ತಾಲ್ಲೂಕಿನ ವರದನಾಯಕನಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸ್ವಾತಂತ್ರ್ಯ ದಿನಾಚರಣೆಯ ಕಾರ್ಯಕ್ರಮವನ್ನು ವಿಶೇಷವಾಗಿ ಆಚರಿಸಲಾಯಿತು.
ಧ್ವಜಾರೋಹಣನ್ನು ಗ್ರಾಮದ ಹಿರಿಯರಾದ ದ್ಯಾವಪ್ಪ ನೆರವೇರಿಸಿದರು. ಶಿಕ್ಷಕ ಎಚ್.ವಿ.ವೆಂಕಟರೆಡ್ಡಿ ಭಗತ್ಸಿಂಗ್ ಕುರಿತಂತೆ ಮಕ್ಕಳಿಗೆ ತಿಳಿಸಿದರು. ಏಳನೇ ತರಗತಿ, ಎಸ್.ಎಸ್.ಎಲ್.ಸಿ ಮತ್ತು ಪಿ.ಯು.ಸಿ ಯಲ್ಲಿ ಹೆಚ್ಚು ಅಂಕ ಗಳಿಸಿರುವ ಗ್ರಾಮದ ವಿದ್ಯಾರ್ಥಿಗಳಾದ ಎನ್.ಸುಶ್ಮಿತ, ವಿ.ಎಸ್.ಮಿಥುನ್ಕುಮಾರ್, ಕಿಶೋರ್, ಸುದೀಪ್, ವಿನುತ ಅವರನ್ನು ಪುರಸ್ಕರಿಸಲಾಯಿತು.
ವಿದ್ಯಾರ್ಥಿಗಳು ದೇಶಭಕ್ತಿಗೀತೆಗಳಿಗೆ ನೃತ್ಯಗಳನ್ನು, ಬಕಾಸುರ ವಧೆ ನಾಟಕವನ್ನು ಪ್ರದರ್ಶಿಸಿದರು. ನಿವೃತ್ತ ಶಿಕ್ಷಕ ವೆಂಕಟಸ್ವಾಮಿ ಅವರನ್ನು ಸನ್ಮಾನಿಸಿದರು. ಶಾಲೆಯ ಹಿರಿಯ ವಿದ್ಯಾರ್ಥಿಗಳು ಶಾಲೆಗೆ 50 ತಟ್ಟೆಗಳು, ಹಿಂಬದಿ ಸ್ಕ್ರೀನ್ ಹಾಗೂ ಅಂಗಳದಲ್ಲಿ ಸಮತಟ್ಟಾಗಿರಲು ಮಣ್ಣು ಹಾಕಿಸಲು ಹಣವನ್ನು ನೀಡಿದರು.
ಗ್ರಾಮದ ದೇವರಾಜು, ಅಮರನಾಥ್, ರಘುನಾಥ್, ಹನುಮಂತಯ್ಯ, ನಾಗರಾಜ್, ಮೂರ್ತಿ, ಶಿಕ್ಷಕರು ಹಾಜರಿದ್ದರು.
- Advertisement -
- Advertisement -
- Advertisement -
- Advertisement -