ನಗರದ ತಾಲ್ಲೂಕು ಕಛೇರಿಯ ಮುಂದೆ ಶನಿವಾರ ವಿವಿಧ ಸಂಘಟನೆಗಳ ಸದಸ್ಯರು ಪೊಲೀಸ್ ಸಿಬ್ಬಂದಿಯ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಧರಣಿಯನ್ನು ನಡೆಸಿ ಮನವಿ ಪತ್ರವನ್ನು ಗ್ರೇಡ್ 2 ತಹಶೀಲ್ದಾರ್ ವಾಸುದೇವಮೂರ್ತಿ ಅವರಿಗೆ ಸಲ್ಲಿಸಿದರು.
ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ, ಯೂನಿಟಿ ಸಿಲ್‌ಸಿಲಾ ಫೌಂಡೇಶನ್, ಟಿಪ್ಪು ಸೆಕ್ಯುಲರ್ ಸೇನಾ, ಸಮಾನ ಮನಸ್ಕರ ವೇದಿಕೆ, ಕರ್ನಾಟಕ ರಕ್ಷಣಾ ವೇದಿಕೆ, ಸಿ.ಐ.ಟಿ.ಯು ಮತ್ತು ಯೂತ್ ಕಾಂಗ್ರೆಸ್ ಸಂಘಟನೆಗಳ ಸದಸ್ಯರು ಪೊಲೀಸರನ್ನು ಬೆಂಬಲಿಸಿ ಸರ್ಕಾರಕ್ಕೆ ಮನವಿಯನ್ನು ಸಲ್ಲಿಸಿದರು.
ಪೊಲೀಸರು ಸಮಯದ ಹಂಗಿಲ್ಲದೆ ನಾಗರಿಕರ ಪ್ರಾಣ, ಆಸ್ತಿ ರಕ್ಷಣೆಯ ಕಾರ್ಯದಲ್ಲಿ ನಿರತರಾಗಿದ್ದಾರೆ. ತಮ್ಮ ಕರ್ತವ್ಯದ ನಿರ್ವಹಣೆಯಲ್ಲಿ ಹಲವು ಪೊಲೀಸ್ ಸಿಬ್ಬಂದಿ ಪ್ರಾಣವನ್ನೂ ತ್ಯಜಿಸಿದ್ದಾರೆ. ಈಚಿನ ದಿನಗಳಲ್ಲಿ ರಾಜ್ಯದ ಪೊಲೀಸ್ ಇಲಾಖೆ ವೇತನ ತಾರತಮ್ಯ, ಸತತ ದುಡಿಮೆ, ತೀವ್ರ ದೈಹಿಕ ಮತ್ತು ಮಾನಸಿಕ ಹಿಂಸೆ, ಕೆಲಸದ ಒತ್ತಡ ಮುಂತಾದ ಹಲವು ಸಮಸ್ಯೆಗಳಿಂದ ನರಳುತ್ತಿದ್ದಾರೆ. ಎಷ್ಟೋ ಬಾರಿ ಈ ಬಗ್ಗೆ ಸರ್ಕಾರದ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ. ಈ ಬಗ್ಗೆ ಸರ್ಕಾರ ಈಗಲಾದರೂ ಎಚ್ಚೆತ್ತು, ಪೊಲೀಸ್ ಸಿಬ್ಬಂದಿಯ ಬೇಡಿಕೆಗಳನ್ನು ಮಾನವೀಯ ದೃಷ್ಟಿಯಿಂದ ಬಗೆಹರಿಸಬೇಕೆಂದು ಮನವಿಯಲ್ಲಿ ಕೋರಿದರು.
ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ ಅಧ್ಯಕ್ಷ ರವಿಪ್ರಕಾಶ್, ಪ್ರತೀಶ್, ಮುನಿಕೆಂಪಣ್ಣ, ಯೂನಿಟಿ ಸಿಲ್‌ಸಿಲಾ ಫೌಂಡೇಶನ್ ಅಧ್ಯಕ್ಷ ಮಹಮ್ಮದ್ ಅಸದ್, ಅಕ್ರಮ್ ಪಾಷ, ವಸೀಮ್‌ಪಾಷ, ಇಮ್ತಿಯಾಜ್ ಪಾಷ, ಟಿಪ್ಪು ಸೆಕ್ಯುಲರ್ ಸೇನಾ ಅಧ್ಯಕ್ಷ ಎಂ.ಮೌಲಾ, ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಮುನಿರಾಜು ಕುಟ್ಟಿ, ಸಿ.ಐ.ಟಿ.ಯು ಸಂಘಟನೆಯ ಲಕ್ಷ್ಮೀದೇವಮ್ಮ, ಸುದರ್ಶನ್, ಯೂತ್ ಕಾಂಗ್ರೆಸ್ ಅಧ್ಯಕ್ಷ ಸಾದಿಕ್, ಪ್ರದೀಪ್, ನಾಗನರಸಿಂಹ, ರವಿ, ನರಸಿಂಹ, ಗಂಗರಾಜು ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.
- Advertisement -
- Advertisement -
- Advertisement -