Home News ವಿದ್ಯಾರ್ಥಿಗಳು ವೈಜ್ಞಾನಿಕ ಮನೋಭಾವನೆಯನ್ನು ಬೆಳೆಸಿಕೊಳ್ಳಲು ಕರೆ

ವಿದ್ಯಾರ್ಥಿಗಳು ವೈಜ್ಞಾನಿಕ ಮನೋಭಾವನೆಯನ್ನು ಬೆಳೆಸಿಕೊಳ್ಳಲು ಕರೆ

0

ರಾಷ್ಟ್ರೀಯ ವಿಜ್ಞಾನ ದಿನದ ಅಂಗವಾಗಿ ಚೀಮಂಗಲದ ಸರ್ಕಾರಿ ಪ್ರೌಢಶಾಲೆಯಲ್ಲಿ ವಿಜ್ಞಾನ ವಸ್ತು ಪ್ರದರ್ಶನ ಹಾಗೂ ವಿಜ್ಞಾನಿಯೊಂದಿಗೆ ಸಂವಾದ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
2mar6ಬೆಂಗಳೂರಿನ ಸೋಲಾರ್ ವಿಜ್ಞಾನಿ ಸಜ್ಜಾದ್ ಅಹವಮದ್‍ರವರು ವಸ್ತುಪ್ರದರ್ಶನವನ್ನು ಉದ್ಘಾಟಿಸಿ ಮಾತನಾಡುತ್ತಾ, ವಿದ್ಯಾರ್ಥಿಗಳು ವೈಜ್ಞಾನಿಕ ಮನೋಭಾವನೆಯನ್ನು ಬೆಳೆಸಿಕೊಳ್ಳಿ, ಪ್ರತಿಯೊಂದು ವಿಷಯದ ಏಕೆ, ಏನು? ಹೇಗೆ? ಎಂಬುವುದನ್ನು ಪ್ರಾರಂಭಿಸಿ, ಆಗ ನೀವು ಸಹ ವಿಜ್ಞಾನಿಯಾಗಬಹುದು ಎಂದರು. ತಾವು ತಯಾರಿಸಿದ್ದ ಸೋಲಾರ್ ಕಾರನ್ನು ಮಕ್ಕಳಿಗೆ ಪ್ರದರ್ಶಿಸಿದರು. ನಂತರ ಅದರ ಬಗ್ಗೆ ಸಂವಾದವನ್ನು ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮದಲ್ಲಿ ಶಿಕ್ಷಕರಾದ ದೊಡ್ಡನಾಯ್ಕ ಪ್ರಾಸ್ಥಾವಿಕವಾಗಿ ಮಾತನಾಡಿದರು, ಸರ್.ಸಿ.ವಿ. ರಾಮನ್‍ರವರ ಬಗ್ಗೆ ಶಿಕ್ಷಕರಾದ ಶ್ರೀನಿವಾಸ್ ಮಾಹಿತಿ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮುಖ್ಯೋಪಾಧ್ಯಾಯರಾದ ಶಿವಶಂಕ ವಹಿಸಿ ಮಾತನಾಡುತ್ತಾ ಈ ವರ್ಷ ‘ರಾಷ್ಟ್ರೀಯ ವಿಜ್ಞಾನ ದಿನ’ ಮಹತ್ವದ್ದಾಗಿದ್ದು, 2015ರ ಧ್ಯೇಯವಾಕ್ಯ, “ರಾಷ್ಟ್ರ ನಿರ್ಮಾಣ ವಿಜ್ಞಾನ” ವಾಗಿದ್ದು ವಿದ್ಯಾರ್ಥಿಗಳು ಮುಂದಿನ ವರ್ಷಗಳಲ್ಲಿ ವಿಜ್ಞಾನ ವಿಷಯಕ್ಕೆ ಹೆಚ್ಚಿನ ಆದ್ಯತೆ ನೀಡಿ, ನವ ಭಾರತ ನಿರ್ಮಾತೃಗಳಾಗಬೇಕು ಎಂದರು. ಮುಖ್ಯ ಅತಿಥಿಗಳಾಗಿ ಶ್ರೀಯುತ ಮೋಹನ್‍ರವರು ಆಗಮಿಸಿದ್ದು, ಶಿಕ್ಷಕರಾದ ಭವ್ಯರವರು, ಸ್ವಾಗತಿಸಿದರು, ಸವಿತರವರು ವಂದಿಸಿದರು. ಶಿಕ್ಷಕ ಎಂ.ಶಿವಕುಮಾರ್ ಕಾರ್ಯಕ್ರಮವನ್ನು ನಿರೂಪಿಸಿದರು.