Home News ವಿದ್ಯುತ್ ಶಾರ್ಟ್ ಸರ್ಕೀಟ್ ನಿಂದಾಗಿ ರೇಷ್ಮೆ ಹುಳು ಸಾಕಾಣಿಕಾ ಶೆಡ್ ಬೆಂಕಿಗೆ ಆಹುತಿ

ವಿದ್ಯುತ್ ಶಾರ್ಟ್ ಸರ್ಕೀಟ್ ನಿಂದಾಗಿ ರೇಷ್ಮೆ ಹುಳು ಸಾಕಾಣಿಕಾ ಶೆಡ್ ಬೆಂಕಿಗೆ ಆಹುತಿ

0

ತಾಲ್ಲೂಕಿನ ನಾಗಮಂಗಲ ಗ್ರಾಮದಲ್ಲಿ ವಿದ್ಯುತ್ ಶಾರ್ಟ್ ಸರ್ಕೀಟ್ ನಿಂದಾಗಿ ಗ್ರಾಮ ಪಂಚಾಯಿತಿ ಅದ್ಯಕ್ಷೆ ರೂಪ ಶಿವಕುಮಾರ್ ಅವರ ರೇಷ್ಮೆ ಹುಳು ಸಾಕಾಣಿಕಾ ಶೆಡ್ ಬೆಂಕಿಗೆ ಆಹುತಿಯಾಗಿದೆ.
“ಸುಮಾರು ೪೫೦ ಚಂದ್ರಂಕಿಗಳನ್ನು ಇಟ್ಟಿದ್ದೆವು. ೪೦೦ ರೇಷ್ಮೆ ಮೊಟ್ಟೆಗಳನ್ನು ಮೇಯಿಸಿದ್ದು ಇವತ್ತು ಗೂಡು ಬಿಡಿಸಿ ನಾಳಿದ್ದು ಮಾರುಕಟ್ಟೆಗೆ ತೆಗೆದುಕೊಂಡು ಹೋಗಬೇಕಿತ್ತು. ಮಧ್ಯರಾತ್ರಿಯಲ್ಲಿ ವಿದ್ಯುತ್ ಶಾರ್ಟ್ ಸರ್ಕೀಟ್ ನಿಂದಾಗಿ ಬೆಂಕಿ ಹೊತ್ತಿಕೊಂಡಿದೆ. ಗ್ರಾಮಸ್ಥರು ಮದುವೆಗೆಂದು ಹೋಗಿ ತಡವಾಗಿ ಬಂದವರು ನೋಡಿ ವಿಷಯ ಮುಟ್ಟೀಸಿದರು. ತಕ್ಷಣವೇ ಅಗ್ನಿಶಾಮಕದಳದವರಿಗೆ ವಿಷಯ ಮುಟ್ಟಿಸಿದೆವು. ಅವರು ಬರುವಷ್ಟರಲ್ಲಿ ಪೂರ್ತಿ ಸುಟ್ಟು ಹೋಗಿತ್ತು. ಶೆಡ್ ಕೂಡ ಜಖಂ ಆಗಿದೆ. ಸುಮಾರು ೧೨ ಲಕ್ಷ ರೂಗಳಷ್ಟು ನಷ್ಟವಾಗಿದೆ” ಎಂದು ಶಿವಕುಮಾರ್ ತಿಳಿಸಿದರು.

error: Content is protected !!