ಶಿಡ್ಲಘಟ್ಟದಲ್ಲಿ ಶುಕ್ರವಾರ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಸದಸ್ಯರು ಬೆಂಗಳೂರಿನಲ್ಲಿ ನಡೆಯುವ ರೈತ ಸಮಾವೇಶಕ್ಕೆ ಬಸ್‌ನಿಲ್ದಾಣದ ಬಳಿಯಿಂದ ತೆರಳಿದರು. ರೈತ ಸಂಘ ಹಾಗೂ ಹಸಿರು ಸೇನೆ ತಾಲ್ಲೂಕು ಅಧ್ಯಕ್ಷ ತಾದೂರು ಮಂಜುನಾಥ್, ನಗರಘಟಕ ಅಧ್ಯಕ್ಷ ನಾರಾಯಣಸ್ವಾಮಿ, ವೈ.ರಾಮಕೃಷ್ಣಪ್ಪ, ಕೆ.ವೇಣುಗೋಪಾಲ್, ಪಿ.ವಿ.ದೇವರಾಜ್, ಹರೀಶ್, ಅಶ್ವತ್ಥ್ ಮತ್ತಿತರರು ಹಾಜರಿದ್ದರು.