Home News ರೈಲ್ವೇ ನಿಲ್ದಾಣ ಅಧೀಕ್ಷಕ ಅಮಾನತ್ತು

ರೈಲ್ವೇ ನಿಲ್ದಾಣ ಅಧೀಕ್ಷಕ ಅಮಾನತ್ತು

0

ನಗರದ ರೈಲ್ವೇ ನಿಲ್ದಾಣದ ಅಧೀಕ್ಷಕ ಕುಮಾರಸ್ವಾಮಿ ಕರ್ತವ್ಯದಲ್ಲಿದ್ದುಕೊಂಡು ರೈಲು ನಿಲ್ದಾಣದಲ್ಲಿಯೆ ಕಂಠಪೂರ್ತಿ ಕುಡಿದು, ಕರ್ತವ್ಯ ಲೋಪ ಎಸಗಿದ್ದ ಹಿನ್ನಲೆಯಲ್ಲಿ ಇಲಾಖೆಯ ಹಿರಿಯ ಅಧಿಕಾರಿಗಳು ಕುಮಾರಸ್ವಾಮಿಯನ್ನು ಅಮಾನತ್ತುಗೊಳಿಸಿ ಅದೇಶಿಸಿದ್ದಾರೆ.
ನಗರದಲ್ಲಿನ ರೈಲು ನಿಲ್ದಾಣದ ಅಧೀಕ್ಷಕ ಕುಮಾರಸ್ವಾಮಿ ಬುಧವಾರ ಕರ್ತವ್ಯದಲ್ಲಿದ್ದಾಗಲೆ ಮದ್ಯ ಸೇವಿಸಿ ಅರೆ ಬೆತ್ತಲೆಯಾಗಿ ನಿತ್ರಾಣಗೊಂಡು ಕಚೇರಿಯ ಟೇಬಲ್ ಮೇಲೆ ಬಿದ್ದಿದ್ದರು. ರೈಲು ಬಂದು ಹೋದರು ಆತ ಮಾತ್ರ ಮಲಗಿದ್ದಲ್ಲಿಂದ ಕದಲಲೇ ಇಲ್ಲ.
ಇದರಿಂದ ಟ್ರೈನು ಬಂದು ಹೋದರೂ ಸಿಗ್ನಲ್ ನೀಡುವುದು, ಟ್ರೈನು ಬಂದು ಹೋಗುವುದಕ್ಕೂ ಮುಂಚೆ ಅಕ್ಕ ಪಕ್ಕದ ರೈಲು ನಿಲ್ದಾಣಗಳಿಗೆ ರೈಲು ಆಗಮನ ನಿರ್ಗಮನದ ಬಗ್ಗೆ ಮಾಹಿತಿ ನೀಡುವುದು, ಪ್ರಯಾಣಿಕರಿಗೆ ಟಿಕೇಟ್ ನೀಡುವುದು ಸೇರಿದಂತೆ ಯಾವುದೆ ಚಟುವಟಿಕೆಗಳು ನಡೆಯಲಿಲ್ಲ.
ಕೋಲಾರದಿಂದ ಬೆಂಗಳೂರಿಗೆ ಹೋಗಿ ಬಂದ ಟ್ರೈನು ಮತ್ತೆ ಕೋಲಾರ ಸೇರಿದರೂ ಕುಮಾರಸ್ವಾಮಿಗೆ ಮಾತ್ರ ಕುಡಿದಿದ್ದ ಅಮಲು ಇಳಿಯಲೇ ಇಲ್ಲ. ಈ ಬಗ್ಗೆ ಮಾಧ್ಯಮ ಸುದ್ದಿಯನ್ನು ಮಾಡಿತ್ತು. ಇದರಿಂದ ಎಚ್ಚೆತ್ತ ರೈಲ್ವೆಯ ಹಿರಿಯ ಅಧಿಕಾರಿಗಳು ಕುಮಾರಸ್ವಾಮಿಯನ್ನು ಅಮಾನತ್ತು ಮಾಡಿ ಆದೇಶ ಹೊರಡಿಸಿದ್ದಾರೆ.
ಅವರ ಜಾಗಕ್ಕೆ ರವಿಕುಮಾರ್ ಎಂಬುವವರನ್ನು ನಿಯೋಜಿಸಿದ್ದು ರವಿಕುಮಾರ್ ಗುರುವಾರ ಅಧಿಕಾರವಹಿಸಿಕೊಂಡು ತಮ್ಮ ಕೆಲಸವನ್ನು ಆರಂಭಿಸಿದರು. ಎಂದಿನಂತೆ ಟಿಕೇಟ್ ವಿತರಣೆ ಇನ್ನಿತರೆ ಎಲ್ಲ ಕಾರ್ಯಗಳು ಸುಲಲಿತವಾಗಿ ನಡೆದವು. ಎಂದಿನಂತೆ ಟ್ರೈನುಗಳು ಸಂಚರಿಸಿದವು. ಪ್ರಯಾಣಿಕರು ಸಹ ಯಾವುದೆ ಅಡ್ಡಿ ಆತಂಕಗಳು ಇಲ್ಲದೆ ರೈಲು ಹತ್ತಿ ಹೊರಟರು.