Home News ವಾಸವಿ ಕನ್ಯಕಾಪರಮೇಶ್ವರಿ ದೇವಾಲಯದ ಸುವರ್ಣ ಪ್ರತಿಷ್ಠಾಪನಾ ವಾರ್ಷಿಕೋತ್ಸವ

ವಾಸವಿ ಕನ್ಯಕಾಪರಮೇಶ್ವರಿ ದೇವಾಲಯದ ಸುವರ್ಣ ಪ್ರತಿಷ್ಠಾಪನಾ ವಾರ್ಷಿಕೋತ್ಸವ

0

29jan3
ವಾಸವಿ ದೇವಾಲಯದಲ್ಲಿರುವ ವಾಸವಿ ಕನ್ಯಕಾಪರಮೇಶ್ವರಿ ದೇವಿಗೆ ಬೆಳ್ಳಿಯ ವಜ್ರಾಂಗಿ ಅಲಂಕಾರ ಮಾಡಲಾಗಿತ್ತು.

ನಗರದ ವಾಸವಿ ರಸ್ತೆಯಲ್ಲಿರುವ ವಾಸವಿ ಕನ್ಯಕಾಪರಮೇಶ್ವರಿ ದೇವಾಲಯದ ೫೦ ನೇ ಸುವರ್ಣ ಪ್ರತಿಷ್ಠಾಪನಾ ವಾರ್ಷಿಕೋತ್ಸವ ಕಾರ್ಯಕ್ರಮವನ್ನು ಬುಧವಾರ ಅದ್ದೂರಿಯಾಗಿ ನೆರವೇರಿಸಲಾಯಿತು.
ಆರ್ಯವೈಶ್ಯಮಂಡಳಿ, ವಾಸವಿ ಮಹಿಳಾ ಮಂಡಳಿ, ವಾಸವಿ ಯುವಜನ ಸಂಘ ವತಿಯಿಂದ ನಗರದ ಪುರಾತನ ದೇವಾಲಯವಾದ ವಾಸವಿ ಕನ್ಯಕಾಪರಮೇಶ್ವರಿ ದೇವಾಲಯದಲ್ಲಿ ಮಂಗಳವಾರ ಹಾಗು ಬುಧವಾರ ಎರಡು ದಿನಗಳ ಕಾಲ ಹಮ್ಮಿಕೊಳ್ಳಲಾಗಿದ್ದ ೫೦ ನೇ ವರ್ಷದ ಸುವರ್ಣ ಮಹೋತ್ಸವ ಕಾರ್ಯಕ್ರಮದಲ್ಲಿ ಗಣಪತಿ ಪೂಜೆ, ವೇದಸ್ವಸ್ತಿ ಹಾಗೂ ‘ಮೂಲ ವಿಗ್ರಹಗಳಿಗೆ ಮಹಾಸ್ನಪನ’ ಅಲಂಕಾರ, ನಿತ್ಯ ಕಳಸಾರಾಧನೆ, ನಿತ್ಯಹೋಮ, ದುರ್ಗಾಸಪ್ತಶತಿ ಪಾರಾಯಣ, ದುರ್ಗಾಮಂಡಲ ಪೂಜೆ ಮತ್ತು ‘ಮಹಾ ಚಂಡಿಕಾಯಾಗ’ ಬಲಿಹರಣ,ಮಹಾಪೂರ್ಣಾಹುತಿ, ಕುಮಾರಿಪೂಜೆ, ಸುಹಾಸಿನಿ ಪೂಜೆ, ದಂಪತಿ ಪೂಜೆ ಹಾಗೂ ಗೋಮೂಲ್ಯಾದಿ ದಶದಾನಗಳು, ಮಹಾಕುಂಭ ಉತ್ತಾಪನೆ, ಮಹಾಕುಂಭಾಭಿಷೇಕ, ಮಹಾಮಂಗಳಾರತಿ, ತೀರ್ಥಪ್ರಸಾದ ವಿನಿಯೋಗ ನಡೆಯಿತು.
ಆರ್ಯವೈಶ್ಯ ಜನಾಂಗದ ತವರುಮನೆಯ ಹೆಣ್ಣುಮಕ್ಕಳಿಗೆ ‘ಮಡಿಲು ತುಂಬುವ’ ಕಾರ್ಯಕ್ರಮ ಕೂಡ ನಡೆಯಿತು. ಸಂಜೆ ಊರಿನ ಪ್ರಮುಖ ಬೀದಿಗಳಲ್ಲಿ ವಾಸವಿ ಕನ್ಯಕಾಪರಮೇಶ್ವರಿ ದೇವಿಯವರ ಹೂವಿನ ಪಲ್ಲಕ್ಕಿ ಉತ್ಸವ ನೆರವೇರಿತು.
ಶಾಸಕ ಎಂ.ರಾಜಣ್ಣ, ವಿಧಾನಪರಿಷತ್ ಸದಸ್ಯ ಶರವಣನ್, ಜಿಲ್ಲಾ ಪಂಚಾಯತಿ ಸದಸ್ಯೆ ಶಿವಲೀಲಾ ರಾಜಣ್ಣ, ಕರ್ನಾಟಕ ಆರ್ಯವೈಶ್ಯ ಮಹಾಸಭಾ ಅಧ್ಯಕ್ಷ ಆರ್.ಪಿ.ರವಿಶಂಕರ್, ಆರ್ಯವೈಶ್ಯ ಮಂಡಳಿಯ ಗೌರವಾಧ್ಯಕ್ಷ ವಿ.ರಾಧಾಕೃಷ್ಣಯ್ಯಶೆಟ್ಟಿ, ಅಧ್ಯಕ್ಷ ಎಲ್.ವಿ.ವಿ.ಗುಪ್ತ, ಎ.ಜಿ.ನಾಗೇಂದ್ರ, ಎ.ಎನ್.ಬದ್ರಿನಾಥ್, ಕೆ.ವಿ.ಲಕ್ಷ್ಮೀಪ್ರಸಾದ್, ಟಿ.ಎಸ್.ಸುರೇಶ್ಬಾಬು, ಎ.ಎನ್.ಮುರಳಿಕೃಷ್ಣ, ಆರ್ಯವೈಶ್ಯ ಯುವಜನಸಂಘದ ಗೌರವಾಧ್ಯಕ್ಷ ವಿ.ರಾಜೇಂದ್ರಪ್ರಸಾದ್, ಅಧ್ಯಕ್ಷ ಎ.ಎನ್.ಕೇದಾರಿನಾಥ್, ಮಹಿಳಾ ಮಂಡಳಿ ಅಧ್ಯಕ್ಷೆ ಗಜಲಕ್ಷ್ಮಿ ಮತ್ತಿತರರು ಪೂಜಾ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.