Home News ಶಾಲೆಗೆ ತರಲು ಮಕ್ಕಳ ಮನೆಗಳ ಮುಂದೆ ಧರಣಿ – Education Quest, Sidlaghatta

ಶಾಲೆಗೆ ತರಲು ಮಕ್ಕಳ ಮನೆಗಳ ಮುಂದೆ ಧರಣಿ – Education Quest, Sidlaghatta

0

Education quest from school children of Anemadugu Govt School promoting admission to schools.
ತಾಲ್ಲೂಕಿನ ಆನೆಮಡುಗು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಶಾಲೆಯಿಂದ ಹೊರಗುಳಿದ ಮಕ್ಕಳನ್ನು ಶಾಲೆಗೆ ತರಲು ಅವರ ಮನೆಗಳ ಮುಂದೆ ಧರಣಿ ನಡೆಸಿದರು.
ಶಾಲೆಯ ಎಂಟು ಮಕ್ಕಳು ಧೀರ್ಘ ಗೈರು ಹಾಜರಾಗಿದ್ದುದರಿಂದ ಒಂದರಿಂದ ಎಂಟನೇ ತರಗತಿಯ 200 ಮಕ್ಕಳು ಗ್ರಾಮದಲ್ಲೆ ಜಾಥಾ ನಡೆಸಿ, ಘೋಷಣೆಗಳನ್ನು ಕೂಗುತ್ತಾ ಗೂರುಹಾಜರಾದ ಮಕ್ಕಳ ಮನೆಯ ಮುಂದೆ ಧರಣಿ ನಡೆಸಿದರು.
‘ದಾಖಲಾತಿ ಆಂಧೋಲನಕ್ಕೆ ಜಯವಾಗಲಿ’, ‘ಬಾ ಬಾ ಶಾಲೆಗೆ’, ‘ಕಳಿಸಿ ಕಳಿಸಿ ಶಾಲೆಗೆ ಕಳಿಸಿ’, ‘ಹೆಣ್ಣೊಂದು ಕಲಿತರೆ ಶಾಲೆಯೊಂದು ತೆರೆದಂತೆ’ ಎಂಬ ಘೋಷಣೆಗಳನ್ನು ಕೂಗಿದರು.
ಶಾಲೆಗೆ ಮಕ್ಕಳು ಬರುವವರೆಗೂ ಧರಣಿ ನಡೆಸಿ, ಗೈರು ಹಾಜರಾಗಿದ್ದು, ಮನೆಗೆಲಸ ಮಾಡಿಕೊಂಡಿದ್ದ ಎಂಟು ಮಕ್ಕಳನ್ನು ಶಾಲೆಗೆ ಕರೆದುಕೊಂಡು ಹೋದರು.
ಮುಖ್ಯ ಶಿಕ್ಷಕ ಕೆ.ವಿ.ಪ್ರಕಾಶ್‌ಬಾಬು, ಶಿಕ್ಷಕರಾದ ನಾರಾಯಣಸ್ವಾಮಿ, ವೆಂಕಟರೆಡ್ಡಿ, ಲಕ್ಷ್ಮೀನಾರಾಯಣ, ಹೇಮಲತಾ ಈ ಸಂದರ್ಭದಲ್ಲಿ ಹಾಜರಿದ್ದರು.