿರುವ ಎಂ.ಮುನಿಕೃಷ್ಣ(ಬ್ಯಾಸ್ಕೆಟ್‌ಬಾಲ್‌), ಚೈತನ್ಯ(ಅಥ್ಲೆಟಿಕ್ಸ್‌) ಮತ್ತು ಭಗತ್‌ಕುಮಾರ್‌(ಅಥ್ಲೆಟಿಕ್ಸ್‌) ಅವರಿಗೆ ತಲಾ ನಾಲ್ಕು ಸಾವಿರ ರೂಗಳ ನಗದು ಹಣ ನೀಡಿ ಗೌರವಿಸಲಾಯಿತು.
ರಾಜ್ಯಮಟ್ಟವನ್ನು ಪ್ರತಿನಿಧಿಸಿರುವ ದಾಕ್ಷಾಯಿಣಿ, ದಿಲೀಪ್‌, ಮೋಹಿತ್‌ನಾಯಕ್‌, ತೋಸಿಬ್‌ಪಾಷ, ಕಿರಣ್‌, ಚಂದು, ಯಶವಂತ್‌, ಗಗನ್‌, ಈಶ್ವರ್‌, ಶ್ರೀಹರಿ, ರಂಜಿತ್‌ಕುಮಾರ್‌, ಕಾರ್ತಿಕ್‌ ಅವರಿಗೆ ಶೂಗಳನ್ನು ನೀಡಲಾಯಿತು. ಕರಾಟೆ ಶಿಕ್ಷಕ ಅರುಣ್‌ಕುಮಾರ್‌ ಅವರನ್ನು ಗೌರವಿಸಲಾಯಿತು.
ನಾರಾಯಣಸ್ವಾಮಿ, ಬಿ.ಸಿ.ನಂದೀಶ್‌, ಲಕ್ಷ್ಮೀಪತಿ, ಪುರುಷೋತ್ತಮ, ಜಗದೀಶ್‌, ಶ್ರೀರಾಮ, ಶಿವಲಿಂಗ, ಗಂಗಾಧರ, ಸಂದೀಪ್‌, ಬಾಬು, ಮಂಜು ಹಾಜರಿದ್ದರು.

error: Content is protected !!