Home News ವರ್ಷಕ್ಕೆ ಒಂದು ಕೋಟಿ ಸಸಿ ನೆಡುವ ಕೋಟಿ-ನಾಟಿ ಕಾರ್ಯಕ್ರಮ

ವರ್ಷಕ್ಕೆ ಒಂದು ಕೋಟಿ ಸಸಿ ನೆಡುವ ಕೋಟಿ-ನಾಟಿ ಕಾರ್ಯಕ್ರಮ

0

ನಗರದ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಶುಕ್ರವಾರ ಆಯೋಜಿಸಲಾಗಿದ್ದ ಹಸಿರು ಕರ್ನಾಟಕ, ರೋಟರಿ ಕೋಟಿ- ನಾಟಿ ಕಾರ್ಯಾಗಾರದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷರು ಹಾಗೂ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳನ್ನುದ್ದೇಶಿಸಿ ನಿವೃತ್ತ ಐಎಎಸ್ ಅಧಿಕಾರಿ ಕೆ.ಅಮರನಾರಾಯಣ ಮಾತನಾಡಿದರು.
ತಾಲ್ಲೂಕಿನಾದ್ಯಂತ ವರ್ಷಕ್ಕೆ ಒಂದು ಕೋಟಿ ಸಸಿ ನೆಡುವ ಕಾರ್ಯಕ್ಕೆ ಗ್ರಾಮ ಪಂಚಾಯಿತಿ ಜನಪ್ರತಿನಿಧಿಗಳು ಮತ್ತು ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಹೆಚ್ಚು ಒತ್ತು ನೀಡಬೇಕು ಎಂದು ಅವರು ತಿಳಿಸಿದರು.
ಇದೀಗ ಸರ್ಕಾರ ಜಾರಿಗೊಳಿಸಿರುವ ಹಸಿರು ಕರ್ನಾಟಕದ ಮೂಲ ಉದ್ದೇಶ ಮನೆಗೊಂದು ಮರ, ಊರಿಗೊಂದು ತೋಪು, ತಾಲ್ಲೂಕಿಗೊಂದು ಕಿರು ಅರಣ್ಯ, ಜಿಲ್ಲೆಗೊಂದು ಕಾಡು ನಿರ್ಮಾಣ ಮಾಡುವುದಾಗಿದೆ. ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಆಯಾ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಜನರಿಗೆ ಸಸಿಗಳನ್ನು ನೆಡುವ ಬಗ್ಗೆ ಮನವರಿಕೆ ಮಾಡಿಕೊಡುವ ಮೂಲಕ ಅವರನ್ನೆಲ್ಲಾ ಸೇರಿಸಿಕೊಂಡು ಕೋಟಿ ನಾಟಿ ಕಾರ್ಯಕ್ರಮ ಯಶಸ್ವಿಗೊಳಿಸುವ ಮೂಲಕ ಬಯಲು ಸೀಮೆ ಬಾಗವನ್ನು ಹಸಿರು ಸೀಮೆಯನ್ನಾಗಿಸಬೇಕು ಎಂದರು.
ಬಯಲುಸೀಮೆ ಭಾಗದ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಕಳೆದ ಮೂರು ದಶಕಗಳ ಹಿಂದೆ ಪಾಲಾರ್ ಹಾಗೂ ಪಿನಾಕಿನಿ ನದಿ ಹರಿಯುವ ಮೂಲಕ ಈ ಭಾಗದಲ್ಲಿ ನೀರು ಹೇರಳವಾಗಿತ್ತು. ಕಾಲ ಕ್ರಮೇಣ ಅರಣ್ಯ ನಾಶವಾಗುವುದೂ ಸೇರಿದಂತೆ ಅಂತರ್ಜಲ ಕುಸಿದು ಇದೀಗ ಸಾವಿರದೈನೂರು ಅಡಿ ಆಳದಿಂದ ಕೊಳವೆಬಾವಿಗಳ ಮೂಲಕ ನೀರು ತೆಗೆಯುವಂತಾಗಿದೆ. ವರ್ಷಕ್ಕೆ ತಾಲ್ಲೂಕಿನಲ್ಲಿ ಸುಮಾರು ೫೦ ಲಕ್ಷ ಗಿಡ ನೆಟ್ಟು ಪೋಷಿಸಿದ್ದೇ ಆದಲ್ಲಿ ಮುಂಬರುವ ದಿನಗಳಲ್ಲಿ ಕಾಣೆಯಾಗಿರುವ ಪಾಲಾರ್ ಹಾಗೂ ಪಿನಾಕಿನಿ ನದಿಗಳು ಜೀವ ಪಡೆಯುತ್ತವೆ. ಈ ಭಾಗದ ರೈತ ಇಡೀ ದೇಶಕ್ಕೆ ಬೇಕಾಗುವ ಹಾಲು, ತರಕಾರಿಯನ್ನು ಪೂರೈಸಲು ಸಹಕಾರಿಯಾಗುತ್ತದೆ ಎಂದರು.
ಜಿಲ್ಲಾ ಪಂಆಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗುರುದತ್ ಹೆಗಡೆ ಮಾತನಾಡಿ, ಜಿಲ್ಲೆಯಲ್ಲಿಯೇ ಅತಿ ಹೆಚ್ಚು ನರೇಗಾ ಕಾಮಗಾರಿಗಳು ನಡೆಯುವ ತಾಲ್ಲೂಕು ಇದಾಗಿದೆ. ನರೇಗಾ ಯೋಜನೆಯಡಿ ಕೂಲಿ ಆಧಾರಿತ ಕೆಲಸಕ್ಕೆ ಹೆಚ್ಚು ಆದ್ಯತೆ ನೀಡಬೇಕು. ಇದೀಗ ಸರ್ಕಾರ ಜಾರಿಗೊಳಿಸಿರುವ ಹಸಿರು ಕನಾಟಕ ಯೋಜನೆಯಡಿ ಸಸಿಗಳನ್ನು ನೆಡಲು ಹಾಗೂ ನರೇಗಾ ಯೋಜನೆಯ ಬಳಕೆಯ ಬಗ್ಗೆ ಜನರಿಗೆ ಮವರಿಕೆ ಮಾಡಿಕೊಡುವ ಕೆಲಸವನ್ನು ಆಯಾ ಗ್ರಾಮ ಪಂಚಾಯಿತಿ ಅಧ್ಯಕ್ಷರು ಹಾಗೂ ಪಿಡಿಓಗಳು ಮಾಡಬೇಕು ಎಂದರು.
ತಾಲ್ಲೂಕು ಪಂಚಾಯಿತಿ ಇಓ ಎಂ.ವೆಂಕಟೇಶ್, ರೋಟರಿ ಆರ್ಚಡ್ಸ್‌ನ ಅಧ್ಯಕ್ಷ ರೊ.ರವಿಶಂಕರ್, ಎಸಿಎಫ್ ಸುರೇಶ್‌ಬಾಬು, ನರೇಗಾ ಸಹಾಯಕ ನಿರ್ದೇಶಕ ಶ್ರೀನಾಥಗೌಡ, ಗ್ರಾಮ ಪಂಚಾಯಿತಿ ಅಧ್ಯಕ್ಷರು ಹಾಗೂ ಪಿಡಿಓಗಳು ಹಾಜರಿದ್ದರು.

error: Content is protected !!