Home News ವಿವಿಧ ವಿಷಯಗಳಲ್ಲಿ ಶೇಕಡಾ ನೂರರಷ್ಟು ಅಂಕ ಪಡೆದ ವಿದ್ಯಾರ್ಥಿಗಳು

ವಿವಿಧ ವಿಷಯಗಳಲ್ಲಿ ಶೇಕಡಾ ನೂರರಷ್ಟು ಅಂಕ ಪಡೆದ ವಿದ್ಯಾರ್ಥಿಗಳು

0

ತಾಲ್ಲೂಕಿನ ಮಳ್ಳೂರು ಸ್ವಾಮಿ ವಿವೇಕಾನಂದ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳಲ್ಲಿ ಕೆಲವರು ಕೆಲ ವಿಷಯಗಳಲ್ಲಿ ಶೇಕಡಾ ನೂರರಷ್ಟು ಅಂಕಗಳನ್ನು ಗಳಿಸಿದ್ದಾರೆ.
ಸಿ.ಆರ್.ವಂದನಾ ಮತ್ತು ಬಿ.ಎಸ್.ವರ್ಷ ಕನ್ನಡದಲ್ಲಿ 100, ಬಿ.ಎಸ್.ಕಿರಣ್ ಜೀವಶಾಸ್ತ್ರದಲ್ಲಿ 100, ಡಿ.ಮಧುಶ್ರೀ, ಎಂ.ವಿ.ಪದ್ಮಶ್ರೀ, ಎಚ್.ಶಾಲಿನಿ, ಎಂ.ಶಂಕರ್ ಮತ್ತು ಎಚ್.ಟಿ.ಮಲ್ಲಿಕಾ ಬಿಸಿನೆಸ್ ಸ್ಟಡೀಸ್ನಲ್ಲಿ 100, ಡಿ.ಎಂ.ಮೇಘನಾ ಭೌತಶಾಸ್ತ್ರದಲ್ಲಿ 100 ಅಂಕಗಳನ್ನು ಪಡೆದಿದ್ದರೆ, ಎಂ.ತನುಶ್ರೀ ಬಿಸಿನೆಸ್ ಸ್ಟಡೀಸ್, ಅಕೌಂಟೆನ್ಸಿ ಮತ್ತು ಕಂಪ್ಯೂಟರ್ ಸೈನ್ಸ್ ಮೂರು ವಿಷಯಗಳಲ್ಲಿ 100ಕ್ಕೆ 100 ಅಂಕಗಳನ್ನು ಗಳಿಸಿದ್ದಾರೆ.

error: Content is protected !!