Home News ವ್ಯಾಪಾರ ವ್ಯವಹಾರ ಪಾರದರ್ಶಕವಾಗಿರಲಿ: ವಾಣಿಜ್ಯ ತೆರಿಗೆ ಸಹಾಯಕ ಆಯುಕ್ತ ಫಣಿರಾಜ್

ವ್ಯಾಪಾರ ವ್ಯವಹಾರ ಪಾರದರ್ಶಕವಾಗಿರಲಿ: ವಾಣಿಜ್ಯ ತೆರಿಗೆ ಸಹಾಯಕ ಆಯುಕ್ತ ಫಣಿರಾಜ್

0

ಸರಕು ಮತ್ತು ಸೇವೆಗಳ ತೆರಿಗೆ(ಜಿಎಸ್‌ಟಿ) ಕುರಿತು ವಿನಾಕಾರಣ ಆತಂಕ ಬೇಡ. ಹಂತ ಹಂತವಾಗಿ ನಿಮ್ಮ ಎಲ್ಲ ಅನುಮಾನ, ಸಮಸ್ಯೆಗಳಿಗೂ ಪರಿಹಾರ ಸಿಗಲಿದೆ ಎಂದು ವಾಣಿಜ್ಯ ತೆರಿಗೆ ಇಲಾಖೆಯ ಸಹಾಯಕ ಆಯುಕ್ತ ಫಣಿರಾಜ್ ತಿಳಿಸಿದರು.
ಶ್ರೀನಿವಾಸ್ ಅಸೊಸಿಯೇಟ್ಸ್, ವಾಣಿಜ್ಯ ತೆರಿಗೆ ಇಲಾಖೆ ಸಹಯೋಗದಲ್ಲಿ ನಗರದ ವಾಸವಿ ಕಲ್ಯಾಣ ಮಂಟಪದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಜಿಎಸ್‌ಟಿ ಕಾರ್ಯಾಗಾರದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಜಿಎಸ್‌ಟಿಯಿಂದ ಹೆಚ್ಚಿನ ವ್ಯತ್ಯಾಸವೇನು ಆಗದು, ಕೆಲವೊಂದು ಸರಕು, ಸೇವೆಗಳ ಮೇಲೆ ತೆರಿಗೆ ಪ್ರಮಾಣ ಹೆಚ್ಚಿದರೆ ಕೆಲವೊಂದು ಸರಕು ಸೇವೆಗಳ ಮೇಲಿನ ತೆರಿಗೆ ಕಡಿಮೆ ಆಗಲಿದೆ. ಅತಿ ಹೆಚ್ಚಿನ ವ್ಯತ್ಯಾಸವೇನು ಆಗದು, ವಿನಾಕಾರಣ ಆತಂಕಪಡುವ ಅಗತ್ಯ ಇಲ್ಲ ಎಂದರು.
ಇಲಾಖೆಯಿಂದ ಮುಂದಿನ ದಿನಗಳಲ್ಲಿ ಹಂತ ಹಂತವಾಗಿ ಜಿಎಸ್‌ಟಿ ಕುರಿತು ಅರಿವು ಮೂಡಿಸಲಾಗುವುದು, ಸಂಬಂಧಿಸಿದ ಅಧಿಕಾರಿಗಳಿಂದ ಸುತ್ತೋಲೆಗಳನ್ನು ತಲುಪಿಸಲಾಗುವುದು. ಮನಸಿನಲ್ಲಿ ಅನುಮಾನಗಳನ್ನು ಇಟ್ಟುಕೊಂಡು ವಿನಾಕಾರಣ ಸಮಸ್ಯೆಗೆ ಸಿಲುಕಬೇಡಿ ಎಂದರು.
ಯಾವುದೇ ಸಮಸ್ಯೆ ಇದ್ದರೂ ಅದನ್ನು ಬಗೆಹರಿಸಿಕೊಂಡು ಪಾರದರ್ಶಕವಾದ ವ್ಯವಹಾರ, ವ್ಯಾಪಾರ ಮಾಡಿ, ಸರ್ಕಾರಕ್ಕೆ ಸೂಕ್ತವಾದ ತೆರಿಗೆ ಕಟ್ಟಿ, ದೇಶದ ಅಭಿವೃದ್ಧಿಗೆ ಕೈಜೋಡಿಸಿ ಎಂದು ಮನವಿ ಮಾಡಿದರು.
ಸಭೆಯಲ್ಲಿ ಭಾಗವಹಿಸಿದ್ದ ನಗರ ಸೇರಿದಂತೆ ತಾಲ್ಲೂಕಿನಿಂದ ಆಗಮಿಸಿದ್ದ ವರ್ತಕರು ಜಿಎಸ್‌ಟಿ ಕುರಿತು ತಮ್ಮಲ್ಲಿನ ಅನುಮಾನಗಳನ್ನು ಕೇಳಿ ಪರಿಹರಿಸಿಕೊಂಡರು.
ವಾಣಿಜ್ಯ ತೆರಿಗೆ ಇಲಾಖೆಯ ಅಧಿಕಾರಿಗಳಾದ ಮುನೀಂದ್ರಪ್ಪ, ಶ್ರೀಧರ್‌ರೆಡ್ಡಿ, ಆಡಿಟರ್ ಶ್ರೀನಿವಾಸ್, ಕೃಷ್ಣಯ್ಯಶೆಟ್ಟಿ, ಎಸ್‌ಎಲ್‌ವಿ ಪ್ರಸಾದ್, ಮಹೇಶ್ ಹಾಜರಿದ್ದರು.